ನವದೆಹಲಿ: ಭಾರತದ ಚರಿತ್ರೆಕಾರ ಮತ್ತು ಮೆಚ್ಚುಗೆ ಪಡೆದ ಲೇಖಕ, ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ ಭಾನುವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಆಪ್ತ ಸ್ನೇಹಿತ ತಿಳಿಸಿದ್ದಾರೆ. ಟುಲ್ಲಿಗೆ 90 ವರ್ಷ ವಯಸ್ಸಾಗಿತ್ತು.
ಪ್ರಶಸ್ತಿ ವಿಜೇತ ಪತ್ರಕರ್ತ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಮಾರ್ಕ್ ಇಂದು ಮಧ್ಯಾಹ್ನ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಟುಲ್ಲಿಯ ಆಪ್ತ ಸ್ನೇಹಿತ ಸತೀಶ್ ಜಾಕೋಬ್ ಪಿಟಿಐಗೆ ತಿಳಿಸಿದರು.
ಅಕ್ಟೋಬರ್ 24, 1935 ರಂದು ಕಲ್ಕತ್ತಾದಲ್ಲಿ (ಈಗ ಕೋಲ್ಕತ್ತಾ) ಜನಿಸಿದ ಟುಲ್ಲಿ, ನವದೆಹಲಿಯ ಬಿಬಿಸಿಯ ಬ್ಯೂರೋದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೆಚ್ಚುಗೆ ಪಡೆದ ಲೇಖಕರಾದ ಟುಲ್ಲಿ ಬಿಬಿಸಿ ರೇಡಿಯೋ 4 ಕಾರ್ಯಕ್ರಮದ ‘ಸಮ್‌ಥಿಂಗ್ ಅಂಡರ್‌ಸ್ಟೂಡ್’ ನ ನಿರೂಪಕರೂ ಆಗಿದ್ದರು.
ಅವರಿಗೆ 2002 ರಲ್ಲಿ ನೈಟ್ ಪದವಿ ನೀಡಲಾಯಿತು ಮತ್ತು 2005 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
ಟಲ್ಲಿ ಅವರು ಭಾರತದ ಕುರಿತು ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’, ‘ಇಂಡಿಯಾ ಇನ್ ಸ್ಲೋ ಮೋಷನ್’ ಮತ್ತು ‘ದಿ ಹಾರ್ಟ್ ಆಫ್ ಇಂಡಿಯಾ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸ್ವಿಮ್ಮಿಂಗ್ ಪೂಲ್ ನಲ್ಲಿ ಮಹಿಳೆ ಶವವಾಗಿ ಪತ್ತೆ: ಪತಿಯಿಂದಲೇ ಕೊಲೆ ಶಂಕೆ








