ಬೆಂಗಳೂರು : ಕಲಬುರಗಿ ಮತ್ತು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ನ ನಿಯಮಿತ ಸೇವೆಯನ್ನು ಪಶ್ಚಿಮ ರೈಲ್ವೆ ಪ್ರಕಟಿಸಿದೆ.
ರೈಲು ಸಂಖ್ಯೆ 22231/22232 ಕಲಬುರಗಿ-ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ಮಾರ್ಚ್ 15, 2024 ರಿಂದ ಎಸ್ಎಂವಿಟಿ ಬೆಂಗಳೂರಿನಿಂದ ಮತ್ತು ಮಾರ್ಚ್ 16, 2024 ರಂದು ಕಲಬುರಗಿಯಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ. ಈ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ.
ರೈಲು ಸಂಖ್ಯೆ 22231 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಕಲಬುರಗಿಯಿಂದ ಬೆಳಿಗ್ಗೆ 5:15 ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 2 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲು ರಾಯಚೂರು (ಬೆಳಿಗ್ಗೆ 06:53/06:55), ಮಂತ್ರಾಲಯಂ ರಸ್ತೆ (07:08/07:10), ಗುಂತಕಲ್ (08:25/08:30), ಅನಂತಪುರ (09:28/09:30), ಮತ್ತು ಯಲಹಂಕ (1:4) ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು ಶುಕ್ರವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.
ರೈಲು ಸಂಖ್ಯೆ 22232 ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯಾಹ್ನ 2:40 ಕ್ಕೆ ಹೊರಟು ಅದೇ ದಿನ ರಾತ್ರಿ 11:30 ಕ್ಕೆ ಕಲಬುರಗಿ ತಲುಪಲಿದೆ.
ಈ ರೈಲು ಯಲಹಂಕ (ಮಧ್ಯಾಹ್ನ 03:03/03:05), ಅನಂತಪುರ (ಸಂಜೆ 05:58/06:00), ಗುಂತಕಲ್ (07:00/07:05), ಮಂತ್ರಾಲಯಂ ರಸ್ತೆ (08:18/08:20) ಮತ್ತು ರಾಯಚೂರು (08:08:20) ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.