ಮೈಸೂರು: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವಂತ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ನಿಷೇಧಿಸಬೇಕು. ಕನ್ನಡ ಪ್ರತಿಭೆಗಳಿಗೆ ಚಿತ್ರ ಗಾಯನದಲ್ಲಿ ಅವಕಾಶ ಕೊಡಬೇಕು. ಅನ್ಯ ಭಾಷೆಯ ಗಾಯಕರನ್ನು ಹಾಡಿಸುವುದನ್ನು ನಿಲ್ಲಿಸಬೇಕು. ನಿರ್ಮಾಪಕರು ಸೋನು ನಿಗಮ್ ಗೆ ಅವಕಾಶ ನೀಡಬಾರದು ಎಂಬುದಾಗಿ ಒತ್ತಾಯಿಸಿದರು.
ಕನ್ನಡ ಚಿತ್ರರಂಗದ ನಟರು ಸೋನು ಹಾಡಿಗೆ ಬಾಯಾಡಿಸುವುದನ್ನು ನಿಲ್ಲಿಸಬೇಕು. ಕೂಡಲೇ ಸೋನು ನಿಗಮ್ ಕನ್ನಡಿಗರ ಕ್ಷಮೆಯಾಚಿಸಬೇಕು. ಪೊಲೀಸರು ಸೋನು ನಿಗಮ್ ಬಂಧಿಸಿ ಜೈಲಿಗೆ ಕಳುಬಿಸಬೇಕು ಎಂಬುದಾಗಿ ವಾಟಾಲ್ ನಾಗರಾಜ್ ಆಗ್ರಹಿಸದರು.