ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಆಗಸ್ಟ್ 18 ರಂದು, USAನ ಟೆಕ್ಸಾಸ್’ನ ಹೂಸ್ಟನ್’ನಲ್ಲಿ ಭವ್ಯವಾದ ಮಹಾಮಸ್ತಕಾಭಿಷೇಕ ಸಮಾರಂಭವನ್ನ ಆಯೋಜಿಸಲಾಯಿತು, ಇದರಲ್ಲಿ 90 ಅಡಿ ಎತ್ತರದ ಹನುಮಾನ ಪ್ರತಿಮೆಯನ್ನ ಉದ್ಘಾಟಿಸಲಾಯಿತು. ಈ ಪ್ರತಿಮೆಯು ಅಮೆರಿಕಾದಲ್ಲಿ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದ್ದು, ಇದನ್ನು “ಸ್ಟ್ಯಾಚ್ಯೂ ಆಫ್ ಯೂನಿಯನ್” ಅಭಯ ಹನುಮಾನ್ ಎಂದು ಕರೆಯಲಾಗುತ್ತದೆ.
ಈ ಪ್ರತಿಮೆಯನ್ನ ಟೆಕ್ಸಾಸ್’ನ ಶುಗರ್ ಲ್ಯಾಂಡ್’ನ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ. ಈ ಐತಿಹಾಸಿಕ ಯೋಜನೆಯ ಹಿಂದಿರುವ ಚಿಂತಕರು ಶ್ರೀಚಿನ್ನಜೀಯರ ಸ್ವಾಮೀಜಿ. ಈ ಪ್ರತಿಮೆಯು ಶ್ರೀರಾಮ ಮತ್ತು ಸೀತೆಯನ್ನ ಒಂದುಗೂಡಿಸಲು ಸಹಾಯ ಮಾಡುವಲ್ಲಿ ಭಗವಂತ ಹನುಮಂತನ ಪ್ರಮುಖ ಪಾತ್ರವನ್ನು ನೆನಪಿಸುತ್ತದೆ.
ವೀಡಿಯೊ ವೀಕ್ಷಿಸಿ!
Prana pratishtha held today in Houston, Texas for this 90ft tall Hanuman murthi
It is now the 3rd tallest statue in the United States pic.twitter.com/N7sNZaikBF
— Journalist V (@OnTheNewsBeat) August 19, 2024
ಈ ಘಟನೆಯು ಭಾರತೀಯ ಸಮುದಾಯದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನ ತುಂಬಿದೆ. ಪ್ರತಿಮೆಯ ಉದ್ಘಾಟನಾ ಸಮಾರಂಭವನ್ನ ಹೂಸ್ಟನ್’ನಲ್ಲಿ ಐತಿಹಾಸಿಕ ಘಟನೆಯಾಗಿ ನೋಡಲಾಗುತ್ತಿದೆ.
ಆಗಸ್ಟ್ 23ರಂದು ಪ್ರಧಾನಿ ಮೋದಿ ‘ಉಕ್ರೇನ್’ ಭೇಟಿ, “ಇದು ಮಹತ್ವದ ಭೇಟಿಯಾಗಲಿದೆ” ಎಂದ ‘MEA’
BREAKING : ಬೆಂಗಳೂರು : ಬಟ್ಟೆ ಕೊಳ್ಳುವ ವಿಚಾರಕ್ಕೆ ದಂಪತಿಗಳ ಮಧ್ಯ ಗಲಾಟೆ : ಬೆಂಕಿ ಹಚ್ಚಿ ಪತ್ನಿಯನ್ನೇ ಕೊಂದ ಪತಿ!