ಬೆಂಗಳೂರು: ರಾಜ್ಯದ ಆರ್‌ಟಿಒ (RTO) ಕಚೇರಿಗಳಲ್ಲಿ ನಡೆಯುತ್ತಿದ್ದ ಎಫ್‌ಸಿ (Fitness Certificate) ಅಕ್ರಮಗಳಿಗೆ ಸಾರಿಗೆ ಇಲಾಖೆ ಈಗ ಬ್ರೇಕ್ ಹಾಕಿದೆ.
ಹೊರರಾಜ್ಯದ ವಾಹನಗಳು ಬೆಂಗಳೂರಿಗೆ ಬರದಿದ್ದರೂ, ಅವುಗಳಿಗೆ ಇಲ್ಲಿನ ಅಧಿಕಾರಿಗಳು ಅಕ್ರಮವಾಗಿ ಅರ್ಹತಾ ಪತ್ರ ನೀಡುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಇಲಾಖೆಯು ‘ಜಿಯೋ ಫೆನ್ಸಿಂಗ್’ (Geo-Fencing) ನಿಯಮವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಏನಿದು ಹೊಸ ರೂಲ್ಸ್?
ಈ ಹಿಂದೆ ವಾಹನಗಳ ಫೋಟೋ ಅಪ್‌ಲೋಡ್ ಮಾಡುವ ಕಡ್ಡಾಯ ನಿಯಮವಿರಲಿಲ್ಲ. ಆದರೆ ಈಗಿನ ಹೊಸ ನಿಯಮದ ಪ್ರಕಾರ:
ಜಿಪಿಎಸ್ ಲೊಕೇಶನ್ ಕಡ್ಡಾಯ: ವಾಹನವು ಆರ್‌ಟಿಒ ಕಚೇರಿಯ ಆವರಣದಲ್ಲಿದ್ದಾಗ ಮಾತ್ರ ಎಫ್‌ಸಿ ಪ್ರಕ್ರಿಯೆ ನಡೆಯಬೇಕು.
6 ಫೋಟೋಗಳ ಅಪ್‌ಲೋಡ್: ವಾಹನದ ಆರು ವಿಭಿನ್ನ ಆಂಗಲ್‌ಗಳ ಜಿಪಿಎಸ್ ಆಧಾರಿತ (Location-tagged) ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ.
ಸ್ಥಳದ ಖಚಿತತೆ: ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಇರುವುದರಿಂದ, ವಾಹನವು ಭೌತಿಕವಾಗಿ ನಿಗದಿತ ಸ್ಥಳದಲ್ಲಿ ಹಾಜರಿದ್ದರೆ ಮಾತ್ರ ಸಿಸ್ಟಮ್ ಎಫ್‌ಸಿ ನೀಡಲು ಅನುಮತಿಸುತ್ತದೆ.








