ದಾಂಪತ್ಯ ಜೀವನ ಜೇನಿನಂತೆ ಸಿಹಿಯಾಗಿರಲು ಈ ವಾಸ್ತು ನಿಯಮ ಪಾಲಿಸಿ… – Kannada News Now


Health Lifestyle

ದಾಂಪತ್ಯ ಜೀವನ ಜೇನಿನಂತೆ ಸಿಹಿಯಾಗಿರಲು ಈ ವಾಸ್ತು ನಿಯಮ ಪಾಲಿಸಿ…

ಸ್ಪೆಷಲ್ ಡೆಸ್ಕ್ : ದಾಂಪತ್ಯ ಜೀವನ ಸುಖಮಯವಾಗಿರಲು ಕೆಲವೊಂದು ವಾಸ್ತು ನಿಯಮಗಳು ಸಹಾಯ ಮಾಡುತ್ತವೆ. ಇವುಗಳನ್ನು ಪಾಲಿಸುವ ಮೂಲಕ ಪತಿ -ಪತ್ನಿ ಸಂತೋಷವಾಗಿ ಜೀವನ ಸಾಗಿಸಬಹುದು.

ಪತಿ ಮತ್ತು ಪತ್ನಿ ತಮ್ಮ ಬೆಡ್‌‌ರೂಮ್‌ನಲ್ಲಿ ಪ್ರತ್ಯೇಕವಾಗಿ ಎರಡು ಸುಂದರ ಹೂದಾನಿ ಇಡಿ. ಇದರಿಂದ ನಿಮ್ಮ ವೈವಾಹಿಕ ಜೀವನ ರೊಮ್ಯಾಂಟಿಕ್‌ ಆಗಿರುತ್ತದೆ.
ಬೆಡ್‌‌ರೂಮ್‌ ಅಲಂಕೃತಗೊಂಡಿರಲಿ. ಕಪಾಟಿನಲ್ಲಿ ಎಲ್ಲವನ್ನು ತುಂಬಿಸಿಡಬೇಡಿ.
ಬೆಡ್‌‌ರೂಮ್‌ನಲ್ಲಿ ಪ್ರೀತಿ ಹೆಚ್ಚಲು ಸಿರಾಮಿಕ್‌ ವಿಂಡ್‌ಚೈಮ್‌ ಇಡಿ.
ಪ್ರೀತಿಯ ಸಂಕೇತ ಬೀರುವ ಲವ್‌ಬರ್ಡ್ಸ್‌‌ಗಳ ಫೋಟೊವನ್ನು ಬೆಡ್‌‌ರೂಮ್‌ನಲ್ಲಿಡಿ.
ಬೆಡ್‌ರೂಮ್‌ನಲ್ಲಿ ನೀರಿನ ಫೋಟೊ ಇಡಬೇಡಿ. ಅದರ ಬದಲಾಗಿ ಜೋಡಿ ಪಕ್ಷಿಗಳ ಫೋಟೊ ಇಡಿ.
ಪತಿ – ಪತ್ನಿಯ ನಡುವೆ ರೊಮ್ಯಾನ್ಸ್‌ ಹೆಚ್ಚಲು ಬೆಡ್‌‌ರೂಮ್‌ನಲ್ಲಿ ಹೃದಯ ಆಕಾರದ ಯಾವುದಾದರು ವಸ್ತುವನ್ನು ಇಡಿ.
ಬೆಡ್‌‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನ ತೂಗು ಹಾಕಿ. ಇದರಿಂದ ಪತಿ -ಪತ್ನಿಯರಿಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಹೆಚ್ಚಾಗುತ್ತದೆ.
ದಾಂಪತ್ಯ ಜೀವನ ಸುಖಮಯವಾಗಿರಲು ಒಂದು ಸುಂದರ ಬೌಲ್‌ನಲ್ಲಿ ಅಕ್ಕಿಯ ಜೊತೆಗೆ ಪವಿತ್ರವಾದ ಕ್ರಿಸ್ಟಲ್‌ ಹಾಕಿಡಿ.