ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಆ ಮೂಲಕ ಗ್ರಾಮೀಣ ಜನರು ತಾಲ್ಲೂಕು, ಜಿಲ್ಲಾ ಮಟ್ಟಕ್ಕೆ ಅಲೆಯುವುದನ್ನು ಸರ್ಕಾರ ತಪ್ಪಿಸಿದೆ. ಹಾಗಾದ್ರೇ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಎನ್ನುವಂತೆ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಸಿಗುವಂತ ಸೇವೆಗಳ ಸಂಪೂರ್ಣ ಮಾಹಿತಿ ಮುಂದಿದೆ ಓದಿ ತಿಳಿದುಕೊಳ್ಳಿ.
ಬಾಪೂಜಿ ಸೇವಾ ಕೇಂದ್ರ (ಬಿ.ಎಸ್.ಕೆ.)(bsk.karnataka.gov.in)
ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ‘ಬಾಪೂಜಿ ಸೇವಾ ಕೇಂದ್ರ’.
ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪಿದೆ. ‘ಬಾಪೂಜಿ ಸೇವಾ ಕೇಂದ್ರ’ದಿಂದ ದೊರೆಯುವ ಸೇವೆಗಳು ಕೆಳಕಂಡಂತೆ ಇವೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು
1. ಕಟ್ಟಡಪರವಾನಗಿ
2. ತೆರಿಗೆ ನಿರ್ಧರಣಾಪಟ್ಟವಿತರಣೆ
3. ಕಟ್ಟಡ ಸ್ವಾಧೀನ ಪತ್ರ
4. ಹೊಸನೀರಿನಸಂಪರ್ಕಕ್ಕಾಗಿಅರ್ಜಿ
5. ವ್ಯಾಪಾರಪರವಾನಗಿವಿತರಣೆ (ಹೊಟೇಲ್‌ಮತ್ತುಅಂಗಡಿ)
6. ಕಾರ್ಖಾನೆಗೆಅನುಮತಿ ಪತ್ರ
7. ಜಾಹೀರಾತುಪರವಾನಗಿ
8. ನೀರಿನಸಂಪರ್ಕಕಡಿತ
9. ಕುಡಿಯುವನೀರಿನನಿರ್ವಹಣೆ(ಸಣ್ಣ ರಿಪೇರಿ)
10, ಬೀದಿ ದೀಪಗಳ ನಿರ್ವಹಣೆ
11. ಗ್ರಾಮನೈರ್ಮಲ್ಯನಿರ್ವಹಣೆ
12. ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)
13. ESCOMS ನಿರಾಕ್ಷೇಪಣಿಪತ್ರ
14. ಮನರಂಜನಾ ಪರವಾನಗಿ ನೀಡಿಕೆ ( ಹೊಸ/ಹೆಚ್ಚುವರಿ/ಬದಲಾವಣೆ)
15. Jass 9/11 A-Form 9/11A
16. ನಮೂನೆ 9/11 B-Form 9/11B
17. ರಸ್ತೆ ಅಗೆಯುವುದಕ್ಕಾಗಿ ಅನುಮತಿ
18. ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)
19. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)
ಕಂದಾಯ ಇಲಾಖೆಯ 40 ಸೇವೆಗಳ ಲಭ್ಯ
- ಜನಸಂಖ್ಯೆ ದೃಢೀಕರಣ ಪತ್ರ
- ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
- ಜಾತಿ ಮತ್ತು ಆದಾಯ ದೃಢೀಕರಣ ಪತ್ರ
- ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
- ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
- ವಾಸಸ್ಥಳ ದೃಢೀಕರಣ ಪತ್ರ
- ಆದಾಯ ದೃಢೀಕರಣ ಪತ್ರ
- ಗೇಣಿ ರಹಿತ ದೃಢೀಕರಣ ಪತ್ರ
- ವಿಧವಾ ದೃಢೀಕರಣ ಪತ್ರ
- ಜೀವಂತ ದೃಢೀಕರಣ ಪತ್ರ
- ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
- ಮರು ವಿವಾಹವಾಗದಿರುವ ದೃಢೀಕರಣ ಪತ್ರ
- ಜಮೀನು ಇಲ್ಲದಿರುವ ದೃಢೀಕರಣ ಪತ್ರ
- ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
- ನಿರುದ್ಯೋಗಿ ದೃಢೀಕರಣ ಪತ್ರ
- ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
- ವ್ಯವಸಾಯಗಾರರ ದೃಢೀಕರಣ ಪತ್ರ
- ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ
ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಮತ್ತು ಯೋಗಕ್ಷೇಮವನ್ನು ಸಾಧಿಸುವ ದಿಸೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯು ಕಾರ್ಯೋನ್ಮುಖವಾಗಿದೆ.ಇದಕ್ಕಾಗಿ “ಆರೋಗ್ಯ ಕರ್ನಾಟಕ” ಯೋಜನೆಯನ್ನು ಆರಂಭಿಸಿದೆ.ಇದರಲ್ಲಿ ವಿವಿಧ ಆರೋಗ್ಯ ಯೋಜನೆಗಳ ಸಂಪನ್ಮೂಲವನ್ನು ಕ್ರೋಡೀಕರಿಸಲಾಗಿದೆ.ಅವುಗಳೆಂದರೆ, ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಇತ್ಯಾದಿಗಳು.
ಕರ್ನಾಟಕದ ಎಲ್ಲಾ ನಾಗರಿಕರಿಗೆ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆಗಳನ್ನು ನೀಡುವುದರ ಮೂಲಕ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.ಭಾರತ ಸರ್ಕಾರವು ಆಯುಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿರುತ್ತದೆ.ಈ ಎರಡೂ ಯೋಜನೆಗಳ ಉದ್ದೇಶ. ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ‘ಆಯುಾನ್ ಭಾರತ್ ಆರೋಗ್ಯ ಕರ್ನಾಟಕ’ ಎಂದು ಹೆಸರಿಸಲಾಗಿದೆ.ಈ ಯೋಜನೆಯು 2018ರಿಂದ ಹಂತಹಂತವಾಗಿ ಜಾರಿಗೆ ಬರುತ್ತಿದೆ.
ಅರ್ಹತೆ ಹಾಗೂ ಚಿಕಿತ್ಸಾ ಮೊತ್ತ
ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ.ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದೆ.ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ.ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಚಿಕಿತ್ಸೆಗಳು
ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು
ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು
ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ.
169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?
ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ.ದ್ವಿತೀಯ ಕ್ಲಿಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ.ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ.ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ಆರೋಗ್ಯ ಕಾರ್ಡ್
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯ ಅಡಿಯಲ್ಲಿ ಕಾರ್ಡ್‌ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ.ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ರೂ.35/- ಶುಲ್ಕದೊಂದಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್‌ಗಳನ್ನು ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು.
ನೋಂದಾಯಿತ ಆಸ್ಪತ್ರೆಗಳ ಮಾಹಿತಿ
ಟೋಲ್ ಫ್ರೀ ಸಂಖ್ಯೆ: 1800 425 8330 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. 104 ರ ಕರೆ ಕೇಂದ್ರವನ್ನು ಸಂಪರ್ಕಿಸಿ ಸಹ ಮಾಹಿತಿ ಪಡೆಯಬಹುದು.ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಕಟಿಸಿರುವ ಸಮೀಪದ ನೊಂದಾಯಿತ ಆಸ್ಪತ್ರೆಗಳ ಪಟ್ಟಿಯನ್ನು ನೋಡಬಹುದು.
ವಿಕಲಚೇತನರ ಗುರುತಿನ ಕಾರ್ಡ್ ವಿತರಣೆ
ವಿಶಿಷ್ಟ ಗುರುತಿನ ಚೀಟಿಯು ವಿಕಲಚೇತನ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದೆ.
ವಿಕಲಚೇತನರ ರಾಷ್ಟ್ರ ಮಟ್ಟದ ಡ್ಯಾಟಾಬೇಸ್ ಸೃಜಿಸುವ ಆಶಯ ಹೊಂದಿದೆ.
ನಕಲು ಪ್ರತಿಗಳನ್ನು ವಿಶಿಷ್ಟ ಗುರುತಿನ ಚೀಟಿಯನ್ನು ಪಡೆಯುವುದರಿಂದ ವಿಕಲಚೇತನರು ಬಹುದಾಖಲೆಗಳನ್ನು ನಿರ್ವಹಿಸುವುದಾಗಲಿ, ಕೊಂಡ್ಯೂಯುವುದಾಗಲಿ ಮತ್ತು ಅದರ ಮಾಡಿಸುವುದಾಗಲಿ ಅಗತ್ಯವಿರುವುದಿಲ್ಲ.
ಇದನ್ನು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪಡೆಯಬಹುದು.
ವಿಕಲಚೇತರನರು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ತುರ್ತಾಗಿ ವೈದ್ಯಕೀಯ ಪರೀಕ್ಷೆ ನಡೆಸುವುದು. ಒದಗಿಸಬೇಕಾದ ದಾಖಲೆಗಳು: ಪ್ರಸಕ್ತ ಸಮಯದ ವರ್ಣಛಾಯಚಿತ್ರ (ಕಲರ್ ಫೋಟೋ) ಸ್ಕ್ಯಾನ್ ಪ್ರತಿ, ಹಸ್ತಾಕ್ಷರದ ಸ್ಕ್ಯಾನ್ ಪ್ರತಿ (ಕಡ್ಡಾಯವಿಲ್ಲ), ವಿಳಾಸದ ಗುರುತಿನ ದಾಖಲೆ (Proof of Address)ಯ ಸ್ಕ್ಯಾನ್ ಪ್ರತಿ (ಆಧಾರ್/ವಾಹನಚಾಲನ ಪರವಾನಗಿ / ವಾಸ ದೃಢೀಕರಣ ಪತ್ರ, ಇತ್ಯಾದಿ), ವ್ಯಕ್ತಿಗಳ ಗುರುತಿನ ದಾಖಲೆ (Proof of Identity) ಯ ಸ್ಕ್ಯಾನ್ ಪ್ರತಿ (ಆಧಾರ್ ಕಾರ್ಡ್ /ಪ್ಯಾನ್ ಕಾರ್ಡ್/ ವಾಹನಚಾಲನ ಪರವಾನಗಿ, ಇತ್ಯಾದಿ), ವಿಕಲಚೇತನತೆಯ ದೃಢೀಕರಣ ಪತ್ರದ ಸ್ಕ್ಯಾನ್ ಪ್ರತಿ (ನಿಗದಿಪಡಿಸಿರುವ ವೈದ್ಯಕೀಯ ಪ್ರಾಧಿಕಾರದವರಿಂದ)
ವೈದ್ಯಕೀಯ ಪರೀಕ್ಷೆಗಾಗಿ ಎಲ್ಲಾ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳ ಜಿಲ್ಲಾ ಶಸ್ತ್ರಚಿಕಿತ್ಸಕರು. ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳ ವೈದ್ಯಕೀಯ ಅಧೀಕ್ಷಕರುಗಳು ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಯ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನು ವೈದ್ಯಕೀಯ ಪ್ರಾಧಿಕಾರಿಗಳು ಎಂದು ಗುರುತಿಸಿ ಆದೇಶಿಸಿದೆ.
ಅರ್ಜಿ ಸಲ್ಲಿಸಿದ ನಾಲ್ಕು ವಾರದಲ್ಲಿ ವಿಕಲಚೇತನರುಗಳಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
ಕಟ್ಟಡ ಪರವಾನಗಿ ಅನುಮತಿ/ಲೈಸನ್ಸ್
• ಯಾವುದೇ ವ್ಯಕ್ತಿಯು ಗ್ರಾಮ ಪಂಚಾಯಿತಿಯಿಂದ ಬರಹದ ಅನುಮತಿಯಿಲ್ಲದೆ ಯಾವುದೇ ಕಟ್ಟಡವನ್ನು ನಿರ್ಮಿಸತಕ್ಕದ್ದಲ್ಲ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಕಟ್ಟಡವನ್ನು ಬದಲಾಯಿಸುವಂತಿಲ್ಲ
• ಖಾಲಿ ಇರುವ ಯಾವುದೇ ಜಾಗದಲ್ಲಿ ಅಥವಾ ಸ್ಥಳದಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವಂತಿಲ್ಲ.
• ಕಾಯಿದೆ ಮತ್ತು ನಿಯಮಗಳು ನಿರ್ದಿಷ್ಟಪಡಿಸಿದ ಶುಲ್ಕವನ್ನು ಸಂದಾಯ ಮಾಡಿದ ಮೇಲೆ ಅನುಮತಿಯನ್ನು ನೀಡಬಹುದು.
• ಗ್ರಾಮ ಪಂಚಾಯಿತಿಯು ಕಟ್ಟಡ ನಿರ್ಮಾಣಕ್ಕಾಗಿ ಅರ್ಜಿ ಸ್ವೀಕರಿಸಿದ 60 ದಿನಗಳೊಳಗಾಗಿ ಅನುಮತಿ ಕೊಡಬಹುದೇ ಅಥವಾ ಕೊಡಬಾರದೇ ಎಂದು ತೀರ್ಮಾನಿಸಿ ಅರ್ಜಿದಾರರಿಗೆ ತಿಳಿಸಬೇಕು.
• ಒಂದು ವೇಳೆ ಅರ್ಜಿದಾರರರಿಗೆ 60 ದಿನಗಳಲ್ಲಿ ಪಂಚಾಯಿತಿಯು ತಮ್ಮ ತೀರ್ಮಾನವನ್ನು ತಿಳಸದಿದ್ದರೆ ಅಂತಃ ಸಂದರ್ಭದಲ್ಲಿ ಅರ್ಜಿದಾರರಿಗೆ ಅನುಮತಿ ನೀಡಲಾಗಿದೆ ಎಂದು ಭಾವಿಸಿ ತಮ್ಮ ಕೆಲಸವನ್ನು ಪ್ರಾರಂಭಿಸಬಹುದು. ಆದರೆ ಅಧಿನಿಯಮದಡಿ ರಚನೆಯಾದ ನಿಯಮಗಳ ಅಥವಾ ಉಪವಿಧಿಗಳನ್ನು ಮೀರುವಂತಿಲ್ಲ.
• ಕಟ್ಟಡದ ರಚನೆ, ಸೇರ್ಪಡೆ ಮತ್ತು ಬದಲಾವಣೆಯಿಂದ ಸಾರ್ವಜನಿಕ ಆರೋಗ್ಯ, ಜೀವಕ್ಕೆ ಅಥವಾ ಸ್ವತ್ತಿಗೆ ಅಪಾಯವಾಗುತ್ತಿದೆ ಎಂದು ಮನದಟ್ಟಾದಲ್ಲಿ ನಿರ್ದಿಷ್ಟ ದಿನಗಳ ನೋಟೀಸನ್ನು ನೀಡಿ ಸೇರ್ಪಡೆ, ಬದಲಾವಣೆಯನ್ನು ಕೆಡವಿ ಹಾಕಬಹುದು.
• ಗ್ರಾಮ ಪಂಚಾಯಿತಿಗಳು ಕಟ್ಟಡದ ಲೈಸೆನ್ನು ಅಥವಾ ವಸತಿ ಅಥವಾ ವಾಸಸ್ಥಳಗಳ ಲೇಔಟ್‌ಗಳ ಅನುಮೋದನೆಯನ್ನು ನೀಡುವ ಸಂದರ್ಭದಲ್ಲಿ “ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ”ದ ಉಪಬಂಧಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಅನುಷ್ಠಾನದಲ್ಲಿ ಉಪಬಂಧಗಳ ಯಾವುದೇ ಉಲ್ಲಂಘನೆ ಮಾಡಿದರೆ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳಬಹುದು.
ವಾಣಿಜ್ಯ ಪರವಾನಗಿ /ಲೈಸನ್ಸ್
• ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು, ಹೋಟೆಲ್, ಉಪಹಾರ ಗೃಹ, ಭೋಜನ ಗೃಹ, ಕಾಫಿ ಮಂದಿರ, ಮಿಠಾಯಿ ಅಂಗಡಿ, ಬೇಕರಿ, ಊಟದ ಗೃಹ ಅಥವಾ ವಸತಿ ಗೃಹ (ಸರ್ಕಾರದ ಹಾಸ್ಟೆಲ್ ಗಳನ್ನು ಹೊರತುಪಡಿಸಿ), ಧರ್ಮಶಾಲೆ ಆರಂಭಿಸಲು ಪಂಚಾಯಿತಿಯ ಅನುಮತಿ ಅಗತ್ಯ. ಇಲ್ಲದಿದ್ದರೆ ಯಾವುದೇ ಚಟುವಟಿಕೆಯನ್ನು ಕೈಗೊಳ್ಳುವಂತಿಲ್ಲ.
• ಹೋರ್ಡಿಂಗ್‌ಗಳನ್ನು ಹಾಕಲು ನಿರ್ದಿಷ್ಟಪಡಿಸಿದ ದರಗಳಲ್ಲಿ ಶುಲ್ಕವನ್ನು ನಿಗದಿ ಮಾಡಿ ಸಂಗ್ರಹಸಿ ಲೈಸನ್ಸ್ ನೀಡಬಹುದು.
• ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಅನುಮತಿ ಅಥವಾ ಲೈಸನ್ಸನ್ನು ನವೀಕರಿಸಲು ಅರ್ಜಿಯನ್ನು 30 ದಿನಗಳಿಗೆ ಕಡಿಮೆ ಇಲ್ಲದಂತೆ ಮತ್ತು 90 ದಿನಗಳಿಗೆ ಹೆಚ್ಚಿಲ್ಲದಂತೆ ಸಲ್ಲಿಸಬೇಕು.
• ವಾಣಿಜ್ಯ ಕಟ್ಟಡವೆಂದರೆ, ಅಂಗಡಿಗಳು, ಮಳಿಗೆಗಳು, ಮಾರುಕಟ್ಟೆ, ಚಿಲ್ಲರೆ ಮಾರಾಟ ಸೇರಿರುತ್ತವೆ. ಮಾರಾಟ ಸರಕನ್ನು ಪ್ರದರ್ಶಿಸಲು ಅಥವಾ ಮಾರಾಟ ಮಾಡಲು ಉಪಯೋಗಿಸುವ ಕಟ್ಟಡ, ಅದರ ಭಾಗ, ಉಗ್ರಾಣವೂ ಸಹ ಈ ಸಮೂಹದಲ್ಲಿ ಒಳಗೊಂಡಿರುತ್ತದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿ ಆಸ್ತಿಗಳ ನಿರ್ವಹಣಿ/ಖಾತೆ ಬದಲಾವಣೆ
ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಯಲ್ಲಿ ಬರುವ ನಿವೇಶನ, ಕಟ್ಟಡ ಮತ್ತು ಕೃಷಿಯೇತರ ಭೂಮಿಗಳಿಗೆ ಖಾತೆ ಬದಲಾವಣೆ ಮಾಡಿಕೊಡಲು ಶುಲ್ಕವನ್ನು ವಿಧಿಸಬಹುದಾಗಿದೆ.ಸ್ವತ್ತುಗಳ/ ಆಸ್ತಿಗಳ ಖಾತೆ ಬದಲಾವಣೆಗೆ ಎಲ್ಲಾ ದಾಖಲೆಗಳು ಪಂಚಾಯಿತಿಗೆ ಸಲ್ಲಿಸಬೇಕು.ಶುಲ್ಕಗಳನ್ನು ಪಾವತಿಸಬೇಕು.ನಂತರ ಆನ್ ಲೈನಿನಲ್ಲಿ ಇ-ಸ್ವತ್ತಿನ ಮೂಲಕ ನಮೂನೆ-9 ಮತ್ತು ನಮೂನೆ -11 ನ್ನು ಪಡೆಯಬಹುದಾಗಿದೆ.
ಗ್ರಾಮ ಪಂಚಾಯಿತಿಯ ಆಸ್ತಿಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸುವುದು ಮತ್ತು ರಕ್ಷಿಸುವುದು ಪಂಚಾಯಿತಿಯ ಕೆಲಸವಾಗಿದೆ.ಇದಕ್ಕಾಗಿ ಗ್ರಾಮ ಪಂಚಾಯಿತಿಯು ತನ್ನ ಆಸ್ತಿ ರಿಜಿಸ್ಟರನ್ನು ನಿರ್ವಹಿಸಬೇಕಾಗಿರುತ್ತದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ನೀಡಿಕೆ
ಮಾಹಿತಿ ಹಕ್ಕು ಅಧಿನಿಯಮವು 2005 ರಿಂದ ಇಡೀ ದೇಶದಲ್ಲಿ ಜಾರಿಯಾಗಿದೆ. ಈ ಕಾಯ್ದೆಯ ಮುಖ್ಯ ಉದ್ದೇಶ: ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ, ಉತ್ತರದಾಯಿತ್ವ ಮತ್ತು ಜವಾಬ್ದಾರಿಯುತೆಯನ್ನು ತರುವುದಾಗಿದೆ. ಈ ಉದ್ದೇಶಗಳಿಗನುವಾಗಿ ರಾಷ್ಟ್ರದಲ್ಲಿ ಅಭಿವೃದ್ಧಿಯಲ್ಲಿ ಏಕರೂಪತೆ ಮತ್ತು ಪ್ರಜೆಗಳ ಬೇಡಿಕೆಗಳಗುಣವಾಗಿ ಸಾಧನೆಗಳನ್ನು ಮಾಡುವುದಾಗಿದೆ.ಈ ಅಧಿನಿಯಮದಂತೆ ಗ್ರಾಮ ಪಂಚಾಯಿತಿಗಳು ಮಾಹಿತಿಯನ್ನು ಪ್ರಚೂರಪಡಿಸಬೇಕಾಗಿದೆ.ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಅಧಿಕಾರಿಯಾಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯನ್ನು ನಿಯೋಜಿಸಿದೆ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಿರುತ್ತದೆ.
ಸಕಾಲ ಅಡಿ ಸೇವೆಗಳ ನೀಡಿಕೆ
ಸರ್ಕಾರದ ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಂದ ನಾಗರಿಕರಿಗೆ ನೀಡಬೇಕಾದ ಸೇವೆಗಳನ್ನು ನಿಗದಿತ ಅವಧಿಯೊಳಗೆ ಖಚಿತಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು “ ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ 2011″ನ್ನು 2012 ಜನವರಿ 26 ರಿಂದ ಜಾರಿಗೊಳಿಸಿದೆ. ಕಾಯ್ದೆಯ ಉದ್ದೇಶವನ್ನು ಸರಳವಾಗಿ ಜನರಿಗೆ ತಲುಪಿಸುವ ಸಲುವಾಗಿ ಕಾಯ್ದೆಗೆ ಸಕಾಲ ಎಂದು ಕರೆಯಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿ ಒಟ್ಟು 19 ಸೇವೆಗಳನ್ನು ಸಕಾಲ ಸೇವೆಗಳಲ್ಲಿ ಸಾರ್ವಜನಿಕರಿಗೆ ಖಾತರಿಪಡಿಸಲಾಗಿದೆ.ಅವುಗಳ ವಿವರ ಈ ಕೆಳಗಿನಂತಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ: MLC ಕೆ.ಶಿವಕುಮಾರ್ ಘೋಷಣೆ
ಸಮಾಜದ ಅಸಮಾನತೆಯನ್ನು ತೊಲಗಿಸಲು ಪ್ರತಿಯೊಬ್ಬರೂ ಶಿಕ್ಷಿತರಾಗಲೇಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ








