ಹುಬ್ಬಳ್ಳಿ: ದಕ್ಷಿಣ ಮಧ್ಯ ರೈಲ್ವೆಯು ವಾಸ್ಕೋ ಡ ಗಾಮ–ಜಸಿದಿಹ್–ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಖ್ಯೆ 17321/17322 ಅನ್ನು ಅದರ ಮೂಲ ಮಾರ್ಗದಲ್ಲಿ ಪುನಃ ಆರಂಭಿಸಲು ತಿಳಿಸಿದೆ. ಇದಕ್ಕೂ ಮೊದಲು, ಈ ರೈಲನ್ನು ತಾತ್ಕಾಲಿಕವಾಗಿ ಚಾರ್ಲಪಲ್ಲಿ, ಮೌಲಾ ಅಲಿ ಮತ್ತು ಸಿಕಂದರಾಬಾದ್ ಬದಲಿಗೆ ಚಾರ್ಲಪಲ್ಲಿ, ಮೌಲಾಲಿ ಸಿ ಕ್ಯಾಬಿನ್, ಮೌಲಾಲಿ ಜಿ ಕ್ಯಾಬಿನ್, ಅಮ್ಮುಗುಡ, ಮತ್ತು ಸನತ್ನಗರ ಮೂಲಕ ತಿರುಗಿಸಲಾಗಿತ್ತು. ಇದರಿಂದಾಗಿ ಸಿಕಂದರಾಬಾದ್ ನಿಲ್ದಾಣವನ್ನು ಬೈಪಾಸ್ ಮಾಡಲಾಯಿತು.
ಈಗ, ರೈಲು ಸಂಖ್ಯೆ 17321 (ವಾಸ್ಕೋ ಡ ಗಾಮ-ಜಸಿದಿಹ್) ಸೆಪ್ಟೆಂಬರ್ 12 ರಿಂದ ಮತ್ತು ರೈಲು ಸಂಖ್ಯೆ 17322 (ಜಸಿದಿಹ್-ವಾಸ್ಕೋ ಡ ಗಾಮ) ಸೆಪ್ಟೆಂಬರ್ 15, ರಿಂದ ಪ್ರಯಾಣ ಪ್ರಾರಂಭವಾಗುವ ದಿನಾಂಕದಿಂದ ತಮ್ಮ ಮೂಲ ಮಾರ್ಗದಲ್ಲಿ ಸಂಚರಿಸಲಿವೆ. ಈ ಮೂಲಕ ಸಿಕಂದರಾಬಾದ್ ನಿಲ್ದಾಣದ ಮೂಲಕ ಹಾದುಹೋಗುವುದರಿಂದ, ಅಲ್ಲಿ ಇಳಿಯುವ ಹಾಗೂ ಹತ್ತುವ ಪ್ರಯಾಣಿಕರಿಗೆ ನೇರ ಸಂಪರ್ಕ ಮತ್ತೆ ದೊರಕಲಿದೆ.
ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 17321 (ವಾಸ್ಕೋ ಡ ಗಾಮಾ – ಜಸಿದಿಹ್) ಸಿಕಂದರಾಬಾದ್ಗೆ 23:15 ಗಂಟೆಗೆ ಆಗಮಿಸಿ, 23:20 ಗಂಟೆಗೆ ಹೊರಡಲಿದೆ.
ರೈಲು ಸಂಖ್ಯೆ 17322 (ಜಸಿದಿಹ್ – ವಾಸ್ಕೋ ಡ ಗಾಮಾ) ಸಿಕಂದರಾಬಾದ್ಗೆ 18:35 ಗಂಟೆಗೆ ಆಗಮಿಸಿ, 18:40 ಗಂಟೆಗೆ ಹೊರಡಲಿದೆ. ಇತರ ನಿಲ್ದಾಣಗಳಲ್ಲಿ ಆಗಮನ ಮತ್ತು ನಿರ್ಗಮನದ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ
ಬೆಂಗಳೂರಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳು ಅರೆಸ್ಟ್