Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ BHEL ಕಾರ್ಖಾನೆಗೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಐತಿಹಾಸಿಕ ಭೇಟಿ: HDK ಸಂತಸ
KARNATAKA

ಬೆಂಗಳೂರಿನ BHEL ಕಾರ್ಖಾನೆಗೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಐತಿಹಾಸಿಕ ಭೇಟಿ: HDK ಸಂತಸ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿ (BHEL) ಶನಿವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಉಪ ರಾಷ್ಟ್ರಪತಿಯೊಬ್ಬರು ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ವಿವಿಧ ವಿಭಾಗಗಳಿಗೆ ತೆರಳಿ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಜತೆ ಸಂವಾದ ನಡೆಸಿದರು.

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಧರ್ಮಪತ್ನಿ ಸುದೇಶ್ ಧನಕರ್ ಅವರೊಂದಿಗೆ ಕಾರ್ಖಾನೆಗೆ ಶನಿವಾರ ಭೇಟಿ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳು ಉಪ ರಾಷ್ಟ್ರಪತಿಗಳ ಜತೆಯಲ್ಲಿದ್ದರು.

ಕಾರ್ಖಾನೆಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳನ್ನು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಬರಮಾಡಿಕೊಂಡರು.

ವಿಕಸಿತ ಭಾರತ್ ಕನಸಿಗೆ ಬಿಹೆಚ್ ಇಎಲ್ ಕೊಡುಗೆ: HDK

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಾವು ಸಚಿವರಾಗಿರುವ ಬೃಹತ್ ಕೈಗಾರಿಕೆ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿರುವ ಬಿಹೆಚ್ ಇಎಲ್ ಕಾರ್ಖಾನೆಯ ಬೆಂಗಳೂರು ಘಟಕಕ್ಕೆ ಭೇಟಿ ನೀಡಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಅಡಿಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ. 2047ರ ಹೊತ್ತಿಗೆ ವಿಕಸಿತ ಭಾರತ ಕನಸನ್ನು ನನಸು ಮಾಡುವ ದಿಸೆಯಲ್ಲಿ ಉಪ ರಾಷ್ಟ್ರಪತಿಗಳ ಭೇಟಿ ನಮಗೆಲ್ಲ ಆನೆಬಲ ತಂದು ಕೊಟ್ಟಿದೆ ಎಂದರು.

ವಿಕಸಿತ ಭಾರತ ಕನಸು ಸಾಕಾರಕ್ಕಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಬಿಹೆಚ್ ಇಎಲ್ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದ ಸಚಿವರು; ಉಪ ರಾಷ್ಟ್ರಪತಿಗಳ ಭೇಟಿ ಈ ಕಾರ್ಖಾನೆಯ ಹೆಮ್ಮೆಯನ್ನು ಹೆಚ್ಚಿಸಿದೆ. ಅವರ ಭೇಟಿಯ ಸ್ಫೂರ್ತಿಯೊಂದಿಗೆ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.

ಭಾರತದ ಕೈಗಾರಿಕೆ ಕ್ಷೇತ್ರವು ಸ್ವಾವಲಂಬನೆ ಸಾಧಿಸುವಲ್ಲಿ ಬಿಎಚ್‌ಇಎಲ್‌ನ ನಿರ್ಣಾಯಕ ಪಾತ್ರ ವಹಿಸಿದೆ ಎಂದ ಅವರು; ಖಾಸಗಿ ವಲಯದ ಪ್ರಬಲ ಪೈಪೋಟಿ ನಡುವೆಯೂ ಕಂಪನಿಯು ಬಲಿಷ್ಠವಾಗಿ ನಿಂತಿದೆ ಮತ್ತು ವೇಗಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಇದಕ್ಕೆ ಉದ್ಯೋಗಿಗಳ ನಿರಂತರ ಪರಿಶ್ರಮ ಕಾರಣ, ಅವರಿಗೆ ನನ್ನ ಧನ್ಯವಾದಗಳು ಎಂದು ಕೇಂದ್ರ ಸಚಿವರು ಹೇಳಿದರು.

ಕಾರ್ಯಾದೇಶಗಳ ಮೊತ್ತದ ₹1.7 ಲಕ್ಷ ಕೋಟಿ ದಾಟಿದೆ:

ಕಳೆದ ಹಣಕಾಸು ವರ್ಷದಲ್ಲಿ ನಾವು ₹69,000 ಕೋಟಿ ಮೌಲ್ಯದ ಕಾರ್ಯಾದೇಶಗಳನ್ನು ಬಿಎಚ್‌ಇಎಲ್‌ ಪಡೆದುಕೊಂಡಿದೆ. ಈ ವರ್ಷ ನಮ್ಮ ಕಾರ್ಯಾದೇಶಗಳ ಮೊತ್ತದ ₹1.7 ಲಕ್ಷ ಕೋಟಿ ದಾಟಿದೆ. ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವ, ಆತ್ಮನಿರ್ಭರ, ವಿಕಸಿತ ಭಾರತ್ ಗುರಿಯನ್ನು ಸಾಧಿಸುವಲ್ಲಿ ಕಂಪನಿ ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಿಮ್ಮ ಭೇಟಿಯಿಂದ ನಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಕುಮಾರಸ್ವಾಮಿ ಉಪ ರಾಷ್ಟಪತಿಗಳ ಸಮ್ಮುಖದಲ್ಲಿ ಹೇಳಿದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಬಿಎಚ್‌ಇಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ದಂಪತಿಯನ್ನು ಕೇಂದ್ರ ಸಚಿವರು ಕಂಪನಿಯ ಪರವಾಗಿ ಅತ್ಯಂತ ಗೌರವಪೂರ್ವಕ ಸನ್ಮಾನಿಸಿದರು.

BREAKING: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಕೇಸ್: ಕಾರು ಟಚ್ ಆಗಿದ್ದಕ್ಕೆ ಕಿರಿಕ್

BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer

Share. Facebook Twitter LinkedIn WhatsApp Email

Related Posts

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

1 Min Read

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

2 Mins Read

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

2 Mins Read
Recent News

​’ಕೆಲಸದಿಂದ ವಜಾ’ ಶಿಕ್ಷೆಯು ಕೇವಲ ಗಂಭೀರ ದುರ್ನಡತೆಗೆ ಮಾತ್ರ ಸೀಮಿತವಾಗಿರಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!

State News
KARNATAKA

ಗುರು ಋಣ ಮರೆತಿಲ್ಲ ಈ ಶಿಷ್ಯ: ನಿವೃತ್ತಿ ದಿನವೇ ನೆಚ್ಚಿನ ಶಿಕ್ಷಕನಿಗೆ `ಸ್ವಿಫ್ಟ್ ಕಾರು’ ಗಿಫ್ಟ್ ನೀಡಿದ ವಿದ್ಯಾರ್ಥಿ!

By kannadanewsnow57 KARNATAKA 1 Min Read

ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ…

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

BREAKING: ‘ಮಹಿಳಾ ನೌಕರ’ರಿಗೆ ಲೈಂಗಿಕ ಕಿರುಕುಳ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ವಿರುದ್ಧ FIR ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.