ಕೋಲಾರ: ಕನ್ನಡದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆಯಾಗಿದ್ದು, ಸದ್ಯ ಅವರನ್ನು ಚಿಕಿಯ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಕೋಲಾರದ SNR ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯಿಂದ ಕೋಟಿಗಾನ ಹಳ್ಳಿ ರಾಮಯ್ಯ ಅವರ ಕಣ್ಣು ಊದಿಕೊಂಡಿದ್ದು, ಹಿರಿಯ ಹೋರಾಟಗಾರನ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ, ಚಿಕಿತ್ಸೆ ಆಸ್ಪತ್ರೆಗೆ ದಾಖಲು ‘ಗ್ರಾಮದ ಮಂಜುನಾಥ್, ಭೈರಪ್ಪ ಹಾಗೂ ಸುಬ್ಬು ಎಂಬುವರು ರಾಮಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಜುನಾಥ್‌ನನ್ನು ಬಂಧಿಸಲಾಗಿದೆ’ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ: ಗ್ರಾಮದ ಮುನೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ್ದ ವೇಳೆಯಲ್ಲಿ ಸೌಂಡ್ ಕಡಿಮೆ ಮಾಡುವಂತೆ ರಾಮಯ್ಯ ಮನವಿ ಮಾಡಲು ಹೋಗಿದ್ದ ವೇಳೆಯಲ್ಲಿ ಈ ಹಲ್ಲೆಯನ್ನು ಮಾಡಿದ್ದಾರೆ ಎನ್ನಲಾಗಿದೆ.ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲಿನ ಹಲ್ಲೆಯನ್ನು ಕನ್ನಡ ನ್ಯೂಸ್ ನೌ ಸಂಪಾದಕ ಮಂಡಳಿ ಖಂಡಿಸಿದ್ದು, ಸೂಕ್ತ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಪೊಲೀಸ್ ಇಲಾಖೆಯನ್ನು ಈ ಮೂಲಕ ಒತ್ತಾಯಿಸುತ್ತಿದೆ.