ಮಂಗಳೂರು: ಮಂಗಳೂರಿನ ನೀರುಮಾರ್ಗ ಸಮೀಪ ಇರುವ ವೇದಾಂತ ಪಿಯು ಕಾಲೇಜು 2026-27ನೇ ಶೈಕ್ಷಣಿಕ ವರ್ಷದ ಪಿಯು ಬ್ಯಾಚ್ಗಳನ್ನು ಏಪ್ರಿಲ್ 6ರಿಂದ ಆರಂಭಿಸಲಾಗುತ್ತಿದೆ ಎಂದು ಕಾಲೇಜು ಪ್ರಕಟಿಸಿದೆ.
ಪಿಯುಸಿ ಶಿಕ್ಷಣದ ಜೊತೆಗೆ NEET, JEE, CET ಸೇರಿದಂತೆ ಉನ್ನತ ಪ್ರವೇಶ ಪರೀಕ್ಷೆಗಳ ತರಬೇತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಈ ಕಾಲೇಜಿನ ವಿಶೇಷವಾಗಿದೆ. ಸಾಮಾನ್ಯವಾಗಿ ಲಕ್ಷಾಂತರ ಶುಲ್ಕ ವಸೂಲಿ ಮಾಡುವ ಕೋಚಿಂಗ್ ವ್ಯವಸ್ಥೆಗೆ ಪರ್ಯಾಯವಾಗಿ, ಪಿಯು ಶಿಕ್ಷಣದ ಜೊತೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಒದಗಿಸಲಾಗುತ್ತಿದೆ.
ಇತ್ತೀಚೆಗೆ ಬೆಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರವೇಶ ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದೊಂದಿಗೆ ಪ್ರವೇಶ ನೀಡಲಾಗಿದೆ. ಇದೀಗ ಮತ್ತಷ್ಟು ಸೀಟುಗಳಿಗೆ ನೇರ ಪ್ರವೇಶ ಕಲ್ಪಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
1ನೇ ಮತ್ತು 2ನೇ ಪಿಯು ವಿಜ್ಞಾನ ವಿಭಾಗಕ್ಕೆ ಪ್ರವೇಶಗಳು ಮುಕ್ತವಾಗಿವೆ ಎಂದು ಪ್ರವೇಶ ವಿಭಾಗದ ನಿರ್ದೇಶಕರಾದ ರಾಮನಾಥ ತಿಳಿಸಿದ್ದಾರೆ.
ಲಭ್ಯವಿರುವ ಸ್ಟ್ರೀಮ್ಗಳು:
NEET / JEE / CET ಜೊತೆ PCMB
JEE / CET ಜೊತೆ PCMC
ವೇದಾಂತ ಪಿಯು ಕಾಲೇಜು ತನ್ನ ವಿಶಿಷ್ಟ ಶಿಕ್ಷಣ ಪದ್ಧತಿಯ ಮೂಲಕ ಗಮನಸೆಳೆಯುತ್ತಿದ್ದು, ಐಐಟಿ ಪರಿಣಿತರ ಮತ್ತು ವೈದ್ಯರಿಂದ ತರಬೇತಿ, ಫಲಿತಾಂಶ ಆಧಾರಿತ ಪಾಠ, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಸುರಕ್ಷಿತ ಕ್ಯಾಂಪಸ್, ದಿನನಿತ್ಯ ಮಾರ್ಗದರ್ಶಿತ ಅಧ್ಯಯನ ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡುವ ವ್ಯವಸ್ಥೆ ಇದೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಮನಸೆಳೆದಿದೆ.
ಹೆಚ್ಚಿನ ಮಾಹಿತಿಗಾಗಿ 9482662055 ಸಂಖ್ಯೆಗೆ ಸಂಪರ್ಕಿಸಬಹುದು. ಪೋಷಕರು 8050106690 ಸಂಖ್ಯೆಗೆ ಸಂದೇಶ ಕಳುಹಿಸಬಹುದು ಅಥವಾ ನೇರವಾಗಿ ಮಂಗಳೂರಿನ ನೀರುಮಾರ್ಗ ಸಮೀಪ ಇರುವ ಕ್ಯಾಂಪಸ್ಗೆ ಭೇಟಿ ನೀಡಬಹುದು ಎಂದು ಕಾಲೇಜು ತಿಳಿಸಿದೆ ಎಂದು ವೇದಾಂತ ಪಿಯು ಕಾಲೇಜು ನಿರ್ದೇಶಕರಾದ ರಾಮನಾಥ ತಿಳಿಸಿದ್ದಾರೆ.








