ಮಂಡ್ಯ : ಮದ್ದೂರು ನಗರದ ತಾಲೂಕು ಕಛೇರಿ ಪಕ್ಕದದಲ್ಲಿರುವ 22 ಮಳಿಗೆಗಳನ್ನು ಒಂದು ವಾರದೊಳಗೆ ಖಾಲಿ ಮಾಡಬೇಕೆಂದು ತಾಪಂ ಇಓ ರಾಮಲಿಂಗಯ್ಯ ಡೆಡ್ ಲೈನ್ ನೀಡಿದರು.
ಮದ್ದೂರು ಪೋಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಶುಕ್ರವಾರ ತೆರಳಿ ಮಳಿಗೆಗಳನ್ನು ಖಾಲಿ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿದರು. ಈ ವೇಳೆ ಮಾಲೀಕರು ಈ ರೀತಿ ಏಕಾಏಕಿ ಮಳಿಗೆಗಳನ್ನು ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗೋದು ನಮಗೆ ಸಮಯಾವಕಾಶ ನೀಡುವಂತೆ
ಅಧಿಕಾರಿಗಳು ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೋಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಈ ವೇಳೆ ಮಾತನಾಡಿದ ತಾಪಂ ಇಓ ರಾಮಲಿಂಗಯ್ಯ ಈಗಾಗಲೇ ಮಳಿಗೆಗಳ ಕರಾರು ಅವಧಿ ಮುಗಿದಿದ್ದು, ಈ ಮಳಿಗೆಗಳನ್ನು ಮರು ಹರಾಜು ಮಾಡಬೇಕೆಂದು ಹಲವು ಬಾರಿ ಮಳಿಗೆಗಳನ್ನು ಖಾಲಿ ಮಾಡುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಕಳೆದ ತಿಂಗಳು ಸಹ ಕೊನೆಯ ನೋಟೀಸ್ ನೀಡಿ ಒಂದು ವಾರದೊಳಗೆ ಖಾಲಿ ಮಾಡುವಂತೆ ಕೊನೆಯ ಸೂಚನೆ ನೀಡಲಾಗಿತ್ತು. ಇಷ್ಟಾದರೂ ಮಾಲೀಕರು ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದೆ ಖಾಲಿ ಮಾಡದ ಹಿನ್ನಲೆಯಲ್ಲಿ ಪೋಲೀಸ್ ಬಂದೋಬಸ್ತ್ ನಲ್ಲಿ ಇಂದು ಮಳಿಗೆಗಳನ್ನು ಖಾಲಿ ಮಾಡಿಸಲಾಗುತ್ತಿದೆ ಎಂದರು.
ಈ ವೇಳೆ ಮಳಿಗೆಗಳ ಮಾಲೀಕರು ಇನ್ನು ಒಂದು ವಾರ ಕಾಲಾವಕಾಶ ನೀಡಿ ಅಷ್ಟರಲ್ಲಿ ನಾವೇ ಸ್ವಯಂ ಪ್ರೇರಿತರಾಗಿ ಖಾಲಿ ಮಾಡುತ್ತೆವೆ ಎಂದು ಇಓ ರಾಮಲಿಂಗಯ್ಯ ಅವರ ಬಳಿ ಮನವಿ ಮಾಡಿದ ಪರಿಣಾಮ ಕೊನೆಯ ಕಾಲಾವಕಾಶ ನೀಡಲಾಯಿತು. ಇನ್ನೋಂದು ವಾರದಲ್ಲಿ ಖಾಲಿ ಮಾಡದಿದ್ದರೇ ಸೂಕ್ತ ಪೋಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ನರೇಗಾ ಸಹಾಯಕ ನಿರ್ದೇಶಕ ಟಿ.ವಿ.ಮಂಜುನಾಥ್, ತಾಲೂಕು ಯೋಜನಾ ನಿರ್ದೇಶಕ ಸುರೇಶ್, ತಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು, ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








