ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದಂತ ಅಕ್ರಮ ಹಣ ವ್ಯವಹಾರ ವರ್ಗಾವಣೆ ಸಂಬಂಧದ ಹಗರಣವನ್ನು ಎಸ್ಐಟಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಇಂತಹ ಹಗರಣವನ್ನು ಸಿಬಿಐನಿಂದ ಸಮಗ್ರ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.
ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐನಿಂದ ಸಮಗ್ರ ತನಿಖೆಗೆ ಕೋರಿ ಅರವಿಂದ ಲಿಂಬಾವಳಿ, ಯತ್ನಾಳ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವಂತ ಹೈಕೋರ್ಟ್ ಈಗ ಸಿಬಿಐ ತನಿಖೆಗೆ ಆದೇಶಿಸಿದೆ.
ಅಂದಹಾಗೇ ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ಈವರೆಗೆ ಸಿಬಿಐ ಬ್ಯಾಂಕ್ ವ್ಯವಹಾರದ ಬಗ್ಗೆ ಮಾತ್ರವೇ ತನಿಖೆ ನಡೆಸುತ್ತಿತ್ತು. ಈಗ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಇನ್ಮುಂದೆ ಇಡೀ ಹಗರಣದ ಸಂಪೂರ್ಣ ತನಿಖೆಯನ್ನು ನಡೆಸಲಿದೆ.
ಶಾಸಕರ ಜೊತೆಗೆ ಸುರ್ಜೆವಾಲ ಮಾತುಕತೆ ಪಕ್ಷ ಸಂಘಟನೆ ಸೀಮಿತ, ನಾಯಕತ್ವ ಬದಲಾವಣೆಗೆ ಅಲ್ಲ: DKS ಸ್ಪಷ್ಟನೆ