ಬೆಂಗಳೂರು: ರಾಜ್ಯದ ಜನರಿಗೆ ಉಪಯುಕ್ತ ಮಾಹಿತಿ ಎನ್ನುವಂತೆ ಹಕ್ಕು ಬದಲಾವಣೆ, ನೀರಿನ ಸಂಪರ್ಕ, ನಮೂನೆ 3, ಕಟ್ಟಡ ಪರವಾನಿಗೆ ಪಡೆಯಲು ಈ ದಾಖಲೆಗಳು ಕಡ್ಡಾಯವಾಗಿದೆ. ನೀವು ಈ ದಾಖಲೆಗಳನ್ನು ಹಿಡಿದು ಸಂಬಂಧಪಟ್ಟಂತ ಸರ್ಕಾರಿ ಕಚೇರಿಗೆ ತೆರಳಿದರೇ, ನಿಮ್ಮ ಕೆಲಸ ಸುಲಭವಾಗಿ ಆಗಲಿದೆ.
ಹೌದು.. ಸಾರ್ವಜನಿಕರು ನಿಮ್ಮ ಆಸ್ತಿಯ ಹಕ್ಕು ಬದಲಾವಣೆ ಇರಲಿ, ನೀರಿನ ಸಂಪರ್ಕ ಪಡೆಯೋದಿರಲಿ, ನಮೂನೆ 3ಕ್ಕೆ, ಕಟ್ಟಡ ಪರವಾನಿಗೆಗೆ ಈ ದಾಖಲೆಗಳನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆ ದಾಖಲೆಗಳನ್ನು ಹೊಂದಿಸಿಕೊಂಡು ಸರ್ಕಾರಿ ಕಚೇರಿಗೆ ತೆರಳಿದ್ರೇ, ನಿಮ್ಮ ಯಾವುದೇ ಕೆಲಸವಾಗಿರಲಿ, ಸಮಸ್ಯೆ ಇಲ್ಲದೇ ಮುಗಿಯಲಿದೆ.
ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
1) ಪ್ರಸ್ತುತ ವರ್ಷದ ತೆರಿಗೆ ಪಾವತಿ ರಸೀದಿ.
2) ಪ್ರಸ್ತುತ ವರ್ಷದ ನಮೂನೆ-03.
3) ಕಟ್ಟಡ ಪರವಾನಿಗೆ ಪ್ರತಿ
4) ಆಧಾರ್ ಕಾರ್ಡ್,
5) ಜಲನಿಧಿ ತಂತ್ರಾಂಷದಲ್ಲಿನ ಅನ್ ಲೈನ್ ಆಪ್ಲಿಕೇಶನ್ ಪ್ರತಿ.
6) ನಳದ ನೀಲಿ ನಕ್ಷೆ.
7) ಅರ್ಜಿ.
ಕಟ್ಟಡ ಪರವಾನಿಗೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
1) ಕ್ರಯ ಪತ್ರದಾನ ಪತ್ರ/ಹಕ್ಕು ಬಿಡುಗಡೆ ಪತ್ರ
ಖಾತಾ ಬದಲಾವಣೆ ನಡವಳಿಕೆ ಪ್ರತಿ.
3) ಪ್ರಸ್ತುತ ವರ್ಷದ ನಮೂನೆ-3 (ಖಾತಾ ನಕಲು).
4) ಪ್ರಸ್ತುತ ವರ್ಷದ ಆಸ್ತಿ ಪ್ರತಿ
5) ಪ್ರಸ್ತುತ ವರ್ಷದ ಋಣಭಾರನಮೂನೆ-15 (ಇ.ಸಿ;ಟ) ಪ್ರತಿ.
6) ಅನುಮೋದಿತ ಲೇಔಟ್ ನಕಾಶೆ ಮತ್ತು ಎನ್.ಎ. ಆದೇಶ ಪ್ರತಿ/ ಗ್ರಾಮ ಠಾಣಾ ನಕಾಶೆ ಮತ್ತು ದೃಡೀಕರಣ ಪತ್ರ
7) ಅನುಮೋದಿತ ಲೇಔಟ್ ನಡವಳಿಕೆ ಪ್ರತಿ
8) ಇಂಡಿಮಿಟಿ ಬಾಂಡ್,
9) ಅನುಮೋದಿತ ನೆಲ ಮಹಡಿ ಕಟ್ಟಡ ಪರವಾನಿಗೆ ಮತ್ತು ಅನುಮೋದಿತ ನೆಲ ಮಹಡಿ ಕಟ್ಟಡ ನಕಾಶೆ. 10) ಆಕ್ಷೇಪಣೆ ರಹಿತ ಒಡಂಬಡಿಕೆ ಪ್ರತಿ ( ಅಕ್ಕ ಪಕ್ಕದಲ್ಲಿ ಸೆಟ್ ಬ್ಯಾಕ್ ಬಿಡದಿದ್ದಲ್ಲಿ).
11) ಸ್ಕೂಟಿನಿ ವರದಿ.
12) ಅಪಲೋಡ್ ಮಾಡಿದ ಕಟ್ಟಡದ ನಕಾಶೆ ಪ್ರತಿ.
13) ಅಂದಾಜು ಪಟ್ಟಿ .
ಫಾರಂ-3 ಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಿರಿ
* ಕ್ರಯಪತ್ರದಾನಪತ್ರ/ಪಾಲುವಿಭಾಗ ಮಾಡಿದ ರಿಜಿಸ್ಟರ್ ಪತ್ರದ ಜೆಕಾಕ್ಸ್ ಪ್ರತಿ.
* ಪಟ್ಟಾ ಜೆರಾಕ್ಸ್ ಪ್ರತಿ.
* 2017-18 ರಿಂದ 2024-25 ರ ವರೆಗಿನ ಚಾಲ್ತಿ ಆಸ್ತಿ ತೆರಿಗೆ ರಸೀದಿ.
* ಖರೀದಿದಾರರಿಗೆ ನೀಡಿದ ಹಳೇ ಫಾರಂ-3 ಜೆರಾಕ್ಸ್ ಪ್ರತಿ.
* ಖರೀದಿದಾರರ ಪಾಸ್ಪೋರ್ಟ್ ಸೈಜ್ ಫೋಟೊ.
* ಜಾಗದ/ಕಟ್ಟಡದ ಪೋಟೊ.
*2017-18 ರಿಂದ 2024-25 ರ ವರೆಗಿನ ಚಾಲ್ತಿ ನೀರಿನ ತೆರಿಗೆ ರಸೀದಿ.
* ಎನ್.ಎ. ಕಾಪಿ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶ ಮತ್ತು ನಕಾಶೆ ಪ್ರತಿಗಳು.
* ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್/ಪಾನ್ ಕಾರ್ಡ್
* ಎನ್.ಎ. ಕಾಪಿ ಇಲ್ಲದೇ ಇದ್ದರೆ ನೋಟರಿ ಬಾಂಡ್/ಅಫಿಡವಿಟ್ ಬಾಂಡ್ ನೀಡತಕ್ಕದ್ದು.
ಹಕ್ಕು ಬದಲಾವಣೆ ಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಿರಿ
* ಕ್ರಯಪತ್ರ/ದಾನಪತ್ರ/ಪಾಲುವಿಭಾಗ ಮಾಡಿದ ರಿಜಿಸ್ಟರ್ ಪತ್ರದ ಜೆಕಾಕ್ಸ್ ಪ್ರತಿ.
* ಪಟ್ಟಾ ಜೆರಾಕ್ಸ್ ಪ್ರತಿ.
* 2017-18 ರಿಂದ 2024-25 ರ ವರೆಗಿನ ಚಾಲ್ತಿ ಆಸ್ತಿ ತೆರಿಗೆ ರಸೀದಿ.
* ಖರೀದಿದಾರರಿಗೆ ನೀಡಿದ ಹಳೇ ಫಾರಂ-3 ಜೆರಾಕ್ಸ್ ಪ್ರತಿ.
* ಖರೀದಿದಾರರ ಪಾಸ್ಪೋರ್ಟ್ ಸೈಜ್ ಫೋಟೊ.
* ಜಾಗದ/ಕಟ್ಟಡದ ಫೋಟೊ.
* 2017-18 ರಿಂದ 2024-25 ರ ವರೆಗಿನ ಚಾಲ್ತಿ ನೀರಿನ ತೆರಿಗೆ ರಸೀದಿ.
* ಎನ್.ಎ. ಕಾಪಿ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶ ಮತ್ತು ನಕಾಶೆ ಪ್ರತಿಗಳು.
* ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್/ಪಾನ್ ಕಾರ್ಡ್..
* ಎನ್.ಎ. ಕಾಪಿ ಇಲ್ಲದೇ ಇದ್ದರೆ ನೋಟರಿ ಬಾಂಡ್/ಅಫಿಡವಿಟ್ ಬಾಂಡ್ ನೀಡತಕ್ಕದ್ದು.
* 13 ವರ್ಷದ ಇಸಿ ಪ್ರತಿಗಳು.
ಹಕ್ಕು ಬದಲಾವಣೆ (ಪೋತಿ ವರ್ಗಾವಣೆ) ಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಿರಿ
* ಕ್ರಯಪತ್ರ/ದಾನಪತ್ರ/ಪಾಲುವಿಭಾಗ ಮಾಡಿದ ರಿಜಿಸ್ಟರ್ ಪತ್ರದ ಜೆಕಾಕ್ಸ್ ಪ್ರತಿ.
* ಪಟ್ಟಾ ಜೆರಾಕ್ಸ್ ಪ್ರತಿ.
* 2017-18 ರಿಂದ 2024-25 ರ ವರೆಗಿನ ಚಾಲ್ತಿ ಆಸ್ತಿ ತೆರಿಗೆ ರಸೀದಿ. ಖರೀದಿದಾರರಿಗೆ ನೀಡಿದ ಹಳೇ ಫಾರಂ-3 ಜೆರಾಕ್ಸ್ ಪ್ರತಿ.
* ಖರೀದಿದಾರರ ಪಾಸ್ಪೋರ್ಟ್ ಸೈಜ್ ಫೋಟೊ.
* ಜಾಗದ/ಕಟ್ಟಡದ ಫೋಟೊ.
* 2017-18 ರಿಂದ 2024-25 ರ ವರೆಗಿನ ಚಾಲ್ತಿ ನೀರಿನ ತೆರಿಗೆ ರಸೀದಿ.
* ಎನ್.ಎ. ಕಾಪಿ ನಗರಾಭಿವೃದ್ಧಿ ಪ್ರಾಧಿಕಾರದ ಆದೇಶ ಮತ್ತು ನಕಾಶೆ ಪ್ರತಿಗಳು.
* ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್/ಪಾನ್ ಕಾರ್ಡ್
* ಎನ್.ಎ. ಕಾಪಿ ಇಲ್ಲದೇ ಇದ್ದರೆ ನೋಟರಿ ಬಾಂಡ್/ಅಫಿಡವಿಟ್ ಬಾಂಡ್ ನೀಡತಕ್ಕದ್ದು.
* 13 ವರ್ಷದ ಇ.ಸಿ ಪ್ರತಿಗಳು.
* ಮರಣ ಪ್ರಮಾಣ ಪತ್ರ
BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಹಾಡಹಗಲೇ ಗುಂಡು ಹಾರಿಸಿ ವ್ಯಕ್ತಿ ಹತ್ಯೆ