ಬೆಂಗಳೂರು: ಎರೆಹುಳುಗಳನ್ನು ರೈತ ಮಿತ್ರ ಎಂಬುದಾಗಿಯೇ ಕರೆಯಲಾಗುತ್ತದೆ. ಮಣ್ಣಿನಲ್ಲಿ ಫಲವತ್ತತೆ ಹೆಚ್ಚಿಸಿ, ಫಸಲು ಉತ್ತಮ ಇಳುವರಿಯೊಂದಿಗೆ ಬರೋದಕ್ಕೆ ಸಹಾಯ ಮಾಡುತ್ತಾರೆ. ಹಾಗಾದ್ರೇ ರೈತನ ಮಿತ್ರನಾಗಿರುವ ಎರೆಹುಳು ಮತ್ತು ಅದರ ಪ್ರಯೋಜನಗಳನ್ನು ಮುಂದೆ ಓದಿ.
ಎರೆಹುಳುವನ್ನು ರೈತರ ಮಿತ್ರ, ರೈತ ಬಂಧು ಎಂದು ಕರೆಯಲಾಗುತ್ತದೆ. ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಹುಳುಗಳು ನೈಸರ್ಗಿವಾಗಿ ಪೋಷಕಾಂಶಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸುತ್ತವೆ.
ಎರೆಹುಳು ಗೊಬ್ಬರವು ರೈತರಿಗೆ ಸಹಾಯಕವಾಗಿದೆ. ಎಲ್ಲಾ ಸಾವಯವ ಬೆಳೆಗಳ ಕಸಕಡ್ಡಿ ಮಿಗಿಲು ಪದಾರ್ಥಗಳನ್ನು ಬಳಸಿಕೊಂಡು ಎರೆಹುಳು ಸಹಾಯದಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಗೊಬ್ಬರ ಉಪಯುಕ್ತವಾಗಿದೆ.
ಎರೆಹುಳದ ಗೊಬ್ಬರವನ್ನು ಬೆಳೆಯ ಯಾವುದೇ ಸಮಯದಲ್ಲಿ ಕೃಷಿ, ತೋಟಗಾರಿಕೆ, ಹೂವುಗಳು ಮತ್ತು ತರಕಾರಿಯಲ್ಲಿ ಉಪಯೋಗ ಮಾಡಬಹುದು.
ಕೃಷಿ/ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸುವ ಕ್ರಮ: ಎರೆಹುಳು ಗೊಬ್ಬರವನ್ನು ಬೆಳೆದು 12-15 ಸೆಂ.ಮೀ. ಎತ್ತರದಲ್ಲಿದ್ದಾಗ ಭೂಮಿಯ ಮೇಲ್ಗಡೆ ಹರಡಬೇಕು ಮತ್ತು ಸಾಧ್ಯವಿದ್ದರೆ ನೀರನ್ನು ಹರಿಸಬೇಕು. ಹೂವಿನ ಹಾಗೂ ತರಕಾರಿ ಮತ್ತು ಹಣ್ಣಿನ ಗಿಡಗಳಿಗೆ ಎರೆಹುಳದ ಗೊಬ್ಬರವನ್ನು ಗಿಡದ ಸುತ್ತು ಹಾಕಿ ಮಣ್ಣಿನಿಂದ ಮುಚ್ಚಬೇಕು ಮತ್ತು ನೀರನ್ನು ಕೊಡಬೇಕು.
ಉಪಯೋಗ: ಈ ಗೊಬ್ಬರ ಅತಿ ಮುಖ್ಯವಾದ ಪೋಷಕಾಂಶ ಹೊಂದಿರುತ್ತದೆ (1-1.5% ಸಾರಜನಕ, 0.8% ರಂಜಕ, 0.7% ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ). ಬೆಳೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಇಳುವರಿಯನ್ನು ಕೊಡುತ್ತದೆ.
ರೈತರಿಗೆ ಲಾಭಗಳು:
✓ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ.
✓ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
✓ಕೀಟಗಳ ಬಾಧೆಯಿಂದ ರಕ್ಷಣೆ ಹಾಗೂ ಬೆಳೆಗಳಿಗೆ ನಷ್ಟವನ್ನು ಕಡಿಮೆ ಮಾಡುತ್ತದೆ.
✓ಬೆಳೆಗಳ ಉತ್ಪನ್ನಗಳು ಅತೀ ಉತ್ತಮ ಹಾಗೂ ಯೋಗ್ಯವಾಗಿದ್ದು, ಹೆಚ್ಚಿನ ರುಚಿ ಹೊಂದಿರುತ್ತವೆ.
✓ಬೆಳೆಗಳು ಉತ್ತಮವಾಗಿದ್ದು, ಹೆಚ್ಚಿನ ಬೆಲೆ ಪಡೆಯುತ್ತವೆ.
‘ಡಿನ್ನರ್ ಪಾಲಿಟಿಕ್ಸ್’ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?
ಬೆಂಗಳೂರಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದವರಿಗೆ BBMP ಶಾಕ್: ಬೀಗಮುದ್ರೆ