ಬೆಂಗಳೂರು: ಜುಲೈ 7ರ ನಂತರ ಯುಜಿನೀಟ್ -2025ಕ್ಕೆ ನೋಂದಣಿ ಮತ್ತು ಆನ್ಲೈನ್ ಅರ್ಜಿ ಭರ್ತಿ ಮಾಡಿ, ಶುಲ್ಕ ಪಾವತಿಸಿರುವ (‘ಎ’ಯಿಂದ ‘ಒ’ವರೆಗೆ ಹಾಗೂ ‘ಝಡ್’ ಕ್ಲಾಸ್ ನಡಿ ಸೀಟು ಕ್ಲೇಮು ಮಾಡಿರುವವರು) ಅಭ್ಯರ್ಥಿಗಳು, ವೈದ್ಯಕೀಯ / ದಂತ ವೈದ್ಯಕೀಯ / ಆರ್ಯುವೇದ / ಹೋಮಿಯೋಪತಿ /ಯುನಾನಿ ಕೋರ್ಸುಗಳ ಪ್ರವೇಶಾತಿಗಾಗಿ ಎಲ್ಲಾ ಅಗತ್ಯ ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ, ಬೆಂಗಳೂರು ಇಲ್ಲಿಗೆ ಜುಲೈ 17ರಿಂದ 19ರೊಳಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪ್ರವರ್ಗಗಳಡಿ ಕ್ಲೇಮು ಮಾಡಿರುವವರು, ವಿಶೇಷ ಚೇತನ ಅಭ್ಯರ್ಥಿಗಳು, ‘ಎ’ಯಿಂದ ‘ಒ’ ಹಾಗೂ ‘ಝಡ್’ ಕ್ಲಾಸಿನಡಿ ಕ್ಲೇಮು ಮಾಡಿರುವವರು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಕುರಿತಾದ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಆ ಪ್ರಕಾರ ಹಾಜರಾಗಬೇಕು, ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಯುಜಿಸಿಇಟಿ ಸಂದರ್ಭದಲ್ಲಿಯೇ ನೀಡಲಾಗಿದೆ. ಅಭ್ಯರ್ಥಿಗಳು ಓದಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಕನ್ನಡ ಭಾಷಾ ಪರೀಕ್ಷೆ
ಹೊಸದಾಗಿ ನೋಂದಣಿ ಮಾಡಿರುವ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಜುಲೈ 17ರಂದು ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದೂ ತಿಳಿಸಲಾಗಿದೆ.
ಯುಜಿಸಿಇಟಿ 25: ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ, ಸರ್ವರ್ ಸಮಸ್ಯೆಗೆ ಆತಂಕ ಬೇಡವೆಂದ ಕೆಇಎ
ಗ್ರಾಮ ಪಂಚಾಯ್ತಿ ಅಭಿವೃದ್ದಿಯಾದರೆ, ದೇಶ ಅಭಿವೃದ್ದಿಯಾದಂತೆ: ಶಾಸಕ ಗೋಪಾಲಕೃಷ್ಣ ಬೇಳೂರು