ಕಾರವಾರ: ಕರ್ನಾಟಕದಿಂದ ಉತ್ತರಾಖಂಡಕ್ಕೆ ಚಾರಣಕ್ಕೆಂದು 18 ಮಂದಿ ತೆರಳಿದ್ದರು. ಆದ್ರೇ ಹವಾಮಾನ ವೈಪರಿತ್ಯದಿಂದ ಹಿಮಪಾತ ಉಂಟಾದ ಪರಿಣಾಮ, 9 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಕೂಡ ಸೇರಿದ್ದಾರೆ.
ಉತ್ತರಾಖಂಡಕ್ಕೆ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಚಾರಣಕ್ಕೆಂದು ತೆರಳಿದ್ದರು. ಬೆಂಗಳೂರಿನಿಂದ ತೆರಳಿದ್ದಂತ 18 ಮಂದಿಯಲ್ಲಿ ಇವರು ಒಬ್ಬರಾಗಿದ್ದರು. ಪದ್ಮಿನಿ ಬೆಂಗಳೂರು ನಿವಾಸಿಯಾಗಿದ್ದರು. ಬಹುರಾಷ್ಟ್ರೀಯ ಕಂಪನಿ ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದಂತ ಪದ್ಮಿನಿ (35), ಉತ್ತರಾಖಂಡದಲ್ಲಿ ನಡೆದಂತ ಹಿಮಪಾತದಲ್ಲಿ ಸಾವನ್ನಪ್ಪಿದ್ದಾರೆ.
ಅಂದಹಾಗೇ ಕೆಲ ವರ್ಷಗಳಿಂದ ಚಾರಣದಲ್ಲಿ ಆಸಕ್ತಿ ಹೊಂದಿದ್ದಂತ ಪದ್ಮಿನಿ, ಮೇ.29ರಿಂದ ಜೂನ್.7ರವರೆಗೆ ಭಟವಾಡಿ ಮಲ್ಲಾ-ಸಿಲ್ಲಾ ಕುಶಕಲ್ಯಾಣ ಸಹಸ್ರಾತಾಲ್ ಟ್ರೆಂಕ್ಕಿಂಗ್ ಗೆ ಅನುಮತಿ ಪಡೆದ ತಡದೊಂದಿಗೆ ತೆರಳಿದ್ದರು.
ಜೂನ್.4ರಂದು ತಾಯಿಗೆ ಮೆಸೇಜ್ ಮಾಡಿದ್ದಂತ ಪದ್ಮಿನಿ, ಇಲ್ಲಿ ಹವಾಮಾನ ಸರಿಯಿಲ್ಲ ಎಂಬುದಾಗಿ ತಿಳಿಸಿದ್ದರು. ಈ ಬೆನ್ನಲ್ಲೇ ಹವಾಮಾನ ವೈಪರಿತ್ಯದಿಂದ ಹಿಮಪಾತವಾಗಿ, ಮೃತಪಟ್ಟಿರೋದಾಗಿ ತಿಳಿದು ಬಂದಿದೆ. ಅವರ ಮೃತದೇಹವನ್ನು ಬೆಂಗಳೂರಿಗೆ ತರೋ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
CM Siddaramaiah: ಸಿಎಂಗೂ ಇತ್ತಂತೆ ‘ಆ ಅಭ್ಯಾಸ’: ವೇದಿಕೆಯಲ್ಲೇ ತನ್ನ ಚಟದ ಗುಟ್ಟು ಬಿಚ್ಚಿಟ್ಟ ‘ಸಿದ್ಧರಾಮಯ್ಯ’
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!