ದಾವಣಗೆರೆ: ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ತಾವು ರೇಡಿಂಗ್ ಮಾಡಿ, ಚಾಲನೆ ನೀಡಲು ಹೋಗಿ ಆಯತಪ್ಪಿ ಬಿದ್ದು ಉಪ ಸಭಾಪತಿ ರುದ್ರಪ್ಪ ಲಮಾಣಿ ಗಾಯಗೊಂಡಿರುವಂತ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ನ್ಯಾಯಮತಿ ತಾಲ್ಲೂಕಿನ ಸೊರಗೊಂಡನ ಕೊಪ್ಪದಲ್ಲಿ ಸೇವಾಲಾಲ್ ಜಯಂತೋತ್ಸವದ ಪ್ರಯುಕ್ತ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗೆ ಚಾಲನೆ ನೀಡಲು ಆಹ್ವಾನಿಸಲಾಗಿತ್ತು.
ಸೇವಾಲಾಲ್ ಜಯಂತೋತ್ಸವದ ಕಬ್ಬಡಿ ಪಂದ್ಯಾವಳಿ ಚಾಲನೆಗೆ ತೆರಳಿದ್ದಂತ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು ತಾವು ರೇಡಿಂಗ್ ಮಾಡಲು ಹೋಗಿದ್ದರು. ಆ ಮೂಲಕ ಚಾಲನೆ ನೀಡಲು ತೊಡಗಿದರು.
ರೇಡಿಂಗ್ ಮಾಡುವಂತ ಸಂದರ್ಭದಲ್ಲಿ ಆಯತಪ್ಪಿ ಬಿದ್ದಂತ ಅವರ ಕಾಲಿಗೆ ಗಾಯವಾಗಿದೆ. ಅವರನ್ನು ಕೂಡಲೇ ಸ್ಥಳದಲ್ಲಿದ್ದಂತ ಕ್ರೀಡಾಪಟುಗಳು ಹಿಡಿದು ಮೇಲೆತ್ತಿದರು. ಆಯತಪ್ಪಿ ಬಿದ್ದ ಘಟನೆಯಲ್ಲಿ ರುದ್ರಪ್ಪ ಲಮಾಣಿ ಅವರ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಮನೆಗೆ ತೆರಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
BREAKING: ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಮೇಲೆ ಆಟೋ ಚಾಲಕನಿಂದ ಹಲ್ಲೆ: ಕುಸಿದು ಬಿದ್ದು ಸಾವು