ನವದೆಹಲಿ : ಮಹಾಕುಂಭ ಮೇಳ ಇಂದಿನಿಂದ (2025 ಜನವರಿ 13) ಪ್ರಾರಂಭವಾಗಿದೆ. ಸಂಗಮ ದಡದಲ್ಲಿ ನಾಗಾ ಸಾಧುಗಳ ಹಠಯೋಗ, ಸಂತರ ತಪಸ್ಸು, ಭಕ್ತರ ಭಕ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮಧ್ಯೆ ಸಾಧ್ವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮಹಿಳಾ ಪತ್ರಕರ್ತೆ ಮತ್ತು ಸಾಧ್ವಿಯ ನಡುವಿನ ಸಂಭಾಷಣೆಯ ವಿಡಿಯೋ ಇದು. ಅಲಂಕೃತ ರಥದ ಮೇಲೆ ಸಾಧ್ವಿ ಸವಾರಿ ಮಾಡುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಆಕೆ ಎಲ್ಲಿಂದ ಬಂದಿದ್ದಾಳೆ ಮತ್ತು ಸನ್ಯಾಸಿ ಜೀವನದ ಪ್ರಯಾಣ ಹೇಗೆ ಪ್ರಾರಂಭವಾಯಿತು ಎಂದು ಪತ್ರಕರ್ತೆ ಕೇಳುತ್ತಾಳೆ.
ಈ ಕುರಿತು ಸಾಧ್ವಿ ಉತ್ತರಾಖಂಡದಿಂದ ಬಂದಿದ್ದು, ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆ ಎಂದು ಹೇಳುತ್ತಾಳೆ.
ತನ್ನ ವಯಸ್ಸು 30 ವರ್ಷ ಎಂದ ಸಾಧ್ವಿ.!
ಆಕೆಯ ಸೌಂದರ್ಯವನ್ನ ಶ್ಲಾಘಿಸಿದ ಪತ್ರಕರ್ತೆ, ನೀವು ತುಂಬಾ ಸುಂದರವಾಗಿದ್ದರೂ ಏಕೆ ತ್ಯಜಿಸುವ ಜೀವನವನ್ನ ಆರಿಸಿಕೊಂಡಿರಿ ಎಂದು ಕೇಳಿದಾಗ, “ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ. ಈಗ ನಾನು ಈ ಜೀವನದಲ್ಲಿ ಶಾಂತಿಯನ್ನ ಕಂಡುಕೊಂಡಿದ್ದೇನೆ” ಎಂದು ಸಾಧ್ವಿ ಉತ್ತರಿಸಿದರು. ಇದಾದ ನಂತರ ಸಾಧ್ವಿ ತನ್ನ ವಯಸ್ಸು 30 ವರ್ಷ ಎಂದು ಹೇಳಿಕೊಂಡಿದ್ದು, ಕಳೆದ ಎರಡು ವರ್ಷಗಳಿಂದ ಸನ್ಯಾಸ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಾಧ್ವಿಯ ತಪಸ್ವಿ ಜೀವನವನ್ನ ಹೊಗಳಿದ್ದು, ಸ್ಫೂರ್ತಿದಾಯಕ ಎಂದು ಕರೆದಿದ್ದಾರೆ. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಪ್ರಶ್ನೆಗಳನ್ನ ಎತ್ತಿದ್ದು, ಸಾಧ್ವಿಯನ್ನ ಕಪಟಿ ಎಂದು ಕರೆದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳು.!
ಒಬ್ಬ ಬಳಕೆದಾರರು, “ಯಾವ ಸಾಧ್ವಿ ಅಷ್ಟೊಂದು ಮೇಕಪ್ ಮಾಡುತ್ತಾರೆ, ಸಹೋದರಿ? ನಿಜವಾದ ಸಾಧ್ವಿಗಳು ಅವರೊಳಗಿನ ಹೊಳಪಿನಿಂದಾಗಿ ಸುಂದರವಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತಾರೆ” ಎಂದು ಬರೆದಿದ್ದಾರೆ. ಇನ್ನೊಬ್ಬರು ವ್ಯಂಗ್ಯವಾಗಿ, “ಚಲ್ ಚಲ್ ದೋಸ್ತ್ ಗಾಡಿ ನಿಕಲ್, ಅಬ್ ಬಾಬಾ ಬಾನೆ ಹೈ” ಎಂದು ಬರೆದ್ದಾರೆ. ಇನ್ನೊಬ್ಬರು 30 ವರ್ಷದ ಹುಡುಗಿಯೊಬ್ಬಳು ಎಲ್ಲವನ್ನೂ ತ್ಯಜಿಸಿ 2 ವರ್ಷಗಳ ಕಾಲ ಸಾಧ್ವಿಯಾಗಿರುವುದನ್ನು ನೋಡಿ ಸಂತೋಷವಾಯಿತು ಎಂದಿದ್ದಾರೆ.
About For Viral Video
महाकुंभ में आई बहुत ही खूबसूरत साध्वी
पत्रकार ने पूछा आप इतनी सुन्दर हैं तो साध्वी क्यों बनीं? pic.twitter.com/dEzhqNfqY6— Shubhangi Pandit (@Babymishra_) January 12, 2025
BIG NEWS: ನಾನು ಕೂಡ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತೆ: ಸಿಎಂ ಸಿದ್ಧರಾಮಯ್ಯ ಅಚ್ಚರಿಯ ಹೇಳಿಕೆ
BIG NEWS : ವಿಕಿಪೀಡಿಯ ಎಡವಟ್ಟು : ಈ ಬಾರಿಯ ‘ಬಿಗ್ ಬಾಸ್ ಸೀಸನ್-11’ ರ ವಿನ್ನರ್-ರನ್ನರ್ ಇವರೇನಾ?!