Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 3,000 ಕ್ಕೆ ಏರಿಕೆ | Covid in India

01/06/2025 7:08 AM

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

01/06/2025 7:06 AM

ಗಮನಿಸಿ : ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಗಂಟೆ `ನಿದ್ದೆ’ ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ

01/06/2025 7:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವೈರಮುಡಿ ಉತ್ಸವ; ಚಲುವನಾರಾಯಣಸ್ವಾಮಿ ಚೆಂದವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು
KARNATAKA

ವೈರಮುಡಿ ಉತ್ಸವ; ಚಲುವನಾರಾಯಣಸ್ವಾಮಿ ಚೆಂದವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

By kannadanewsnow0921/03/2024 10:24 PM

ಮಂಡ್ಯ : ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ಗುರುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ಗೋವಿಂದ, ಗೋವಿಂದ ಎಂಬ ಜಯಘೋಷಗಳನ್ನು ಮೊಳಗಿಸಿದರು. ಗಂಡ-ಭೇರುಂಡ ಸ್ವರೂಪಿ ಚಂದ್ರಪ್ರಭೆ ಪ್ರಭಾವಳಿಯ ಮಧ್ಯದಲ್ಲಿ ಅಲಂಕಾರ ಸ್ವರೂಪಿಯಾಗಿದ್ದ ಸ್ವಾಮಿಯ ಉತ್ಸವ ದೇವಾಲಯದಿಂದ ಹೊರ ಬರುತ್ತಿದ್ದಂತೆ ಭಕ್ತರು ದರ್ಶನ ಪಡೆದು ಸಂಭ್ರಮಿಸಿದರು.

ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 8 ಗಂಟೆಗೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ಸಾಗುವ ರಾಜಬೀದಿಯನ್ನು ತಳಿರು-ತೋರಣ, ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜ್ಯ ಮಾತ್ರವಲ್ಲದೇ ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು.
ಮೇಲುಕೋಟೆಯ ವಸತಿ ಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು.

ಇದಕ್ಕೂ ಮುನ್ನ, ಜಿಲ್ಲಾ ಖಜಾನೆ ಕಚೇರಿಯಲ್ಲಿದ್ದ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟಿಗೆಗೆ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ, ಸಿಇಓ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಹೆಚ್.ಎಲ್. ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರು ಪೂಜೆ ಸಲ್ಲಿಸುವ ಮೂಲಕ ಹೊರ ತೆಗೆದರು. ನಂತರ ಮಂಡ್ಯ ನಗರದ ಶ್ರೀ ಲಕ್ಷ್ಮೀ ಜನಾರ್ಧನ ದೇವಾಲಯದಲ್ಲಿ ಆಭರಣ ಪೆಟ್ಟಿಗೆಗೆ ಪ್ರಥಮ ಪೂಜೆ ನೆರವೇರಿತು. ವಿಶೇಷ ವಾಹನದಲ್ಲಿ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಮೇಲುಕೋಟೆಗೆ ಮೆರವಣಿಗೆ ಮೂಲಕ ಆಭರಣಗಳನ್ನು ಕೊಂಡೊಯ್ಯಲಾಯಿತು.

ನಂತರ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ, ಸಿಇಓ, ಎಡಿಸಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಆಭರಣ ಪೆಟ್ಟಿಗೆ ತೆರೆಯಲಾಯಿತು. ದೇವಾಲಯದ ಸ್ಥಾನಿಕರು ಆಭರಣ ಜೋಡಣೆ (ಪರ್ಕಾವಣೆ) ಪೂರ್ಣಗೊಳಿಸಿ ಕಿರೀಟ ಸಿದ್ಧಗೊಳಿಸಿದರು. ಮಹಾ ಮಂಗಳಾರತಿಯೊಂದಿಗೆ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಮುಡಿಗೇರಿಸಲಾಯಿತು. ವೈರಮುಡಿ ಉತ್ಸವ ಬೆಳಗಿನ ಜಾವ 3 ಗಂಟೆಯವರೆಗೂ ನಡೆಸಲಾಗುವುದು.

ವರದಿ: ಗಿರೀಶ್ ರಾಜ್, ಮಂಡ್ಯ

ರಾಜ್ಯದ 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ ವಿವಾದ: ನಾಳೆ ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ತೀರ್ಪು ಪ್ರಕಟ

ಹೈಟಿಯಿಂದ ಪ್ರಜೆಗಳ ಸ್ಥಳಾಂತರಕ್ಕೆ ‘ಆಪರೇಷನ್ ಇಂದ್ರಾವತಿ’ ಕಾರ್ಯಾಚರಣೆ ಆರಂಭ : ಇಂದು 12 ಭಾರತೀಯರು ವಾಪಸ್

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

01/06/2025 7:06 AM2 Mins Read

ಗಮನಿಸಿ : ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಗಂಟೆ `ನಿದ್ದೆ’ ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ

01/06/2025 7:02 AM1 Min Read
Nandini

ಇಂದು `ವಿಶ್ವ ಹಾಲು ದಿನಾಚರಣೆ’ : ಸ್ಪರ್ಧಾತ್ಮಕ ಬೆಲೆಗಳಲ್ಲಿ 18 ವಿವಿಧ ನಂದಿನಿ ಕೇಕ್ ಹಾಗೂ ಮಫಿನ್ ಗಳು ಮಾರುಕಟ್ಟೆಗೆ ಬಿಡುಗಡೆ.!

01/06/2025 6:44 AM2 Mins Read
Recent News

BREAKING: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 3,000 ಕ್ಕೆ ಏರಿಕೆ | Covid in India

01/06/2025 7:08 AM

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

01/06/2025 7:06 AM

ಗಮನಿಸಿ : ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಗಂಟೆ `ನಿದ್ದೆ’ ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ

01/06/2025 7:02 AM

ರಷ್ಯಾದಲ್ಲಿ ಸೇತುವೆ ಕುಸಿದು ಹಳಿ ತಪ್ಪಿದ ರೈಲು: 7 ಮಂದಿ ಸಾವು, 30 ಮಂದಿ ಆಸ್ಪತ್ರೆಗೆ ದಾಖಲು | Bridge collapse

01/06/2025 6:52 AM
State News
KARNATAKA

BIG NEWS : ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!

By kannadanewsnow5701/06/2025 7:06 AM KARNATAKA 2 Mins Read

ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಹೊರಡಿಸಿದೆ. ಸರ್ಕಾರದ…

ಗಮನಿಸಿ : ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಗಂಟೆ `ನಿದ್ದೆ’ ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ

01/06/2025 7:02 AM
Nandini

ಇಂದು `ವಿಶ್ವ ಹಾಲು ದಿನಾಚರಣೆ’ : ಸ್ಪರ್ಧಾತ್ಮಕ ಬೆಲೆಗಳಲ್ಲಿ 18 ವಿವಿಧ ನಂದಿನಿ ಕೇಕ್ ಹಾಗೂ ಮಫಿನ್ ಗಳು ಮಾರುಕಟ್ಟೆಗೆ ಬಿಡುಗಡೆ.!

01/06/2025 6:44 AM

BIG NEWS : ನಿಮ್ಮ ಬಳಿ ಈ `ರೇಷನ್ ಕಾರ್ಡ್’ ಇದ್ರೆ `ಉಚಿತ ಹೊಲಿಗೆ ಯಂತ್ರ’ ಸೇರಿ ಸಿಗಲಿವೆ ಈ 8 ಸೌಲಭ್ಯಗಳು.!

01/06/2025 6:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.