ಕೆಎನ್ಎನ್ ಡಿಜಿಟಲ್ ಡೆಸ್ಕ್: ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದರೊಟ್ಟಿಗೆ ಮಾದರಿ ನೀತಿ ಸಂಹಿತೆ ಕೂಡ ಜಾರಿಗೊಂಡಿದೆ. ಅನೇಕ ಕಡೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗುತ್ತಿವೆ. ಹಾಗಾದ್ರೇ ಲೋಕಸಭಾ ಚುನಾವಣೆ ಹೊತ್ತಲ್ಲೇ ನಿಮಗೊಂದು ಉಪಯುಕ್ತ ಮಾಹಿತಿ ಎನ್ನುವಂತೆ, ನೀತಿ ಸಂಹಿತೆ ಕಾಯ್ದೆ ಮತ್ತು ಕಲಂಗಳು ಏನೆಲ್ಲಾ ಅಂತ ಮುಂದೆ ಓದಿ.
ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆದು, ಜೂನ್.4ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಅಕ್ರಮ ತಡೆಗೆ ಚುನಾವಣಾ ಆಯೋಗವು ಮಹತ್ವದ ಕ್ರಮ ಕೈಗೊಂಡಿದೆ. ಹೀಗಿದ್ದೂ ಇದನ್ನು ಮೀರಿ ಅಕ್ರಮ ಎಸಗೋದಕ್ಕೆ ಪ್ರಯತ್ನ ಪಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ವಿವಿಧ ಕಾಯ್ದೆ ಮತ್ತು ಕಲಂಗಳಿದ್ದಾವೆ. 125 ಆರ್.ಡಿ ಆಕ್ಟ್ ಮತ್ತು 153(ಎ), 295, 505 ಐಪಿಸಿ ಕಾಯ್ದೆಯಂತೆ ಧರ್ಮ, ಜಾತಿ, ಭಾಷೆ ಆಧಾರದ ಮೇಲೆ ಗುಂಪು ಗುಂಪುಗಳ ಮದ್ಯೆ ದ್ವೇಷ ಭಾವನೆ ಉಂಟು ಮಾಡೋದಾಗಿದೆ.
125 ಆರ್ ಪಿ ಆಕ್ಟ್ ಪ್ರಕಾರವಾಗಿ ಮತದಾನ ಮುಗಿಯುವ ಮುಂಚಿತ 48 ಗಂಟೆಯ ಅವಧಿಯಲ್ಲಿ ಚುನಾವಣೆ ಕುರಿತು ಜನರನ್ನು ಉದ್ದೇಶಿಸಿ ಭಾಷಣ, ಮೆರವಣಿಗೆ ಮಾಡಿದರೇ, ಚುನಾವಣೆಗೆ ಸಂಬಂಧಿತ ವಿಷಯಗಳನ್ನು ಪ್ರದರ್ಶಿಸಿದರೇ ಅಂದರೆ ಚಲನಚಿತ್ರ, ಟಿವಿ ಇತರೆ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದರೇ ಅದು ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಹೀಗಿವ ಚುನಾವಣೆ ಸಮಯಕ್ಕೆ ಉಪಯುಕ್ತ ಕಾಯ್ದೆ ಮತ್ತು ಕಲಂಗಳ ಮಾಹಿತಿ
BREAKING : ‘ಕಾಂಗ್ರೆಸ್’ಗೆ ‘ಕೋರ್ಟ್’ ಶಾಕ್ : ‘ಆದಾಯ ತೆರಿಗೆ ಮರು ಮೌಲ್ಯಮಾಪನ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
ರಾಜ್ಯ ಸರ್ಕಾರದಿಂದ ‘ಭ್ರೂಣ ಹತ್ಯೆ’ ಪ್ರಕರಣದ ತನಿಖೆಗೆ ‘ತನಿಖಾ ತಂಡ’ ರಚಿಸಿ ಆದೇಶ