ಮುಂಬೈ: ವಂತಾರ ಎಂಬುದು ವನ್ಯಜೀವಿಗಳ ರಕ್ಷಣೆ ಹಾಗೂ ಪುನರ್ವಸತಿಗಾಗಿ ಸ್ಥಾಪಿಸಿರುವಂಥ ಸಂಸ್ಥೆಯಾಗಿದೆ. ಇದರ ಸ್ಥಾಪಕರು ಅನಂತ್ ಅಂಬಾನಿ. ವನ್ಯಜೀವಿಗಳ ರಕ್ಷಣೆ ಹಾಗೂ ನಂತರದಲ್ಲಿ ಅವುಗಳ ಪುನರ್ವಸತಿಗೆ ತುಂಬ ಒಳ್ಳೆಯ ವ್ಯವಸ್ಥೆ ಮಾಡಬೇಕು ಎಂಬ ದೃಷ್ಟಿಯಿಟ್ಟುಕೊಂಡು, ಬಹಳ ಕಾಳಜಿ ಮತ್ತು ಪ್ರೀತಿಯಿಂದ ಆರಂಭಿಸಿದ್ದು ‘ವಂತಾರ’. ಇದೀಗ ಆ ವಂತಾರದಿಂದ “ವಂತಾರಿಯನ್ ರೆಸ್ಕ್ಯೂ ರೇಂಜರ್ಸ್” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯುವ ಮನಸ್ಸುಗಳು ಹಾಗೂ ಅವರ ಕುಟುಂಬವನ್ನು ಈ ಹೊಸ ಉಪಕ್ರಮದ ಮೂಲಕವಾಗಿ ಪ್ರೇರೇಪಿಸುವುದಕ್ಕೆ ಹಾಗೂ ಆಹ್ವಾನಿಸುವುದಕ್ಕೆ ಇದೊಂದು ಕಾರಣದಂತೆ ಆಗಿದೆ. ಮುಂಬೈನ ಹ್ಯಾಮ್ಲೇಸ್ ವಂಡರ್ ಲ್ಯಾಂಡ್ ಕಾರ್ನಿವಾಲ್ ಸಿದ್ಧವಾಗಿದ್ದು, ಇದೇ ಡಿಸೆಂಬರ್ 30ನೇ ತಾರೀಕಿನ ತನಕ ನಡೆಯುತ್ತದೆ.
ಇಂಥ ಅದ್ಭುತವಾದ ಸಾಹಸವು ಮಕ್ಕಳು ಹಾಗೂ ಅವರ ಪೋಷಕರನ್ನು ಆಹ್ವಾನಿಸುತ್ತದೆ. ವನ್ಯಜೀವಿ ಸಂರಕ್ಷಣೆ ಮಾಡುವಂಥ ನಿಜವಾದ ಹೀರೋಗಳು ಎಷ್ಟೆಲ್ಲ ಶ್ರಮ ಹಾಕುತ್ತಾರೆ, ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅಂದರೆ ಆ ಹುಡುಕಾಟ, ಸಹಾನುಭೂತಿ ಮತ್ತು ಕಾರ್ಯದಲ್ಲಿ ತೊಡಗಿಕೊಳ್ಳುವುದು ಈ ಪ್ರಯಾಣದ ಬಗ್ಗೆ ಸ್ವತಃ ಅನುಭೂತಿ ಪಡೆದುಕೊಳ್ಳಬಹುದಾಗಿರುತ್ತದೆ. ಈ ಕಾರ್ಯಕ್ರಮ ರೂಪುಗೊಂಡಿರುವುದೇ ಕುತೂಹಲ ಹುಟ್ಟಿಸುವುದಕ್ಕೆ ಮತ್ತು ನಿರ್ದಿಷ್ಟ ಕಾರ್ಯದಲ್ಲಿನ ಅನುಭೂತಿಯನ್ನು ತರುವುದಕ್ಕೆ ಆಗಿದೆ.
ವಂತಾರಿಯನ್ ರೆಸ್ಕ್ಯೂ ರೇಂಜರ್ಸ್ ಸಂವಾದಾತ್ಮಕ ಚಟುವಟಿಕೆಗಳ ಸರಣಿಯನ್ನೇ ಆಫರ್ ಮಾಡಲಿದೆ. ಜೀವನದ ಎದುರು ಸವಾಲುಗಳನ್ನು ತರುತ್ತದೆ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ಗೆಲುವು ತರುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗೀ ಆದವರಿಗೆ ಸಾಹಸಮಯ ಪ್ರಯಾಣದ ಹಾದಿಯಲ್ಲಿ ವನ್ಯಜೀವಿಗಳ ಆವಾಸ ಸ್ಥಾನಗಳ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಮತ್ತು ಅಪಾಯಕ್ಕೆ ಸಿಲುಕಿಕೊಂಡ ಪಕ್ಷಿಗಳನ್ನು ಮುಕ್ತಗೊಳಿಸುವುದು ಹೇಗೆ ಹಾಗೂ ರಕ್ಷಣೆಯ ನಂತರ ವನ್ಯಜೀವಿಗಳಿಗೆ ಆಹಾರದ ವ್ಯವಸ್ಥೆ ಮಾಡುವುದು ಹೇಗೆ ಎಂಬ ಬಗ್ಗೆಯೆಲ್ಲ ಶಿಕ್ಷಣ ದೊರೆಯುತ್ತದೆ. ಇನ್ನು ಕ್ರಿಸ್ ಮಸ್ ಸಾಂತಾಗೆ ಬಹಳ ಅಚ್ಚುಮೆಚ್ಚಾದ ಚಟುವಟಿಕೆಯಾದ ತಪ್ಪಿಸಿಕೊಂಡ ಪ್ರಾಣಿಗಳನ್ನು ಕಳ್ಳಸಾಗಾಣಿಕೆಯಿಂದ ರಕ್ಷಣೆ ಮಾಡುವುದು ಹಾಗೂ ವನ್ಯ ಪ್ರಾಣಿಗಳ ಸಂರಕ್ಷಣೆ ಎಂಬ ಬಹಳ ನಿರ್ಣಾಯಕವಾದ ಪ್ರಾಮುಖ್ಯವನ್ನು ತಿಳಿಯುವಂಥ ಹೃದಯ ತುಂಬುವ ಕಾರ್ಯದ ಮೂಲಕ ಈ ಕಾರ್ಯಕ್ರಮ ಕೊನೆಯಾಗುತ್ತದೆ.
ಈ ಸಾಹಸ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಪ್ರತಿ ಮಗುವಿಗೆ ರಕ್ಷಿಸಿದಂಥ ಪ್ರಾಣಿಯ ಬೊಂಬೆಯೊಂದು ದೊರೆಯುತ್ತದೆ. ಈಗಾಗಲೇ ರಕ್ಷಣೆಯಾಗಿ ವಂತಾರದಲ್ಲಿ ಇರುವಂಥ ವನ್ಯಪ್ರಾಣಿಯ ಬೊಂಬೆ ಅದಾಗಿರುತ್ತದೆ. ಅದರಲ್ಲಿ ಆ ವನ್ಯಪ್ರಾಣಿಯ ಹೆಸರು, ನಿಜವಾಗಿಯೂ ಆ ಪ್ರಾಣಿಯ ರಕ್ಷಣೆ ಆಗಿದ್ದು ಹೇಗೆ ಎಂಬ ವಿವರ, ಹಾಗೂ ಅದರ ಜೊತೆಗೆ ಒಂದು ಸಂದೇಶ: ನೀವು ಒಂದು ಜೀವ ಉಳಿಸಿದಲ್ಲಿ ನೀವು ಆ ಪ್ರಾಣಿಯ ವಿಚಾರದಲ್ಲಿ ಶಾಶ್ವತವಾಗಿ ಜವಾಬ್ದಾರರು ಎಂಬ ಒಕ್ಕಣೆ ಇರುತ್ತದೆ.
ಇನ್ನು ಈ ಕಾರ್ಯಕ್ರಮದ ಉತ್ಸಾಹ ಹೆಚ್ಚು ಮಾಡುವ ರೀತಿಯಲ್ಲಿ ಪ್ರಾಣಿಗಳ ಮೆರವಣಿಗೆ, ಅವುಗಳ ಸಂಬಂಧಪಟ್ಟ ಮಾಹಿತಿ ನೀಡುವುದಕ್ಕೆ ಮಾರ್ಗದರ್ಶನ ಹಾಗೂ ವಂತಾರದಲ್ಲಿ ರಕ್ಷಿಸಲಾದ- ಕುತೂಹಲಕರ ಗಾಥೆ ಹೊಂದಿರುವ ತಾಯಿ- ಮಗ ಆನೆಗಳಾದ ಪ್ರತಿಮಾ- ಮಾಣಿಕ್ ಲಾಲ್ ರನ್ನು ನೋಡಬಹುದು. ವರ್ಚುವಲ್ ರಿಯಾಲಿಟಿ 360 ಡಿಗ್ರಿ ವಿಡಿಯೋ ಟೂರ್ ನೋಡಬಹುದು. ಅದರಲ್ಲಿ ವಂತಾರದಲ್ಲಿ ನೆಲೆ ಕಂಡುಕೊಂಡಿರುವ ರಕ್ಷಿಸಲಾದ ವನ್ಯಜೀವಿಗಳ ಬದುಕನ್ನು ಹತ್ತಿರದಿಂದ ನೋಡಬಹುದು. ಇದೇ ಸಂದರ್ಭದಲ್ಲಿ ವನ್ಯಜೀವಿಗಳು ನೈಜ ಜಗತ್ತಿನಲ್ಲಿ ಎದುರಿಸುತ್ತಿರುವ ಸವಾಲುಗಳು, ಅದಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಅರ್ಥಪೂರ್ಣ ಕಾರ್ಯಗಳ ಬಗ್ಗೆ ಸ್ಫೂರ್ತಿಯನ್ನು ಮಕ್ಕಳಿಗೆ ನೀಡಲಾಗುತ್ತದೆ. ದಯಾ, ಜವಾಬ್ದಾರಿ ಮತ್ತು ಪರಿಸರದ ಪ್ರೀತಿ ಉತ್ತೇಜಿಸಲಾಗುತ್ತದೆ.
ಗುಜರಾತ್‌ನ ಜಾಮ್‌ನಗರದಲ್ಲಿ 3,000 ಎಕರೆಗಳಲ್ಲಿ ವಂತಾರ ವ್ಯಾಪಿಸಿದೆ. ಇದು 1,500ಕ್ಕೂ ಹೆಚ್ಚು ಪ್ರಭೇದಗಳ 78,000ಕ್ಕೂ ಹೆಚ್ಚು ಪ್ರಾಣಿಗಳಿಗೆ ನೆಲೆಯಾಗಿದೆ. ಆನೆಗಳು, ಹುಲಿ- ಸಿಂಹಗಳು, ಸರೀಸೃಪಗಳು ಮತ್ತು ಇತರ ಸಸ್ತನಿಗಳು ಸೇರಿವೆ. 200ಕ್ಕೂ ಹೆಚ್ಚು ರಕ್ಷಿಸಲಾದ ಆನೆಗಳಿದ್ದು, ಅವುಗಳಲ್ಲಿ 30 ಭಾರತೀಯ ಸರ್ಕಸ್‌ಗಳಿಂದ ರಕ್ಷಿಸಲ್ಪಟ್ಟವು. ವನ್ಯಜೀವಿಗಳಿಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳು, ಆಸ್ಪತ್ರೆಗಳು, ತಜ್ಞರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅನೇಕ ವ್ಯವಸ್ಥೆಗಳಿವೆ.
BREAKING: ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನ ಅಸ್ತವ್ಯಸ್ತ | Rain In Mandya
BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ