ಚಿತ್ರದುರ್ಗ: ಭಾನುವಾರದಂದು ನಡೆದಂತ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಗೆ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ವಿ ಚಳ್ಳಕೆರೆ ( ಅಪ್ಪು) ಭರ್ಜರಿ ಗೆಲುವು ಸಾಧಿಸಿ, ಆಯ್ಕೆಯಾಗಿದ್ದಾರೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಣುಖ ಮಾಹಿತಿ ನೀಡಿದ್ದು, ದಿನಾಂಕ 09-11-2025ರಂದು ನಡೆದ 2025-2028ರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ವಿ ಚಳ್ಳಕೆರೆ ಆಯ್ಕೆಯಾಗಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ.
ವೀರೇಶ್ ವಿ ಚಳ್ಳಕೆರೆ ಬಗ್ಗೆ ಮಾಹಿತಿ
ಅಂದಹಾಗೇ ವೀರೇಶ್ ವಿ ಚಳ್ಳಕೆರೆ( ಅಪ್ಪು) ಅವರು ಮಾಧ್ಯಮ ವೃತ್ತಿ ಬದುಕಿನ 15 ವರ್ಷದ ಹಾದಿಯಲ್ಲಿ 3 ವರ್ಷಗಳ ಕಾಲ ಬೆಂಗಳೂರಿನಲ್ಲಿ ಜನಶ್ರೀ ಮತ್ತು ಸುವರ್ಣ ನ್ಯೂಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ 12 ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಸಮಯ ನ್ಯೂಸ್, ಟಿವಿ5 ಕನ್ನಡ, ದಿಗ್ವಿಜಯ, ಈಗ R. ಕನ್ನಡ ಸುದ್ದಿ ವಾಹಿನಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಚಿತ್ರದುರ್ಗ ಜಿಲ್ಲಾಡಳಿತದಿಂದ ಕೊಡ ಮಾಡುವಂತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಳೆದ ಬಾರಿ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದಂತ ಇವರು, ಇದೀಗ 85 ಮತಗಳಲ್ಲಿ 39 ಮತಗಳ ಅಂತರದಿಂದ ಚಿತ್ರದುರ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.
ಹೀಗಿದೆ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪಟ್ಟಿ
- ಅಧ್ಯಕ್ಷರಾಗಿ ಬಿಎಸ್ ವಿನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
- ಉಪಾಧ್ಯಕ್ಷರಾಗಿ ಅಹೋಬಲಪತಿ, ನಾಗ್ತಿಹಳ್ಳಿ ಮಂಜುನಾಥ್, ಸಿ.ಪಿ ಮಾರುತಿ
- ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ವಿ ಚಳ್ಳಕೆರೆ(ಅಪ್ಪು) ಆಯ್ಕೆ
- ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಕೀಕೆರೆ ತಿಪ್ಪೇಸ್ವಾಮಿ, ಪ್ರಜಾವಾಣಿ ಚಂದ್ರಣ್ಣ, ಹೆಚ್.ತಿಪ್ಪೇಸ್ವಾಮಿ ಆಯ್ಕೆ
- ಖಜಾಂಚಿಯಾಗಿ ಡಿ.ಕುಮಾರಸ್ವಾಮಿ
- ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಸಿದ್ದರಾಜು ಆಯ್ಕೆಯಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘KUWJ ಚುನಾವಣಾ’ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರ
KUWJ ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಜಯಣ್ಣ ಬೆಳಗೆರೆ, ಪ್ರಜಾಕಹಣೆ ರಘು ಆಯ್ಕೆ








