ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಡೆಸುತ್ತಿರುವ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಯೋಜನೆಯು ಭಾರತದಲ್ಲಿನ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಸೇವೆಯ ಆಧಾರದ ಮೇಲೆ ಮಾಸಿಕ ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯನ್ನ ಕೇಂದ್ರ ಸರ್ಕಾರವು 16 ನವೆಂಬರ್ 1995 ರಂದು ಪ್ರಾರಂಭಿಸಿತು. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಿಯಮಿತ ಆದಾಯವನ್ನ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಪ್ರಮುಖ ಅಂಶಗಳು.!
ಪಿಂಚಣಿಗೆ ಅರ್ಹರಾಗಲು ಕನಿಷ್ಠ ಸೇವೆ : 10 ವರ್ಷಗಳು
ಪಿಂಚಣಿ ವಯಸ್ಸು : 58 ವರ್ಷಗಳು
ಕನಿಷ್ಠ ಮಾಸಿಕ ಪಿಂಚಣಿ : 1,000 ರೂ.
ತಿಂಗಳಿಗೆ ಗರಿಷ್ಠ ಪಿಂಚಣಿ : 7,500 ರೂ.
ಇಪಿಎಫ್’ಗೆ ಉದ್ಯೋಗಿ ಕೊಡುಗೆ ಎಷ್ಟು.?
ಇಪಿಎಸ್ ಸದಸ್ಯರು ಅಥವಾ ಉದ್ಯೋಗಿಗಳು ತಮ್ಮ ಮೂಲ ವೇತನದ 12 ಪ್ರತಿಶತವನ್ನು ಪಿಂಚಣಿ ಯೋಜನೆಗೆ ಕೊಡುಗೆ ನೀಡಬೇಕು. ಅಂದರೆ ಮೂಲ ವೇತನದಿಂದ ಶೇಕಡಾ 12ರಷ್ಟು ಕಡಿತಗೊಳಿಸಲಾಗುವುದು. ಕಂಪನಿಯು ಎರಡು ಭಾಗಗಳಲ್ಲಿ ಕೊಡುಗೆ ನೀಡುತ್ತದೆ. ಇಪಿಎಸ್‌ಗೆ 8.33 ಪ್ರತಿಶತ ಮತ್ತು ಇಪಿಎಫ್ ಯೋಜನೆಗೆ 3.67 ಪ್ರತಿಶತ. ಆದ್ರೆ, 2014 ರಿಂದ, ಕೇಂದ್ರ ಸರ್ಕಾರವು ಇಪಿಎಸ್-1995ರ ಕನಿಷ್ಠ ಪಿಂಚಣಿಯನ್ನ ತಿಂಗಳಿಗೆ 1000 ರೂ.ಎಂದು ನಿಗದಿಪಡಿಸಿದೆ. ಆದರೆ ಇದನ್ನು 7,500 ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಬರುತ್ತಿದೆ.
ಹತ್ತು ವರ್ಷಗಳ ಸೇವೆಗೆ ಪಿಂಚಣಿ ಎಷ್ಟು..? ಲೆಕ್ಕಾಚಾರ ಹೇಗೆ..?
ಫಾರ್ಮುಲಾ = (ಪಿಂಚಣಿದಾರರ ಸಂಬಳ x ಪಿಂಚಣಿದಾರರ ಸೇವೆ)/70
ಪಿಂಚಣಿದಾರರ ಸಂಬಳ = ಕಳೆದ 60 ತಿಂಗಳ ಸರಾಸರಿ ಸಂಬಳ
ಪಿಂಚಣಿದಾರರ ಸೇವೆ = ಇಪಿಎಸ್‌ಗೆ ಕೊಡುಗೆ ನೀಡಿದ ಒಟ್ಟು ಸೇವೆ (ವರ್ಷಗಳಲ್ಲಿ)
ಉದಾಹರಣೆಗೆ ನೌಕರನ ಪಿಂಚಣಿ ವೇತನ 15000 ರೂಪಾಯಿ ಮತ್ತು ಸೇವೆ 10 ವರ್ಷಗಳಾಗಿದ್ದರೆ..
ಮಾಸಿಕ ಪಿಂಚಣಿ = (15000×10)/7 = 2143 ರೂಪಾಯಿ
ಆರಂಭಿಕ ಪಿಂಚಣಿ ಪಡೆಯುವುದು ಹೇಗೆ.?
58 ವರ್ಷಗಳ ನಂತರ ಪಿಂಚಣಿ ಲಭ್ಯವಿದೆ. ನೀವು ಮುಂಚಿನ ಪಿಂಚಣಿ ಪಡೆಯಲು ಬಯಸಿದರೆ ಅಂದರೆ 58 ವರ್ಷಗಳ ಮೊದಲು ಪಿಂಚಣಿ ಪಡೆಯಬೇಕಾದ್ರೆ ಪಿಂಚಣಿ ನಿಯಮಗಳಿಗೆ ಅರ್ಹರಾಗಿರಬೇಕು. ಕನಿಷ್ಠ ವಯಸ್ಸು 50 ವರ್ಷಗಳಾಗಿರಬೇಕು. ಅಲ್ಲದೆ ಕನಿಷ್ಠ 10 ವರ್ಷಗಳ ಸೇವೆಯನ್ನ ಹೊಂದಿರಬೇಕು. ನಂತರ ನೀವು ಆರಂಭಿಕ ಪಿಂಚಣಿ ಪಡೆಯಬಹುದು. ಆದರೆ ಆರಂಭಿಕ ಪಿಂಚಣಿ ಪಡೆಯಲು, ವಾರ್ಷಿಕ 4 ಪ್ರತಿಶತವನ್ನ ಒಟ್ಟು ಪಿಂಚಣಿಯಿಂದ ಕಡಿತಗೊಳಿಸಲಾಗುತ್ತದೆ. ಅಂದರೆ ಅದು ಕಡಿಮೆಯಾಗುತ್ತದೆ.
ಹೆಚ್ಚಿನ ಪಿಂಚಣಿ ಪಡೆಯಲು ಬಯಸುವಿರಾ.?
ಹೆಚ್ಚಿನ ಪಿಂಚಣಿ ಪಡೆಯಲು ಹೆಚ್ಚು ವರ್ಷಗಳ ಸೇವೆಯ ಅಗತ್ಯವಿದೆ. ಅದೇ ರೀತಿ ಸಂಬಳ ಜಾಸ್ತಿಯಾದಷ್ಟೂ ಪಿಂಚಣಿ ಹೆಚ್ಚುತ್ತದೆ. ಇದರಿಂದಾಗಿ ಹಲವು ದಿನಗಳವರೆಗೆ ಪಿಂಚಣಿ ತೆಗೆದುಕೊಳ್ಳಬಹುದು. ಪಿಂಚಣಿ ಯೋಜನೆಯನ್ನ ನಿರ್ವಹಿಸುವ ಕಂಪನಿಯಿಂದ ಯಾವುದೇ ಅಡೆತಡೆಯಿಲ್ಲದೆ ಇಪಿಎಫ್ ನಿಯಮಿತವಾಗಿ ಪಾವತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅರ್ಹತೆ ಇದ್ದರೆ ಹೆಚ್ಚಿನ ಪಿಂಚಣಿ ಆಯ್ಕೆಯನ್ನ ಆರಿಸಿಕೊಳ್ಳಬೇಕು.
BREAKING : ಭಾರತದಲ್ಲಿ ಚುನಾವಣೆ ಕುರಿತು ‘ಮಾರ್ಕ್ ಜುಕರ್ಬರ್ಗ್’ ಹೇಳಿಕೆ : ‘ಮೆಟಾ’ಗೆ ‘ಸಂಸದೀಯ ಸಮಿತಿ’ ಸಮನ್ಸ್
BREAKING : ಚಿಕ್ಕಮಂಗಳೂರಲ್ಲಿ 25 ವರ್ಷದ ಯುವಕನಿಗೆ ‘ಮಂಗನ ಕಾಯಿಲೆ’ ದೃಢ : ಜನರಲ್ಲಿ ಹೆಚ್ಚಿದ ಆತಂಕ
Crime News: ಎಣ್ಣೆ ಏಟಲ್ಲಿ ಅತ್ತೆ ಕಥೆ ಮುಗಿಸಿದ ಅಳಿಯ: ಎಳ್ಳುಬೆಲ್ಲ ಕೊಡಲು ಹೋಗಿ ಚಾಕುವಿನಿಂದ ಇರಿದು ಹತ್ಯೆ