Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM

Watch Video: ಆಲಿಕಲ್ಲು ಮಳೆಗೆ ಸಿಕ್ಕ ದೆಹಲಿ-ಶ್ರೀನಗರ ಇಂಡಿಗೋ ವಿಮಾನ: ಬೆಚ್ಚಿ ಬಿದ್ದ ಪ್ರಯಾಣಿಕರ ವೀಡಿಯೋ ನೋಡಿ | IndiGo Flight Hit By Hailstorm

21/05/2025 9:14 PM

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ವಾಲ್ಮೀಕಿ ನಿಗಮದ ಹಗರಣ: ವಿಧಾನಸಭೆಯಲ್ಲಿ ’12 ಪುಟ’ಗಳ ಈ ಲಿಖಿತ ಉತ್ತರ ಕೊಟ್ಟ ‘ಸಿಎಂ ಸಿದ್ಧರಾಮಯ್ಯ’ | CM Siddaramaiah
KARNATAKA

BIG NEWS: ವಾಲ್ಮೀಕಿ ನಿಗಮದ ಹಗರಣ: ವಿಧಾನಸಭೆಯಲ್ಲಿ ’12 ಪುಟ’ಗಳ ಈ ಲಿಖಿತ ಉತ್ತರ ಕೊಟ್ಟ ‘ಸಿಎಂ ಸಿದ್ಧರಾಮಯ್ಯ’ | CM Siddaramaiah

By kannadanewsnow0919/07/2024 4:00 PM

ಬೆಂಗಳೂರು: ನಿನ್ನೆಯಿಂದ ವಿಧಾನಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿವೆ. ಈ ನಡುವೆ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆಯ ತಮ್ಮ ಉತ್ತರ ನೀಡಿದ್ದರು. ಇಂದು ಕೂಡ ಸಿಎಂ ಸಿದ್ಧರಾಮಯ್ಯ ಸದನದಲ್ಲಿ ಉತ್ತರ ಮುಂದುವರೆಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಬರೋಬ್ಬರಿ 12 ಪುಟಗಳ ಉತ್ತರವನ್ನು ಸದನಕ್ಕೆ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ.

ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ವಾಲ್ಮೀಕಿ ನಿಗಮದ ಹಗರಣ ಸಂಬಂಧ ತಮ್ಮ ಉತ್ತರವನ್ನು ಮುಂದುವರೆಸಿದರು. ಅವರು,  ಮಾನ್ಯ ಅಧ್ಯಕ್ಷರೆ,
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಗರಣ ಕುರಿತ ಮುಂದುವರೆದ ಉತ್ತರವನ್ನು ಸದನದಲ್ಲಿ ಲಿಖಿತ ರೂಪದಲ್ಲಿ
ಮಂಡಿಸುತ್ತಿದ್ದೇನೆ ಎಂದರು.

1. ಬಿ.ಜೆ.ಪಿ. ಯವರ ಹುನ್ನಾರ ಇಷ್ಟೆ. ಒಂದು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು. ಎರಡನೆಯದು, ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು. ಈ ಎರಡೂ ಎಂದಾದರೂ ಸಾಧ್ಯವೆ? ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳೇ.

2. ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂದು ಕೂಡ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಇಲ್ಲಿ ಸಾಬೀತಾಗಿದೆ.

3. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ 89.63 ಕೋಟಿಗಳಷ್ಟು ಹಣ ಅಕ್ರಮವಾಗಿ ಹೈದರಾಬಾದಿನ ಆರ್ ಬಿ ಎಲ್ ಬ್ಯಾಂಕಿಗೆ ವರ್ಗಾವಣೆಯಾಗಿರುತ್ತದೆ. [ಈ 89.63 ಕೋಟಿಗಳಲ್ಲಿ 5 ಕೋಟಿ ರೂ ವಾಪಸ್ಸು ಬಂದಿರುತ್ತದೆ]. 89.63 ಕೋಟಿ ರೂಪಾಯಿಗಳಲ್ಲಿ 45,02,98,000 ರೂಪಾಯಿಗಳು ಉಳಿತಾಯ ಖಾತೆಯಿಂದ ವರ್ಗಾವಣೆಯಾಗಿರುತ್ತವೆ. ಇನ್ನುಳಿದ 44.60 ಕೋಟಿ ರೂಪಾಯಿಗಳನ್ನು ನಿಗಮವು ಇಟ್ಟಿದ್ದ ಫಿಕ್ಸೆಡ್ ಡಿಪಾಸಿಟ್ ಮೇಲೆ ಓವರ್ ಡ್ರಾಫ್ಟ್ ತೆಗೆದಿದ್ದಾರೆ. ಓವರ್ ಡ್ರಾಫ್ಟ್ ಎಂದರೆ ಒಂದು ರೀತಿಯ ಸಾಲವೇ. ಇದು ಅತ್ಯಂತ ಪರಿಣತರಾದ, ಪಳಗಿದ ಖದೀಮರ ಕೆಲಸವೆ. ನಿಗಮವು ದಿನಾಂಕ: 30-3-2024 ರಂದು 50.00 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ ನಲ್ಲಿಟ್ಟಿದೆ. ಸ್ಟಿಕ್ಸ್ ಸ್ಪೀಕಿಂಗ್, ಈ 50.00 ಕೋಟಿ ಫಿಕ್ಸೆಡ್ ಡಿಪಾಸಿಟ್ ನಮ್ಮ ವಶದಲ್ಲಿಯೆ ಇದೆ. ಯಾಕೆಂದರೆ ಅದು ಫಿಕ್ಸೆಡ್ ಡಿಪಾಸಿಟ್.

4. ವಿರೋಧ ಪಕ್ಷದವರು [ ವಿಜಯೇಂದ್ರ ಹೇಳಿದ ಎರಡನೆ ಸುಳ್ಳು ರಾಜ್ಯ ಸರ್ಕಾರವು ಸಿಬಿಐನವರು ಎಫ್‌ಐಆರ್ ದಾಖಲಿಸಿದ ಮೇಲೆ ಎಸ್.ಐ.ಟಿ. ರಚಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ನಮ್ಮಲ್ಲಿ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಿನಾಂಕ 28- 5-2024 ರಂದು ಕ್ರೈಂ ನಂ. 118/2024 ರಂತೆ ಏಫ್ ಐ ಆರ್ ದಾಖಲಾಗಿದೆ. ರಾಜ್ಯ ಸರ್ಕಾರವು 31-5-2024 ರಂದು ಆದೇಶ ಹೊರಡಿಸಿ ಎಸ್.ಐ.ಟಿ. ರಚಿಸಿದೆ. ಸಿಬಿಐ ದಿನಾಂಕ 3-6-2024 ರಂದು ಎಫ್‌ಐಆರ್ ದಾಖಲಿಸಿದ್ದಾರೆ.

5. ದಿನಾಂಕ: 03.06.2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ (ಹೆಚ್.ಆರ್.) ಗಿರೀಶ್ ಚಂದ್ರ ಜೋಶಿ ಎನ್ನುವವರು ಎಂ.ಜಿ. ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಮತಿ ಸುಚಿಸ್ಮಿತಾ ರಾವುಲ್, ಚೀಫ್ ಮ್ಯಾನೇಜರ್ (ಬ್ರಾಂಚ್ ಹೆಡ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ Prevention of Corruption Act ರ Section 17(A) ರಡಿ ತನಿಖೆ ಮಾಡಲು ಅನುಮತಿ ನೀಡಿ ಸಿ.ಬಿ.ಐ. ಗೆ ಪತ್ರ ಬರೆದಿರುತ್ತಾರೆ.

6. ಸಿ.ಬಿ.ಐ.ಗೆ ಬರದಿರುವ ಈ ಪತ್ರದ ಮುಖ್ಯಾಂಶಗಳನ್ನು ನಾನು ಅನುಬಂಧ-1 ರಲ್ಲಿಟ್ಟು ಸದನದಲ್ಲಿ ಮಂಡಿಸುತ್ತಿದ್ದೇನೆ. ಈ ಎರಡರಲ್ಲೂ ಬ್ಯಾಂಕಿನವರೆ ಒಪ್ಪಿಕೊಂಡಿರುವ ಹಾಗೆ ಬ್ಯಾಂಕಿನ ಸಿಬ್ಬಂದಿಗಳೇ ನೇರವಾಗಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಕಂಡುಬರುತ್ತದೆ.

7. ದಿನಾಂಕ 28-5-2024 ರಂದು ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎನ್ನವವರು ನಿಗಮದ ಹಣ ಖಾಲಿಯಾಗಿರುವುದರ ಕುರಿತು ಹೈ ಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ದಿನಾಂಕ: 28.05.2024 ರಂದು ಶ್ರೀ ಎ. ರಾಜಶೇಖರ, ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಇವರು ನಿಗಮದಲ್ಲಿ ನಡೆದ ಅವ್ಯವಹಾರದ ಕುರಿತು ಎ. ಮಣಿಮೇಖಲೈ, ಎಂ.ಡಿ. & ಸಿ.ಇ.ಓ., ಯುಬಿಐ, ಶ್ರೀ ನಿತೇಶ್ ರಂಜನ್, ಶ್ರೀ ರಾಮಸುಬ್ರಮಣ್ಯಂ, ಶ್ರೀ ಸಂಜಯ್ ರುದ್ರ, ಶ್ರೀ ಪಂಕಜ್ ದ್ವಿವೇದಿ, ಕಾರ್ಯನಿರ್ವಾಹಕ ನಿರ್ದೇಶಕರು ಯುಬಿಐನ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಶುಚಿಸ್ಮಿತಾ ರವುಲ್, ಎಂ.ಜಿ. ರಸ್ತೆ ಶಾಖೆ ಇವರುಗಳ ವಿರುದ್ಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿರುತ್ತಾರೆ.

8. ಅಕ್ರಮ ನಡೆದಿದೆಯೆಂದು ಗೊತ್ತಾದ ಕೂಡಲೆ ಎಫ್.ಐ.ಆರ್ ರಿಜಿಸ್ಟರ್ ಆಗಿದೆ. ಅಕ್ರಮದ ಕುರಿತು ತನಿಖೆ ಮಾಡಲು ಸಮರ್ಥ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ: 31-5-2024 ರಂದು ಎಸ್‌ಐಟಿ ರಚಿಸಿದ್ದೇವೆ. ಮೇಲಿನ ಎರಡೂ ಕ್ರಿಮಿನಲ್ ಕೇಸುಗಳನ್ನು ತನಿಖೆ ಮಾಡುವ ಉದ್ದೇಶದಿಂದಲೆ 4 ಜನ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಚ್‌ಡಿ 64 ಸಿಐಡಿ 2024 ರ ಆದೇಶದಂತೆ ಈ ತಂಡ ರಚನೆಯಾಗಿದೆ.

9. ಎಸ್.ಐ.ಟಿ.ಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತಿದೆ. ಎಸ್‌.ಐ.ಟಿ. ರಚನೆಯಾದ ಕೂಡಲೆ ಕಾರ್ಯಪ್ರವೃತ್ತವಾದ ಈ ತಂಡವು ಈ ಕೆಳಕಂಡವರುಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

1. ಜೆ ಜಿ ಪದ್ಮನಾಭ, ಪ್ರಧಾನ ವ್ಯವಸ್ಥಾಪಕ ಮಹರ್ಷಿ ವಾಲ್ಮೀಕಿ ನಿಗಮ

2. ಪರಶುರಾಮ್ ದುರ್ಗಣ್ಣನವರ್ ಲೆಕ್ಕಾಧೀಕ್ಷಕ
3. ಸತ್ಯನಾರಾಯಣ ಇಟಕಾರಿ ಅಧ್ಯಕ್ಷರು, ಆಪರೇಟಿವ್ ಸೊಸೈಟಿ ನಿಯಮಿತ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ
4. ನೆಕ್ಕುಂಟೆ ನಾಗರಾಜ್- ಇವರು ಹಿಂದೆ ಶ್ರೀರಾಮುಲು ಜೊತೆ ಇದ್ದರು.

5. ನಾಗೇಶ್ವರರಾವ್‌, ನೆಕ್ಕುಂಟೆ ನಾಗರಾಜ್ ಅವರ ಭಾವಮೈದುನ
6. ಎಂ ಚಂದ್ರ ಮೋಹನ್, ಹೈದರಾಬಾದ್
7. ಗಾದಿರಾಜು ಸೂರ್ಯನಾರಾಯಣ ವರ್ಮ, ಹೈದರಾಬಾದ್
8. ಜಗದೀಶ್ ಜಿ ಕೆ ಉಡುಪಿ
9. ತೇಜ ತಮಟಂ, ಬೆಂಗಳೂರು
10. ಪಿಟ್ಟಲ ಶ್ರೀನಿವಾಸ ಗಚ್ಚಿ ಬೌಲಿ

11. ಸಾಯಿತೇಜ ಹೈದರಾಬಾದ್

12.ಕಾಕಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ.

10. ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿಯೆ ಅನೇಕ ವಿಚಾರಗಳನ್ನು ಮರೆಮಾಚುತ್ತಿದ್ದಾರೆ. ಪ್ರಮುಖವಾಗಿ,

ಬ್ಯಾಂಕಿನವರೆ ದಿನಾಂಕ 3-6-2024 ರಂದು ಸಿಬಿಐಗೆ ನೀಡಿರುವ ದೂರಿನಲ್ಲಿ ಒಪ್ಪಿಕೊಂಡಿರುವ ಹಾಗೆ ಎಂಜಿ ರಸ್ತೆಯ ಬ್ರಾಂಚಿನ ಅಧಿಕಾರಿಗಳು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಬ್ಯಾಂಕಿನ ಅಧಿಕಾರಿಗಳು ಶಿವಕುಮಾರ ಎಂಬ ಅಕ್ರಮ ವ್ಯಕ್ತಿ [ಇದುವರೆಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಹೈದರಾಬಾದಿನ ಸಾಯಿತೇಜ ಎಂಬ ವ್ಯಕ್ತಿಯನ್ನು ಶಿವಕುಮಾರ ಎಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ] ಯ ವಿವರಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮವಾಗಿ ಹಣ ವರ್ಗಾಯಿಸಲು ನೆರವಾಗಿದ್ದಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಬ್ಯಾಂಕಿನವರೆ ಹೇಳಿದ್ದಾರೆ. ಈ ಅಕ್ರಮ ವ್ಯಕ್ತಿಗೆ ಚೆಕ್ ಬುಕ್ಕನ್ನು ಕೊಟ್ಟಿದ್ದು ಯಾಕೆ? ಆ ಚೆಕ್ಕುಗಳನ್ನು ಆಧರಿಸಿ NEFT / RTGS ಮಾಡಲು ಅವಕಾಶಕೊಟ್ಟಿದ್ದು ಏಕೆ?

ಎಂಜಿ ರಸ್ತೆಯ ಶಾಖೆಯ ಮುಖ್ಯಸ್ಥರು/ ಉಪ ಮುಖ್ಯಸ್ಥರು ಚೆಕ್ಕುಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮ ಎಸಗಿದ್ದಾರೆ ಎಂದು ಬ್ಯಾಂಕಿನವರೆ ಹೇಳಿದ್ದಾರೆ. ಇದನ್ನೆಲ್ಲ ಆಧರಿಸಿಯೇ ಬ್ಯಾಂಕಿನ ಮೇಲಧಿಕಾರಿಗಳು ಸಿಬಿಐಗೆ ಬರೆದ ದೂರಿನಲ್ಲಿ ತಮ್ಮ ಸಿಬ್ಬಂದಿಯ | ಅಧಿಕಾರಿಗಳ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.

ವಿರೋಧ ಪಕ್ಷದವರಿಗೆ ನಾನು ಕೇಳಬಯಸುವುದೇನೆಂದರೆ, ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೊ ಅಥವಾ ಖಾಸಗಿ ಬ್ಯಾಂಕೊ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತಾರೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ ಜವಾಬ್ದಾರಿಯನ್ನು ಹೊರುತ್ತಾರೆಯೆ?

ನಾನು ಯಾಕೆ ಈ ಪ್ರಶ್ನೆಯನ್ನು ಕೇಳಿದೆ ಎಂದರೆ ರಾಜ್ಯದ APMC ಯಲ್ಲಿ 47.16 ಕೋಟಿ ರೂಗಳ ಹಗರಣ ನಡೆದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬೊಮ್ಮಾಯಿ ಗೃಹ ಸಚಿವರು ಹಾಗೂ ಎಪಿಎಂಸಿ ಸಚಿವರೂ ಆಗಿದ್ದರು. ಈಗ ವಾಲ್ಮೀಕಿ ನಿಗಮದಲ್ಲಿ ಯಾವ ರೀತಿ ಹಗರಣ ನಡೆದಿತ್ತೊ ಅದೇ ರೀತಿಯಲ್ಲಿ ಹಗರಣ ನಡೆದಿತ್ತು. ಆದರೆ ಬ್ಯಾಂಕಿನವರು ತಮ್ಮ ಸಸ್ಪೆನ್ಸ್ ಅಕೌಂಟಿನಲ್ಲಿದ್ದ ಹಣವನ್ನು ತೆಗೆದು ವಾಪಸ್ಸು ತುಂಬಿದ್ದರು. ಈಗ ಹಣ ವಾಪಸ್ಸು ತುಂಬಿ ಎಂದು ಸಿಬಿಐಗೆ ಪತ್ರ ಬರೆದಿದ್ದಾರೆ. ವಾಪಸ್ಸು ಕಟ್ಟದಂತೆ ತಡೆದ ಶಕ್ತಿಗಳು ಯಾವುವು? ಎಂಬುದು ಕೂಡ ತನಿಖೆಯಿಂದ ಬಯಲಾಗಬೇಕು. ಸಸ್ಪೆನ್ಸ್ ಖಾತೆಯಿಂದ ಹಣ ವಾಪಾಸ್ ಕೊಟ್ಟರೆ ಲೂಟಿ ಮಾಡಿದವರಿಂದ ವಸೂಲಿ ಮಾಡುವುದು ಯಾವಾಗ? ಅದಕ್ಕೆ ಯಾರು ಜವಾಬ್ದಾರರು?

11. ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಹಾಗೂ ಇತರೆ ಯಾವುದೇ ನಿಗಮದಲ್ಲಿ ಖಾತೆ ತೆರೆಯುವುದು, ವರ್ಗಾಯಿಸುವುದು ಮತ್ತು ತಮಗೆ ಬಿಡುಗಡೆಯಾದ ಅನುದಾನಗಳನ್ನು ಸಮರ್ಪಕ ರೀತಿಯಲ್ಲಿ ಜನರ ಕಲ್ಯಾಣಕ್ಕೆ ಬಳಸುವುದು ನಿಗಮದ ಮುಖ್ಯಸ್ಥರಾದ ವ್ಯವಸ್ಥಾಪಕ ನಿರ್ದೇಶಕರ ಜವಾಬ್ದಾರಿಯಾಗಿರುತ್ತದೆ.
12.ದಿನಾಂಕ:26.02.2014 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ.ರಸ್ತೆ ಶಾಖೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಂದು ಪತ್ರವನ್ನು ಸಲ್ಲಿಸಿರುತ್ತಾರೆ. ಆ ಪತ್ರದಲ್ಲಿ ಉಳಿತಾಯ ಖಾತೆಯನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಯವರು ಜಂಟಿಯಾಗಿ ನಿರ್ವಹಿಸುತ್ತಾರೆಂದು ತಿಳಿಸಿದ್ದು, ಎರಡು ಮಾದರಿ ಸಹಿ, ಇತರೆ ಕೆ.ವೈ.ಸಿ. ವಿವರಗಳು ಹಾಗೂ ದಾಖಲೆಗಳನ್ನು ಸಲ್ಲಿಸಿರುತ್ತಾರೆ.
13. ದಿನಾಂಕ: 04.03.2024 ರಂದು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳು ಜಂಟಿಯಾಗಿ ಬ್ಯಾಂಕಿಗೆ ಪತ್ರವನ್ನು ನೀಡಿದಂತೆ ಅಕ್ರಮ ಪತ್ರ ನೀಡಲಾಗಿದೆಯೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಉಳಿತಾಯ ಖಾತೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ವ್ಯವಹಾರಗಳನ್ನು ಅಂದರೆ, ಚೆಕ್‌ಬುಕ್ ಪಡೆಯುವುದು, ಫಿಕ್ಸೆಡ್ ಡೆಪಾಸಿಟ್ ರಸೀದಿಯನ್ನು ಪಡೆಯುವುದು, ಓವರ್ ಡ್ರಾಫ್ಟ್ ದಾಖಲೆಗಳನ್ನು ಪಡೆಯುವುದು ಹಾಗೂ ನಿಗಮದ ಎಲ್ಲಾ ವ್ಯವಹಾರಗಳನ್ನು ಈ ಖಾತೆಯಲ್ಲಿ ನಿರ್ವಹಿಸಲು ನಕಲಿ ಪತ್ರವೊಂದನ್ನು ಸೃಷ್ಟಿಸಿ, ಅದರಲ್ಲಿ ನಿಗಮದಲ್ಲಿಯೇ ಇಲ್ಲದ ಶಿವಕುಮಾರ್ ಎಂಬ ಅಕ್ರಮ ವ್ಯಕ್ತಿಯನ್ನು ಸೃಷ್ಟಿಸಿ ಅವನನ್ನು ಕಿರಿಯ ಲೆಕ್ಕಾಧಿಕಾರಿ ಎಂದು ಹೇಳಿ ಆತನೇ ಇನ್ನು ಮುಂದಿನ ಅಧಿಕೃತ ಸಹಿದಾರ ಎಂದು ಅನಧಿಕೃತವಾಗಿ ಮಾಡಿ ಆತನ ವಶಕ್ಕೆ ಚೆಕ್ ಬುಕ್‌ನ್ನು ನೀಡಬೇಕೆಂದು ತಿಳಿಸುವ ಪತ್ರವೊಂದನ್ನು ನೀಡಿ, ಚೆಕ್‌ಬುಕ್ಕನ್ನು 04.03.2024 ರಂದು ಪಡೆದಿರುವುದಾಗಿ ತಿಳಿದು ಬಂದಿರುತ್ತದೆ. ಈ ಶಿವಕುಮಾರ್ ಎಂಬ ವ್ಯಕ್ತಿ ನಿಜವಾಗಿ ವಾಲ್ಮೀಕಿ ನಿಗಮದ ಸಿಬ್ಬಂದಿಯೆ? ಎಂಬ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ.

14.ನಿರ್ದೇಶಕರ ಮಂಡಳಿ ಸಭೆ ದಿನಾಂಕ;30-3-2024 ರಂದು ನಡೆಯಿತೆಂದು ಬ್ಯಾಂಕಿಗೆ ತಿಳಿಸಲಾಗಿದೆಯೆಂಬಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ ಚುನಾವಣೆಯ ಕೋಡ್ ಆಫ್ ಕಂಡಕ್ಟ್ ಇರುವಾಗ ಯಾವ ಸಭೆ ನಡೆಯಲು ಹೇಗೆ ಸಾಧ್ಯ?

15. ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು ಬ್ಯಾಂಕನ್ನು ಕೇಳಲಿಲ್ಲವೆ? ಬ್ಯಾಂಕಿನವರು ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗಿತ್ತಲ್ಲ, ಯಾಕೆ ತರಲಿಲ್ಲ? ಬ್ಯಾಂಕಿನ ಮ್ಯಾನೇಜರ್ ಆದಿಯಾಗಿ ಅನೇಕ ಅಧಿಕಾರಿ, ಸಿಬ್ಬಂದಿಗಳು ವಾಲ್ಮೀಕಿ ನಿಗಮದ ಅಧಿಕಾರಿ ಸಿಬ್ಬಂದಿ ಮತ್ತು ಹೊರಗಿನ ಖಾಸಗಿ Fraud ಮಾಡುವ ವ್ಯಕ್ತಿಗಳು ಸೇರಿ ಇದು ಮಾಡಿರುವ ಹುನ್ನಾರ ಎಂದು ವ್ಯಕ್ತವಾಗುತ್ತದೆ. ತನಿಖೆಯಿಂದ ಈ ಎಲ್ಲಾ ಅಂಶಗಳು ಬಯಲಾಗುತ್ತವೆ.

16. ನಿಗಮದವರು ಹೊಸ ಖಾತೆ ತೆರೆಯಬೇಕಾದರೆ, ಖಾತೆ ವರ್ಗಾವಣೆ ಮಾಡಬೇಕಾದರೆ ಆರ್ಥಿಕ ಇಲಾಖೆಯ ಗಮನಕ್ಕೆ ತರಬೇಕು, ಅನುಮತಿ ಪಡೆದುಕೊಳ್ಳಬೇಕು. ಆದರೆ ಈ ಯಾವ ಕೆಲಸವನ್ನೂ ಮಾಡಿಲ್ಲ. ನೇರವಾಗಿ ಖಾತೆಯ ವಿವರವನ್ನು ಖಜಾನೆ-2 ರಲ್ಲಿ ಅಪ್ ಲೋಡ್ ಮಾಡಿದ್ದಾರೆ. ದಿನಾಂಕ: 19.03.2024 ರಂದು ಡಿಡಿಓ ಕಛೇರಿ, ಅಂದರೆ ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಇಲಾಖೆಯ ವ್ಯವಸ್ಥಾಪಕರು ಹೊಸ ಬ್ಯಾಂಕ್ ಖಾತೆಯನ್ನು ಕೆ-2 ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಡಿ.ಡಿ.ಓ.ರವರು(ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಇಲಾಖೆ) ಅನುಮೋದಿಸಿದ್ದಾರೆ. ಡಿ.ಡಿ.ಒ.ರವರ ಜವಾಬ್ದಾರಿಯ ಮೇಲೆ ದಿನಾಂಕ 25-2-2024 ರಂದು 43.33 ಕೋಟಿ ರೂಪಾಯಿಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಜಿ ರಸ್ತೆಯ ಶಾಖೆಗೆ ಉಳಿತಾಯ ಖಾತೆಗೆ ವರ್ಗಾಯಿಸಲಾಗಿದೆ.

ವರ್ಷದ ಕಡೆಯಲ್ಲಿ ಆಯವ್ಯಯದಲ್ಲಿ ಕಲ್ಪಿಸಿದ ಅನುದಾನವನ್ನು ಎಲ್ಲರಿಗೂ ಬಿಡುಗಡೆ ಮಾಡುವ ಹಾಗೆಯೇ ಈ ಖಾತೆಗೂ ಹಣ ಬಿಡುಗಡೆಯಾಗಿದೆ. ಯೂನಿಯನ್ ಬ್ಯಾಂಕು ಕೂಡ ರಾಷ್ಟ್ರೀಕೃತ ಬ್ಯಾಂಕೆ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಳ್ಳತನ ನಡೆದಿದೆ.

17. 2015-16 ರಿಂದ 2024-25 ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿಗಮಗಳಿಗೆ ಹಂಚಿಕೆಯಾದ ಅನುದಾನ ಮತ್ತು ವೆಚ್ಚದ ವಿವರ


ಅಶೋಕ್ ಅವರು ನಿಗಮಕ್ಕೆ ಹಣ ಯಾಕೆ ಬಿಡುಗಡೆ ಮಾಡಿದ್ದು ಎಂದು ಕೇಳಿದ್ದಾರೆ. ಹಣ ವರ್ಷ ವರ್ಷವೂ ಬಿಡುಗಡೆಯಾಗಲೇಬೇಕು. ಇಲ್ಲದಿದ್ದರೆ ಲ್ಯಾಪ್ ಆಗುತ್ತದೆ. ವಿಚಾರ ಇರುವುದು ಹಣ ಯಾಕೆ ಬಿಡುಗಡೆ ಮಾಡಿದ್ದು ಎಂಬುದಲ್ಲ. ಬಿಡುಗಡೆ ಮಾಡಿದ ಹಣವನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದು ಮುಖ್ಯ. ಬಿಡುಗಡೆ ಮಾಡಿದ ಹಣಕ್ಕೆ ನಾನು ಟ್ರಸ್ಟಿ ಎಂಬ ನೈತಿಕತೆ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ಕಳ್ಳತನ ಮಾಡಿ ಎಂದು ನಾವು ಹಣ ಬಿಡುಗಡೆ ಮಾಡುತ್ತೇವಾ? ಆದರೆ ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡಿದವರು ಯಾರೇ ಆಗಿದ್ದರೂ ಕಳ್ಳರೆ, ಕಳ್ಳರನ್ನು ಈ ಸರ್ಕಾರವು ಸಹಿಸುವುದಿಲ್ಲ. ಬಿಜೆಪಿಯವರು ಇಮ್ಯುನಿಟಿ ಬೂಸ್ಟರ್‌ ನೀಡಿದ ಹಾಗೆ ನಾವು ನೀಡುವುದಿಲ್ಲ.

18. ಯಾವುದೇ ಸಂದರ್ಭದಲ್ಲಿ ಕಳ್ಳರು ಏಕಾಏಕಿ ಹುಟ್ಟುವುದಿಲ್ಲ. ಅವರು ಪ್ರೊಫೆಶನಲ್ ಆಗಬೇಕಾದರೆ ಅವರಿಗೆ ಹಿಂದೆ ಬಹಳ ಇಮ್ಯುನಿಟಿ ಸಿಕ್ಕಿರುತ್ತದೆ. ಹಾಗಾಗಿ ಕಳ್ಳರು ಎಲ್ಲಿಂದ ಪ್ರಾರಂಭವಾದರು? ಹೇಗೆ ಪ್ರಾರಂಭವಾದರು? ಅವರನ್ನು ಬೆಳೆಸಿದವರು ಯಾರು? ಎಂಬುದೆಲ್ಲ ಬಹಳ ಮುಖ್ಯವಾದ ಸಂಗತಿಗಳು. ಈ ಎಲ್ಲವುಗಳನ್ನು ತನಿಖಾ ಸಂಸ್ಥೆಗಳು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಬೇಕಾಗಿದೆ.

19. ಈ ವಿಷಯದಲ್ಲಿ ಆರೋಪಿಗಳಾಗಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ 2017-18 ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿರುವ ಸಂದರ್ಭದಲ್ಲಿ ಈ ವಾಲ್ಮೀಕಿ ನಿಗಮದಲ್ಲಿ ಮಾಡಿದ ಮಾದರಿಯಲ್ಲಿ 4.96 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದ ಆರೋಪದ ಮೇಲೆ ಅಮಾನತ್ತಾಗಿ ಇಲಾಖಾ ವಿಚಾರಣೆ ಪ್ರಾರಂಭಿಸಲಾಗಿತ್ತು. ಆದರೆ, ಅವರನ್ನು ನಿಮ್ಮ ಸರ್ಕಾರ ಆರೋಪಮುಕ್ತಗೊಳಿಸಿ ಆದೇಶಿಸಿತ್ತು.

20. ಹಾಗಿದ್ದರೆ, ಈ ಪದ್ಮನಾಭನನ್ನು ಆರೋಪಮುಕ್ತಗೊಳಿಸಿದ್ದಾಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರವೆ ಇತ್ತು. ಹಾಗಾಗಿ ಆರೋಪ ಮುಕ್ತಗೊಳಿಸಿ ಅವನಿಗೆ ಇನ್ನೂ ದೊಡ್ಡ ದರೋಡೆ ಮಾಡಲು ಇಮ್ಯುನಿಟಿಯನ್ನು ಒದಗಿಸಿಕೊಟ್ಟಿದ್ದು ಬಿಜೆಪಿ ಸರ್ಕಾರವೇ ಅಲ್ಲವೆ? ಬಿಜೆಪಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಪ್ರಕರಣವನ್ನು ಸರಿಯಾಗಿ ನಿಭಾಯಿಸಿದ್ದರೆ ಆತ ಆರೋಪಮುಕ್ತನಾಗುತ್ತಿದ್ದನೆ?

21. ಪರಿಶಿಷ್ಟ ಜಾತಿ/ ಪಂಗಡಗಳ, ಹಿಂದುಳಿದವರ, ರೈತರ, ಕಾರ್ಮಿಕರ, ರೈತರ, ಮಹಿಳೆಯರ ಏಳಿಗೆಗಾಗಿ ಅವರ ಬದುಕು ಸುಧಾರಿಸುವುದಕ್ಕಾಗಿ ನಮ್ಮ ಸರ್ಕಾರ ಯಾವುದೇ ತ್ಯಾಗಕ್ಕೂ ಸಿದ್ದ. ಈ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಒಂದು ರೂಪಾಯಿಯನ್ನೂ ಕದಿಯಲು ಬಿಡುವುದಿಲ್ಲ. ದುರುಪಯೋಗವಾಗಲು ಬಿಡುವುದಿಲ್ಲ.
22. ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಅಸಂಖ್ಯಾತ ಹಗರಣಗಳು ನಡೆದಿವೆ. ಕೆಲವು ಮುಖ್ಯ ಹಗರಣಗಳ ಮಾಹಿತಿಯನ್ನು ಸದನದಲ್ಲಿ ಅನುಬಂಧ-2 ರಲ್ಲಿಟ್ಟು ಮಂಡಿಸುತ್ತಿದ್ದೇನೆ. ತಿಂದವರು ತಿಂದುಕೊಂಡು ಹೋಗಲಿ ಎಂದು ಬಿಡುವುದಕ್ಕೆ ನಮ್ಮದು ಯಡಿಯೂರಪ್ಪನವರ ಸರ್ಕಾರವಲ್ಲ, ಬೊಮ್ಮಾಯಿಯವರ ಸರ್ಕಾರವೂ ಅಲ್ಲ. ಮೋದಿ ಸರ್ಕಾರವೂ ಅಲ್ಲ. ಯಾರೇ ತಪ್ಪೆಸಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. We will not compromise with corruption.

23.ಕಳ್ಳರಿಗೆ ಇಮ್ಯುನಿಟಿ ಸಿಕ್ಕಾಗ ಮಾತ್ರ ಬಲಿತುಕೊಳ್ಳುತ್ತಾರೆಂದು ಆಗಲೆ ಹೇಳಿದೆ. ಹಿಂದಿನ ಇಬ್ಬರು ಮುಖ್ಯ ಮಂತ್ರಿಗಳ ಕಾಲದಲ್ಲಿ ಈ ಕಳ್ಳರನ್ನು ಮಟ್ಟ ಹಾಕಿದ್ದರೆ, ಅಥವಾ ಮೋದಿ ಸರ್ಕಾರ ಖದೀಮ ಬ್ಯಾಂಕ್ ಮ್ಯಾನೇಜರುಗಳನ್ನು ಮಟ್ಟ ಹಾಕಿದ್ದರೆ ಇಂದು ದೇಶದಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿದ್ದವೆ? ದೇಶದ ಎಷ್ಟೊಂದು ಬ್ಯಾಂಕುಗಳಲ್ಲಿ ಈ ರೀತಿಯ ಪ್ರಕರಣಗಳು ನಡೆದಿವೆ ಎಂಬ ಮಾಹಿತಿಯನ್ನು ಆರ್‌ಬಿಐ ಪ್ರಕಟಿಸಬೇಕು ಆಗ ಸತ್ಯಾಂಶ ಹೊರಬರುತ್ತದೆ.
24.ಕರ್ನಾಟಕದಲ್ಲಿ ಕಳೆದ 5-6 ವರ್ಷಗಳಲ್ಲಿ ಅನೇಕ ಬ್ಯಾಂಕುಗಳಲ್ಲಿ ಫ್ರಾಡುಗಳು ನಡೆದಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಯಾರ ಅಧೀನದಲ್ಲಿವೆ? ಆ ಖದೀಮ ಮ್ಯಾನೇಜರುಗಳು ಯಾರ ಅಧೀನದಲ್ಲಿದ್ದಾರೆ? ಕೇಂದ್ರದ ಹಣಕಾಸು ಸಚಿವರ ಅಧೀನದಲ್ಲಿದ್ದಾರೆ ತಾನೆ? ಅಂತಿಮವಾಗಿ ಮೋದಿಯವರ ಅಧೀನದಲ್ಲಿದ್ದಾರೆ ತಾನೆ? ನಮ್ಮ ಜನರ ದುಡ್ಡನ್ನು ಹೇಗೆಂದರೆ ಹಾಗೆ ಲೂಟಿ ಮಾಡುವುದಕ್ಕಾ ಈ ಬ್ಯಾಂಕುಗಳು ಇರುವುದು?

ಇದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಿಂದೆಯೂ ಹಗರಣಗಳಾಗಿವೆ. ಹಗರಣಗಳನ್ನು ಹೊರತರುವ ಕೆಲಸವನ್ನು ನಾವು ಮಾಡುತ್ತೇವೆ. ವಿವಿಧ ಆರೋಪಿಗಳಿಂದ 34.25 ಕೋಟಿ ಹಣ ವಸೂಲಿ ಮಾಡಲಾಗಿದೆ. ಇದುವರೆಗೆ ಸರ್ಕಾರವು 85,25,07,698 ರೂ. ಹಣವನ್ನು (ರೂ. 85.25 ಕೋಟಿ) ವಿವಿಧ ಹಂತಗಳಲ್ಲಿ ತನ್ನ ವಶಕ್ಕೆ ಪಡೆದಿದೆ. ಉಳಿದದ್ದನ್ನು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದೆ. ಈ ವಿವರನ್ನು ಅನುಬಂಧ-2 ರಲ್ಲಿಟ್ಟು ಮಂಡಿಸುತ್ತಿದ್ದೇನೆ.

25. ನಿಮ್ಮ ಅವಧಿಯಲ್ಲಿ ನಡೆದಿರುವ ಹಗರಣಗಳಲ್ಲಿ ಎಷ್ಟು ಮೊತ್ತವನ್ನು ರಿಕವರಿ ಮಾಡಿದ್ದೀರಿ ಹೇಳಿ? ನಾವು ತಪ್ಪು ಮಾಡಿದವರನ್ನು ಜೈಲಿಗೂ ಕಳಿಸಿದ್ದೇವೆ. ಹಣವನ್ನೂ ವಾಪಸ್ಸು ತರುತ್ತಿದ್ದೇವೆ. ಆದರೆ ನೀವು ಕಳ್ಳರು ಇನ್ನಷ್ಟು ಕಳ್ಳರಾಗುವಂತೆ ಮಾಡಿದಿರಿ. ಲೂಟಿ ಮಾಡಿದ ಹಣವನ್ನೂ ವಾಪಸ್ಸು ತರಲಿಲ್ಲ.

26. ಅಂತಿಮವಾಗಿ, ಈಗಾಗಲೇ ಈ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು CID, SIT ಗೆ ನೀಡಿ ಆದೇಶಿರುತ್ತದೆ. ಸಿ.ಬಿ.ಐ. ಹಾಗೂ ಇ.ಡಿ. ಸಂಸ್ಥೆಗಳೂ ಕೂಡ ತನಿಖೆ ನಡೆಸುತ್ತಿವೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಹಾಗೂ ನಿಗಮದ ಖಾತೆಯಿಂದ ಯಾರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುತ್ತದೆ ಹಾಗೂ ಇದರ ಮೂಲ (Ultimate) ಫಲಾನುಭವಿಗಳು ಯಾರು ಎಂಬುದು ತನಿಖೆಯು ಪೂರ್ಣಗೊಂಡ ನಂತರವೇ ತಿಳಿಯುತ್ತದೆ.
27. ತನಿಖೆ ನಡೆಯುತ್ತಿರುವಾಗ ನಾನು ಯಾವುದೇ ವ್ಯಕ್ತಿಯ ಬಗ್ಗೆ ಸ್ಪಷ್ಟವಾಗಿ ಇವರೇ ಕಾರಣಕರ್ತರು ಎಂದು ಹೇಳಿದರೆ ತಪ್ಪಾಗುತ್ತದೆ. ಹಾಗೂ ತನಿಖಾ ಸಂಸ್ಥೆಯ ತನಿಖೆಯನ್ನು ದಾರಿ ತಪ್ಪಿಸಿದಂತಾಗುತ್ತದೆ. ಆದುದರಿಂದ, ತನಿಖೆ ಮುಗಿಯುವವರೆಗೂ ಕಾಯಬೇಕಾಗುತ್ತದೆ. ತದನಂತರ ತನಿಖೆಯ ಫಲಿತಾಂತದ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹಾಗೂ ನಿಗಮಕ್ಕೆ ಹಣ ವಾಪಸ್ಸು ಪಡೆಯುವ ಕೆಲಸ ಮಾಡಬೇಕಾಗುತ್ತದೆ.
28.ರಾಜ್ಯ ಸರ್ಕಾರವು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೆ.ಜಿ. ಪದ್ಮನಾಭ, ಹಾಗೂ ಲೆಕ್ಕಾಧೀಕ್ಷಕ ಪರಶುರಾಮ್ ದುರ್ಗಣ್ಣನವರ್ ಇವರನ್ನು ಅಮಾನತ್ತು ಮಾಡಿದೆ. ಎಸ್.ಐ.ಟಿ. ಯು ಬಂಧಿಸಿ ಜೈಲಿಗೆ ಅಟ್ಟಿದೆ. ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಅವರು ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರನ್ನು ಇ.ಡಿ. ಯು ಬಂಧಿಸಿದೆ. ಹಾಗೆಯೇ, ಬ್ಯಾಂಕಿನ ಸಿಬ್ಬಂದಿಗಳನ್ನು ಸಹ ಎಸ್.ಐ.ಟಿ. ಯವರೆ ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
29. ಈ ಹಗರಣದಲ್ಲಿ ಹಣಕಾಸು ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಹಣಕಾಸು ಇಲಾಖೆಯ ಆದೇಶದಂತೆ, ಆಯವ್ಯಯದಲ್ಲಿ ತಿಳಿಸಿದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನಿಗಮಕ್ಕೆ 4 ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಿರುತ್ತದೆ. ಆಡಳಿತ ಇಲಾಖೆಯ ಆದೇಶದ ನಂತರ ಸಂಬಂಧಪಟ್ಟ DDO (Drawing and Disbursing Officer) (ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ) ಇವರು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆಯಂತೆ, ಖಜಾನೆಯಿಂದ ಹಣ ಸೆಳೆದು ನಿಗಮದ ಖಾತೆಗೆ ಜಮೆ ಮಾಡಿರುತ್ತಾರೆ. ಇದು ಇಲಾಖೆಯಲ್ಲಿ ಪ್ರತಿ ಕಂತಿನ ಹಣವನ್ನು ಸೆಳೆಯಲು ಇರುವಂತಹ ವಿಧಾನ (Procedure).

ಮಾನ್ಯ ವಿರೋಧ ಪಕ್ಷದ ನಾಯಕರು ಎನ್.ಟಿ.ಟಿ. ಮಾಡ್ಯೂಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದರಿಂದ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಟ್ರಾನ್ಸಾಕ್ಷನ್ ಆರ್ಥಿಕ ಇಲಾಖೆಗೆ ತಿಳಿಯುವುದರಿಂದ ಈ ಹಗರಣದ ಬಗ್ಗೆ ಮಾಹಿತಿ ಇದ್ದರೂ ಆರ್ಥಿಕ ಇಲಾಖೆ ಏನೂ ಮಾಡಿರುವುದಿಲ್ಲವೆಂದು ಆರೋಪಿಸಿದ್ದಾರೆ.

ಆದರೆ, ಎನ್.ಟಿ.ಟಿ. ಮಾಡ್ಯೂಲ್‌ನ್ನು 2022 ರಲ್ಲಿ ಜಾರಿ ಮಾಡಲಾಗಿದೆ. ಇದರಲ್ಲಿ ದಾಖಲಾಗಿರುವ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಆಯಾ ದಿನ ಎಷ್ಟು ಹಣ ಬ್ಯಾಲೆನ್ಸ್ ಇದೆ ಎಂದು ಮಾಹಿತಿ ಖಜಾನೆಗೆ ಲಭ್ಯವಾಗುತ್ತದೆ. ಈ ಮಾಹಿತಿಯನ್ನು ಖಜಾನೆಯಿಂದ ಹಣ ಬಿಡುಗಡೆಗೊಳಿಸಲು ಓಪನಿಂಗ್ ಬ್ಯಾಲೆನ್ಸ್ ನಿರ್ಧಿಷ್ಟಪಡಿಸಲು ನೆರವಾಗುತ್ತದೆ. ಅದರ ಆಧಾರದ ಮೇಲೆ ಹೊಸದಾಗಿ ಹಣ ಬಿಡುಗಡೆಗೊಳಿಸಲು ನಿರ್ಧಾರ ಮಾಡಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ಖಾತೆಯಲ್ಲಿರುವ ಪ್ರತಿದಿನದ ವಹಿವಾಟಿನ ಮಾಹಿತಿ ಬ್ಯಾಂಕ್‌ಗಳಿಂದ ಆರ್ಥಿಕ ಇಲಾಖೆಗೆ ಲಭ್ಯವಾಗುವುದಿಲ್ಲ.

30.ವಿರೋಧ ಪಕ್ಷದವರು ನಿಗಮದಲ್ಲಿ ನಡೆದಿರುವ ಹಗರಣದ ಕುರಿತು ಮಾತನಾಡುವಾಗ ಮುಖ್ಯಮಂತ್ರಿಗಳನ್ನು, ಆರ್ಥಿಕ ಇಲಾಖೆಯನ್ನು ಗುರಿ ಮಾಡುತಿದ್ದಾರೆ. ಆದರೆ, ರಾಜ್ಯದಲ್ಲಿ ಹಗರಣಗಳ ಸರಮಾಲೆಯನ್ನೇ ನಡೆಸಿರುವ ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಇನ್ನಿತರೆ ಬ್ಯಾಂಕುಗಳು ಯಾರ ಅಧೀನದಲ್ಲಿ ಬರುತ್ತವೆ? ವಿರೋಧ ಪಕ್ಷದವರಿಗೆ ಅರ್ಥವಾಗದಿದ್ದರೆ ಬಿಡಿಸಿ ಹೇಳುತ್ತೇನೆ. ಇವೆಲ್ಲವೂ ರಾಷ್ಟ್ರೀಕೃತ ಬ್ಯಾಂಕುಗಳು. ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿ ಬರುತ್ತವೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿದ್ದಾರೆ. ದೇಶದಲ್ಲಿ ಹೆಚ್ಚು ಬ್ಯಾಂಕಿಂಗ್ ಹಗರಣಗಳು ಪ್ರಾರಂಭವಾಗಿದ್ದೇ ಕಳೆದ 6-7 ವರ್ಷಗಳಿಂದ.

ಉದಾಹರಣೆಗೆ, ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಆಗಿರುವ ಬೃಹತ್ ಹಗರಣದ ಕುರಿತು ಯಾಕೆ ಕೇಂದ್ರ ಸರ್ಕಾರ ಯಾವುದೇ ಕ್ರಮವಹಿಸದೆ ಸುಮ್ಮನಿದೆ? ಬಡ ಠೇವಣಿದಾರರ ಸಾವಿರಾರು ಕೋಟಿ ಹಣವನ್ನು ದೋಚಿಕೊಂಡಿದ್ದರೂ ಐ.ಟಿ., ಇ.ಡಿ., ಸಿ.ಬಿ.ಐ. ನವರು ಏನು ಮಾಡುತ್ತಿದ್ದರು? ಅದರಲ್ಲಿ ಎಷ್ಟು ಹಣ ರಿಕವರಿ ಮಾಡಿ ಬಡ ಠೇವಣಿದಾರರಿಗೆ ಮರಳಿಸಲಾಗಿದೆ? ಬ್ಯಾಂಕಿನ ಆಡಳಿತ ಮಂಡಳಿಯಲ್ಲಿದ್ದ ಬಲಿಷ್ಠ ರಾಜಕಾರಣಿಗಳಿಗೆ ಯಾವ ಶಿಕ್ಷೆ ಆಯಿತು? ಜಯನಗರ, ಬಸವನಗುಡಿಯ ಜನ ಮನೆಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಹಗರಣದಲ್ಲಿ ಭಾಗವಹಿಸಿದ್ದವರು ವಿಧಾನಸೌಧ, ಪಾರ್ಲಿಮೆಂಟಿಗೂ ಹೋಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸೆಲೆಕ್ಟಿವ್ ಅಪ್ರೋಚ್‌ನಿಂದಾಗಿ ಹಗರಣಗಳು ಹೆಚ್ಚಾಗುತ್ತಿವೆಯೇ ಹೊರತು, ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ಮುಖಂಡರ ಮೇಲೆ ಹಗರಣಗಳ ಆರೋಪಗಳಿದ್ದರೆ ಅವರನ್ನು ಬಿ.ಜೆ.ಪಿ. ಗೆ ಸೇರಿಸಿಕೊಂಡ ನಂತರವೇ ಹಗರಣ ಮುಕ್ತ ಮಾಡಲಾಗುತ್ತಿದೆ. ಹೀಗಿದ್ದರೆ ಯಾವ ಕಳ್ಳರಿಗೆ ತಾನೆ ಭಯ ಹುಟ್ಟಲು ಸಾಧ್ಯ? ವಿರೋಧ ಪಕ್ಷದವರನ್ನು ನೋಡಿದರೆ ಇಲ್ಲಿ ಗಂಟೆಗಟ್ಟಲೆ ನಿಂತು ನೈತಿಕತೆಯ ಬಗ್ಗೆ ಪಾಠ ಮಾಡುತ್ತಾರೆ.

31. ನಾನು ಪದೆ ಪದೆ ಈ ಸದನಕ್ಕೂ ನಾಡಿನ ಜನರಿಗೂ ಭರವಸೆ ನೀಡಬಯಸುತ್ತೇನೆ. ನಾವು ಪರಿಶಿಷ್ಟ ಜಾತಿ, ಪಂಗಡ, ದಮನಿತ ಸಮುದಾಯದವರಿಗೆ ಒದಗಿಸಿದ ಪ್ರತಿ ಪೈಸೆಯನ್ನೂ ಖರ್ಚು ಮಾಡುತ್ತೇವೆ ಮತ್ತು ಗುಣಾತ್ಮಕವಾಗಿ ವಿನಿಯೋಗಿಸುತ್ತೇವೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಳ್ಳರು ಯಾರೇ ಇದ್ದರೂ ಅವರನ್ನು ನಿರ್ಧಾಕ್ಷಿಣ್ಯವಾಗಿ ಶಿಕ್ಷಿಸುತ್ತೇವೆ. ಬಿ.ಜೆ.ಪಿ. ಅವಧಿಯ ಎಲ್ಲ ಹಗರಣಗಳನ್ನೂ ತನಿಖೆಗೆ ಒಪ್ಪಿಸುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಸದನಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಉತ್ತರವನ್ನು ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಮಂಡ್ಯದ ‘KRS ಡ್ಯಾಂ’ನಿಂದ ಹೆಚ್ಚುವರಿ ನೀರು ಬಿಡುಗಡೆ: ಮುಂಜಾಗ್ರತೆ ವಹಿಸುವಂತೆ ‘DC ಡಾ: ಕುಮಾರ್’ ಸೂಚನೆ

ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್‌ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾಹಿತಿ

Share. Facebook Twitter LinkedIn WhatsApp Email

Related Posts

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM1 Min Read

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM1 Min Read

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM1 Min Read
Recent News

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM

Watch Video: ಆಲಿಕಲ್ಲು ಮಳೆಗೆ ಸಿಕ್ಕ ದೆಹಲಿ-ಶ್ರೀನಗರ ಇಂಡಿಗೋ ವಿಮಾನ: ಬೆಚ್ಚಿ ಬಿದ್ದ ಪ್ರಯಾಣಿಕರ ವೀಡಿಯೋ ನೋಡಿ | IndiGo Flight Hit By Hailstorm

21/05/2025 9:14 PM

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM
State News
KARNATAKA

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

By kannadanewsnow0521/05/2025 9:25 PM KARNATAKA 1 Min Read

ಕೊಪ್ಪಳ : ನಿನ್ನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಹಾಡಹಗಲೇ ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥೆಯನ್ನು ಕರೆದೋಯ್ದು ಅತ್ಯಾಚಾರಕ್ಕೆ…

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM

BIG NEWS : ಚಿಕ್ಕಮಗಳೂರುಲ್ಲಿ ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ನುಗ್ಗಿದ ಟಿಟಿ : ಪ್ರವಾಸಿಗರ ಪರದಾಟ!

21/05/2025 8:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.