ಹುಬ್ಬಳ್ಳಿ: ವಂದೇ ಭಾರತ್ ಎಕ್ಸ್ಪ್ರೆಸ್, ರೈಲು ಸಂಖ್ಯೆ 20670 ಪುಣೆ-ಹುಬ್ಬಳ್ಳಿ ವಿಬಿ ಘಟಪ್ರಭಾದಲ್ಲಿ ಹೆಚ್ಚುವರಿ ನಿಲುಗಡೆಗೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಅವರು ಮಿರಜ್ ಮತ್ತು ಬೆಳಗಾವಿ ನಡುವೆ ಇರುವ ಘಟಪ್ರಭಾ ಪಟ್ಟಣವು ತ್ವರಿತವಾದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಹಾಗೂ ವಂದೇ ಭಾರತ್ ನಿಲುಗಡೆಯೊಂದಿಗೆ, ಈ ಪ್ರದೇಶವು ಮತ್ತಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಈಗಾಗಲೇ ಉತ್ತಮ ಸಂಖ್ಯೆಯ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಜನರು ಈ ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಅವರು ಉಲ್ಲೇಖಿಸಿದರು.
ಸಂಸದರು ಘಟಪ್ರಭಾ ನಿಲ್ದಾಣವನ್ನು 18.15 ಕೋಟಿ ರೂ.ಗಳ ವೆಚ್ಚದಲ್ಲಿ ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು, ವಿಶಾಲವಾದ ರಾಷ್ಟ್ರೀಯ ಜಾಲದ ಮೂಲಕ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವಲ್ಲಿ ರೈಲ್ವೆಯ ಪ್ರಯತ್ನಗಳನ್ನು ಶ್ಲಾಘಿಸಿದರು.
ಘಟಪ್ರಭಾ ನಿಲ್ದಾಣದಲ್ಲಿ ನಿಲ್ಲುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು, ಅದರ ಪರಿಚಯದಿಂದಲೇ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿತ್ತು ಹಾಗೂ ಇದು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ, ಇದು ಪುಣೆ ಮತ್ತು ಹುಬ್ಬಳ್ಳಿ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕರವಾಗಿರುತ್ತದೆ ಮತ್ತು ಘಟಪ್ರಭಾದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ರೈಲು ಸಂಖ್ಯೆ 20669 ಎಸ್ಎಸ್ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೆಸ್ ಘಟಪ್ರಭಾ ನಿಲ್ದಾಣದಲ್ಲಿ 7:23 ಗಂಟೆಗೆ ಆಗಮಿಸಿ 7:25 ಗಂಟೆಗೆ ನಿರ್ಗಮಿಸುತ್ತದೆ. ರೈಲು ಸಂಖ್ಯೆ 20670 ಪುಣೆ – ಎಸ್ಎಸ್ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ ಪ್ರೆಸ್ ಘಟಪ್ರಭಾ ನಿಲ್ದಾಣದಲ್ಲಿ 19:38 ಗಂಟೆಗೆ ಆಗಮಿಸಿ 19:40 ಗಂಟೆಗೆ ನಿರ್ಗಮಿಸುತ್ತದೆ.
BREAKING: ವಾಹನ ಸವಾರರಿಂದ ಹಣ ವಸೂಲಿ: ಮಂಡ್ಯದ KRS ಠಾಣೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಇಲ್ಲಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting