ಬೆಂಗಳೂರು: ರಾಜ್ಯ ಸರ್ಕಾರದಿಂದ ನಿಶೇಷನ ರಹಿತರಿಗೆ ತಹಶೀಲ್ದಾರರ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ. ಆದರೇ ನಿವೇಶನ ರಹಿತರು ಕೇಳುವಷ್ಟು ವಿಸ್ತೀರ್ಣದ ಜಾಗ ಮಂಜೂರು ಮಾಡಲ್ಲ. ಹಾಗಾದ್ರೆ ಎಷ್ಟು ಕೊಡ್ತಾರೆ ಅನ್ನೋ ಮಾಹಿತಿ ಮುಂದಿದೆ ಓದಿ.
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ.
ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.
ತಹಶೀಲ್ದಾರ್ ಕೈಪಿಡಿಯಲ್ಲಿನ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ 20×30 ಅಡಿ ವಿಸ್ತೀರ್ಣದ ನಿವೇಶನ ಜಮೀನಿಗೆ ಮಾತ್ರ ಹಕ್ಕು ಪತ್ರ ನೀಡಲು ತಹಶೀಲ್ದಾರರಿಗೆ ಅಧಿಕಾರ ಇರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ 30×40ರ ಅಳತೆಯ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ.
ತಹಶೀಲ್ದಾರರ ಕೈಪಿಡಿಯಲ್ಲಿ ಏನಿದೆ.?
ಮಂಜೂರಾದ ನಿವೇಶನದ ಮೌಲ್ಯ
ಷೆಡ್ಯೂಲ್ನಲ್ಲಿ ವಿಧಿಸಿರುವ ದರದಂತೆ ಮಂಜೂರಾದ ಜಮೀನಿನ ಮೌಲ್ಯವನ್ನು ಮಂಜೂರಾ ದಿನಾಂಕದಿಂದ 2 ತಿಂಗಳೊಳಗಾಗಿ ಪಾವತಿಸತಕ್ಕದ್ದು.
1. ಪ.ಜಾತಿ/ಪ. ಪಂಗಡದವರಿಗೆ ಶೇ. 50 ರಷ್ಟು ವಿನಾಯಿತಿ.
2. ಆರ್ಥಿಕ ಹಿಂದುಳಿದ ವರ್ಗದವರಿಗೆ ನಗರಪ್ರದೇಶದಲ್ಲಿ 20 X 30ರ ವಿಸ್ತೀರ್ಣ, ಗ್ರಾಮೀಣ ಪ್ರದೇಶದಲ್ಲಿ 30 X 40ರ ವಿಸ್ತೀರ್ಣದ ನಿವೇಶನದ ಜಮೀನಿಗೆ ಯಾವುದೇ ಮೌಲ್ಯ ಪಾವತಿಸುವುದರಿಂದ ವಿನಾಯಿತಿ. (ನಿ. 6)
ಪರಂತು ನಗರ ಪ್ರದೇಶದಲ್ಲಿ 20 X 30ರ ಮತ್ತು ಗ್ರಾಮೀಣ ಪ್ರದೇಶದಲ್ಲಿ 30 X 40 ಅಳತೆಯ ನಿವೇಶನಗಳಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳು ಯಾವುದೇ ಮೊಬಲಗು ಸಂದಾಯ ಮಾಡತಕ್ಕದ್ದಲ್ಲ. (ಅಧಿಸೂಚನೆ ಸಂ:ಆರ್.ಡಿ22.ಎಲ್.ಜಿ.ಪಿ2004, ದಿನಾಂಕ: 26-8-2005).
ಬೆಂಗಳೂರಲ್ಲಿ ‘ಜ್ಞಾನಭಾರತಿ RTO ಅಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: 7 ವಾಹನ ಸೀಜ್, RC ಸಸ್ಪೆಂಡ್
BREAKING : ಭಾರತವನ್ನು ‘ಹಿಂದೂ ರಾಷ್ಟ್ರ’ ವನ್ನಾಗಿ ಮಾಡಲು ನಾವು ಬಿಡಲ್ಲ : ಯತೀಂದ್ರ ಸಿದ್ದರಾಮಯ್ಯ ವಿವಾದ!