ಮುಂಬೈ,: ಅನಂತ್ ಅಂಬಾನಿ ಅವರು ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಆರೈಕೆ ವಿಚಾರವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಆರಂಭಿಸಿದ ವಂತಾರ ಉಪಕ್ರಮಕ್ಕಾಗಿ ಜಾಗತಿಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಾನವೀಯ ದಯಾಪರತೆ ವ್ಯಕ್ತಿಗಳನ್ನು ಗುರುತಿಸಿ, ನೀಡುವಂಥ ಪ್ರತಿಷ್ಠಿತ ಗೌರವ ಇದಾಗಿದೆ. ಗ್ಲೋಬಲ್ ಹ್ಯುಮೇನ್ ಸೊಸೈಟಿ ನೀಡುವಂಥ ‘ಗ್ಲೋಬಲ್ ಹ್ಯುಮಾನಿಟೇರಿಯನ್ ಅವಾರ್ಡ್ ಫಾರ್ ಅನಿಮಲ್ ವೆಲ್ಫೇರ್’ ಪ್ರಶಸ್ತಿಯು ಅನಂತ್ ಅಂಬಾನಿ ಅವರಿಗೆ ಸಂದಿದೆ.
ಅಮೆರಿಕದಲ್ಲಿ ಇರುವಂಥ ಅತ್ಯಂತ ಹಳೆಯ ರಾಷ್ಟ್ರೀಯ ಮಾನವೀಯ ದಯಾಪರತೆ ಸಂಘಟನೆಯಾಗಿದ್ದು, ಆ ಅಮೆರಿಕನ್ ಹ್ಯುಮೇನ್ ಸೊಸೈಟಿಯ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಗ್ಲೋಬಲ್ ಹ್ಯುಮೇನ್ ಸೊಸೈಟಿ ಸೇವೆ ಸಲ್ಲಿಸುತ್ತಿದೆ. ಅಂದ ಹಾಗೆ ಇದು ಪ್ರಾಣಿಗಳ ಹಿತರಕ್ಷಣೆಯನ್ನು ದೃಢೀಕರಿಸುವ ವಿಶ್ವದ ಅತಿದೊಡ್ಡ ಸಂಘಟನೆ ಸಹ ಹೌದು.
ವನ್ಯಪ್ರಾಣಿಗಳ ಸಂರಕ್ಷಣೆಗೆ ಅಂತಲೇ ಮೀಸಲಾದ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ಹಲವು ರೀತಿಯಲ್ಲಿ ಐತಿಹಾಸಿಕ ಎನಿಸಿಕೊಂಡಿತು. ಏಕೆಂದರೆ, ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಏಷ್ಯನ್ ಎನಿಸಿಕೊಂಡರು ಅನಂತ್. ವನ್ಯಜೀವಿ ಸಂರಕ್ಷಣೆಯನ್ನು ಗುರುತಿಸಿ ನೀಡುವಂಥ ಅತ್ಯಂತ ಮುಖ್ಯವಾದ ಜಾಗತಿಕ ಪುರಸ್ಕಾರ ಇದು ಎಂಬ ವ್ಯಾಪಕ ಮನ್ನಣೆಯನ್ನು ಈ ಪ್ರಶಸ್ತಿ ಪಡೆದುಕೊಂಡಿದೆ. ತಮ್ಮ ಇಡೀ ಬದುಕನ್ನು ಮುಡುಪಾಗಿಟ್ಟು, ಜಾಗತಿಕವಾಗಿ ಪ್ರಾಣಿಗಳು ಹಾಗೂ ಮನುಷ್ಯರಲ್ಲಿ ಪರಿವರ್ತನೆ ತರುವಂಥ ಪರಿಣಾಮ ಬೀರಿದ ವ್ಯಕ್ತಿಗಳಿಗೆ ಈ ಪ್ರಶಸ್ತಿ ಮೀಸಲಾಗಿದೆ.
ವಂತಾರ ಆರಂಭಿಸುವ ಮೂಲಕ ತಮ್ಮ ದೂರದರ್ಶಿತ್ವ ಆಲೋಚನೆಯನ್ನು ಅನಂತ್ ಅಂಬಾನಿ ಸ್ಪಷ್ಟಪಡಿಸಿದ್ದಾರೆ. ಸಾಕ್ಷ್ಯ ಆಧಾರಿತವಾದ ಹಿತರಕ್ಷಣೆ ಕಾರ್ಯಕ್ರಮಗಳು, ವಿಜ್ಞಾನ ಮುಂಚೂಣಿ ಸಂರಕ್ಷಣೆ ಉಪಕ್ರಮಗಳು ಹಾಗೂ ಜಾಗತಿಕವಾಗಿ ದುರ್ಬಲ ಜೀವಿಗಳ ರಕ್ಷಣೆಯನ್ನು ಗುರಿಯಾಗಿ ಇರಿಸಿಕೊಂಡು ಹಾಕುತ್ತಿರುವ ಸುಸ್ಥಿರ ಶ್ರಮದಲ್ಲಿನ ವಂತಾರದ ಬದ್ಧತೆಯನ್ನು ಈಗ ಸಿಕ್ಕಿರುವ ಪ್ರಶಸ್ತಿಯು ಗುರುತಿಸಿದೆ. ಅನಂತ್ ಅಂಬಾನಿ ಅವರು ಕೈಗೊಂಡಿರುವ ಕೆಲಸವು ಸಂರಕ್ಷಣೆ ಭವಿಷ್ಯವನ್ನು ಬರೀ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಸಕ್ರಿಯವಾಗಿ ರೂಪುಗೊಳಿಸುತ್ತಿದೆ.
ನಾನು ನಂಬಿದಂಥ ಕಾಲಾತೀತ ‘ಸರ್ವಭೂತ ಹಿತ” (ಎಲ್ಲ ಜೀವಿಗಳ ಒಳಿತು) ತತ್ವವನ್ನು ಈ ಪ್ರಶಸ್ತಿಯು ಮತ್ತೊಮ್ಮೆ ಖಾತ್ರಿಪಡಿಸಿದೆ. ಇದಕ್ಕಾಗಿ ಪ್ರಶಸ್ತಿ ನೀಡಿದ ಸಂಸ್ಥೆಗೆ ಧನ್ಯವಾದವನ್ನು ಹೇಳುತ್ತೇನೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
“ಪ್ರತಿ ಜೀವಕ್ಕೂ ಗೌರವ, ಕಾಳಜಿ ಹಾಗೂ ಭರವಸೆ ನೀಡುವುದಕ್ಕಾಗಿ ಸೇವೆ ಎಂಬ ಮಾರ್ಗದರ್ಶನ ಸ್ಫೂರ್ತಿಯಿಂದ ಇದನ್ನು ಮಾಡುತ್ತಿದ್ದೇವೆ,” ಎಂದು ಅನಂತ್ ಹೇಳಿದ್ದಾರೆ. ಇನ್ನು ವಂತಾರದ ಉದ್ದೇಶವನ್ನು ಮತ್ತೊಮ್ಮೆ ಒತ್ತಿಹೇಳುತ್ತಾ, ಸಂರಕ್ಷಣೆ ಎಂಬುದು ಹಂಚಿಕೊಳ್ಳುವ ಧರ್ಮ, ಅದನ್ನು ಎತ್ತಿಹಿಡಿಯಲೇ ಬೇಕು. “ಪ್ರಾಣಿಗಳು ನಮಗೆ ಸಮತೋಲನ, ವಿನಮ್ರತೆ ಹಾಗೂ ನಂಬಿಕೆಯನ್ನು ಕಲಿಸುತ್ತವೆ. ವಂತಾರದ ಮೂಲಕ, ನಮ್ಮ ಉದ್ದೇಶ ಏನೆಂದರೆ ಪ್ರತಿ ಜೀವಕ್ಕೂ ಗೌರವ, ಕಾಳಜಿ ಹಾಗೂ ಭರವಸೆ ನೀಡುವುದು. ಅದು ಕೂಡ ಸೇವೆ ಎಂಬ ಸ್ಫೂರ್ತಿಯ ಮಾರ್ಗದರ್ಶನದಲ್ಲಿ. ಸಂರಕ್ಷಣೆಯು ನಾಳೆಗಾಗಿ ಅಲ್ಲ; ಇದು ಹಂಚಿಕೊಂಡ ಧರ್ಮ, ಇದನ್ನು ಇವತ್ತೇ ಎತ್ತಿಹಿಡಿಯಬೇಕು,” ಎಂದು ಹೇಳಿದ್ದಾರೆ.
“ವಂತಾರ ಎಂಬುದು ರಕ್ಷಣಾ ಕೇಂದ್ರ ಎಂಬುದಕ್ಕಿಂತ ಹೆಚ್ಚಾಗಿ ಗುಣಪಡಿಸುವ ಧಾಮ,” ಎಂದು ಗ್ಲೋಬಲ್ ಹ್ಯುಮೇನ್ ಸೊಸೈಟಿ ಅಧ್ಯಕ್ಷರು ಹಾಗೂ ಸಿಇಒ ಡಾ ರಾಬಿನ್ ಗ್ಯಾನ್ ಝೆರ್ಟ್ ಅವರು ಹೇಳಿದ್ದಾರೆ. ದೊಡ್ಡ ಮಟ್ಟದ ರಕ್ಷಣಾ ಕಾರ್ಯ, ಪುನರ್ವಸತಿ ಹಾಗೂ ಸಮಗ್ರ ಜೀವಿಗಳ ಸಂರಕ್ಷಣೆಯಲ್ಲಿ ಏನನ್ನು ಸಾಧಿಸಬಹುದು ಎಂಬುದನ್ನು ವಂತಾರ ಪುನರ್ ವ್ಯಾಖ್ಯಾನಿಸಿದೆ. ವಂತಾರದಲ್ಲಿ ವಿಶಿಷ್ಟವಾದ, ವಿಜ್ಞಾನ ನಡೆಸುವ ಮಾರ್ಗದಲ್ಲಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಾಣಿ ವಾಸಸ್ಥಾನದ ಹೊರಗೆ ಅವುಗಳ ನೈಸರ್ಗಿಕ ಆವಾಸಸ್ಥಾನ ಸಂಯೋಜಿಸಿ ಬೆಂಬಲ ನೀಡಲಾಗುತ್ತಿದೆ. ಅದು ಕೂಡ ಸ್ಥಳೀಯ ಪರಿಸರವ್ಯವಸ್ಥೆಯಲ್ಲಿ ಅವುಗಳ ರಕ್ಷಣೆಗೆ ಶ್ರಮ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.








