ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾರೆ. ಅಲ್ಲದೇ ಸಚಿವ ನಾಗೇಂದ್ರ ಅವರ ಹೆಸರು ಕೂಡ ಬರೆದಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕವನ್ನು ಲೂಟಿ ಮಾಡುವುದಕ್ಕೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಲೂಟಿ ಜತೆಗೆ ಅಧಿಕಾರಿಗಳ ಜೀವವನ್ನು ಬಲಿ ಪಡೆಯುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ನಡೆದ ₹187.33 ಕೋಟಿ ಹಗರಣ ಸಂಬಂಧ ಸಚಿವ ನಾಗೇಂದ್ರ ಅವರು ಸೇರಿದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾರೆ ಎಂದಿದೆ.
ಹಗರಣದ ಪ್ರಮುಖ ಆರೋಪಿ ಸಚಿವ ಬಿ. ನಾಗೇಂದ್ರ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಸಿದ್ಧರಾಮಯ್ಯ ಅವರು ಕೂಡಲೇ ಕಳಂಕಿತ ಸಚಿವರನ್ನು ಸಂಪುಟದಿಂದ ವಜಾಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದೆ.
ಕರ್ನಾಟಕವನ್ನು ಲೂಟಿ ಮಾಡುವುದಕ್ಕೆಂದೇ ಅಧಿಕಾರಕ್ಕೆ ಬಂದಿರುವ @INCKarnataka ಸರ್ಕಾರ, ಲೂಟಿ ಜತೆಗೆ ಅಧಿಕಾರಿಗಳ ಜೀವವನ್ನು ಬಲಿ ಪಡೆಯುತ್ತಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ನಡೆದ ₹187.33 ಕೋಟಿ ಹಗರಣ ಸಂಬಂಧ ಸಚಿವ @BNagendraINC ಅವರು ಸೇರಿದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು… pic.twitter.com/Emh26d9gH0
— BJP Karnataka (@BJP4Karnataka) May 27, 2024
BREAKING : ಮಹಿಳೆ ಕಿಡ್ನಾಪ್ ಕೇಸ್ : ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ
ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ? HD ಕುಮಾರಸ್ವಾಮಿ ಕಿಡಿ