ಕೆಲವು ಜನರು ಯಾವಾಗಲೂ ಕೂಡ ತುಂಬಾ ಒಳ್ಳೆಯ ವಾಸನೆ ಬರುತ್ತಿರುತ್ತಾರೆ. ದಿನದ ಕೆಲಸ ಮಾಡಿದ ನಂತರ ಕೂಡ ದೇಹದ ವಾಸನೆಯನ್ನು ದೂರ ಮಾಡಲು ಸುಗಂಧ ದ್ರವ್ಯವನ್ನು ಬಳಕೆ ಮಾಡುತ್ತೆವೆ.
ಸುಗಂಧದ್ರವ್ಯ ಉಪಯೋಗಿಸುವಾಗ ಕೂಡ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಇದರಿಂದ ದಿನಪೂರ್ತಿ ಒಳ್ಳೆಯ ಪರಿಮಳ ಬರುತ್ತಿರುತ್ತದೆ. ದಿನಪೂರ್ತಿ ಉತ್ತಮ ವಾಸನೆಯನ್ನು ಹರಡುವಂತೆ ಮಾಡಲು ಕೆಲವೊಂದು ಟಿಪ್ಸ್ ಬಳಸಿ.
ಸುಗಂಧ ದ್ರವ್ಯವನ್ನು ತೆಗೆದುಕೊಳ್ಳುವಾಗ ಅದರ ಬಗ್ಗೆ ತಿಳಿದುಕೊಳ್ಳಿ.
ಸುಗಂಧ ದ್ರವ್ಯಗಳು ವಿವಿಧ ರೀತಿಯ ಚರ್ಮಕ್ಕೆ ವಿವಿಧ ರೀತಿಯಾಗಿ ಪ್ರತಿಕ್ರಿಯಿಸುತ್ತವೆ,
ಅದಕ್ಕಾಗಿಯೇ ಈ ಸುಗಂಧ ದ್ರವ್ಯಗಳು ಚರ್ಮದ ಮೇಲೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಂತರ ಈ ದ್ರವ್ಯಗಳನ್ನು ಉಪಯೋಗಿಸಬೇಕು.
ರಿಸ್ಟ್ ಮೇಲೆ ಸುಗಂಧ ದ್ರವ್ಯ ಹಾಕುವುದರಿಂದ ಪರಿಮಳವು ಹೆಚ್ಚು ಸಮಯದ ತನಕ ಉಳಿಯುತ್ತದೆ ಹಾಗೆ ಪರಿಮಳ ಹೆಚ್ಚು ಸಮಯದ ತನಕ ಉಳಿಯಬೇಕೆಂದರೆ ನೀವು ನಿಮ್ಮ ರಿಸ್ಟ್ ಮೇಲೆ ಗಮನ ಹರಿಸುವುದು ಉತ್ತಮ. ಪಾದದಗಳ ಮೇಲೆ, ಮೊಣಕಾಲುಗಳ ಹಿಂದೆ, ಮಣಿಕಟ್ಟು, ಎದೆ ಮತ್ತು ನಿಮ್ಮ ಕಿವಿಗಳ ಹಿಂದೆ ಸುಗಂಧ ದ್ರವ್ಯ ಹಾಕಿದಾಗ ಪರಿಮಳವು ಹೆಚ್ಚು ಹರಡಲು ಸಾಧ್ಯವಾಗುತ್ತೆ ಮತ್ತು ದೇಹದ ಇತರ ಭಾಗಗಳಿಗೆ ಸಿಂಪಡಿಸುವುದಕ್ಕಿಂತ ಈ ಭಾಗಗಳಿಗೆ ಸುಂಗಧ ದ್ರವ್ಯ ಹಾಕುವುದರಿಂದ ಹೆಚ್ಚು ಕಾಲ ಪರಿಮಳವು ಹಾಗೇ ಉಳಿಯುತ್ತದೆ.
ಶುಚಿಯಾದ ಬಟ್ಟೆ ಧರಿಸುವುದರಿಂದ ಕೂಡ ದಿನವಿಡೀ ಫ್ರೆಶ್ ಹಾಗೂ ಪರಿಮಳದಿಂದ ಇರಬಹುದು.
ತಾಜಾ ಪರಿಮಳ ಇರಬೇಕು ಎಂದಾದರೆ ಬಟ್ಟೆಗಳನ್ನು ಸ್ವಚ್ಛವಾಗಿಡುವುದು ಮತ್ತು ಉತ್ತಮ ಡಿಟರ್ಜೆಂಟ್ ನ್ನು ಉಪಯೋಗಿಸುವುದು ಮುಖ್ಯ. ಬಟ್ಟೆಯನ್ನು ಸಾಫ್ಟ್ ಮಾಡುವ, ಮತ್ತು ಒಳ್ಳೆಯ ಪರಿಮಳ ಬೀರುವಂತಹ ಲಿಕ್ವಿಡ್ ಉಪಯೋಗ ಮಾಡುವುದರಿಂದ ದಿನವಿಡೀ ಫ್ರೆಶ್ ಹಾಗೂ ಉತ್ತಮ ಪರಿಮಳದಿಂದ ಇರಬಹದು.
ಸುಗಂಧ ದ್ರವ್ಯವನ್ನು ದೇಹಕ್ಕೆ ಮಾತ್ರ ಸೀಮಿತಗೊಳಿಸದೆ. ಬೆಡ್ ಶೀಟ್ ಗಳು, ಲಾಂಜ್ ಕುರ್ಚಿ, ಉಡುಪುಗಳ ಮೇಲೆ ಕೂಡ ಸ್ವಲ್ಪ ಸ್ಪ್ರೇ ಮಾಡಬೇಕು ಇದರಿಂದ ಪರಿಮಳ ತುಂಬಾ ಸಮಯದ ತನಕ ಉಳಿಯುತ್ತದೆ. ಹಾಗೆಯೇ ಕೂದಲಿಗಾಗಿ ಸಾಕಷ್ಟು ಪರಿಮಳಯುಕ್ತ ಸ್ಪ್ರೇ ಇರುತ್ತದೆ, ಅದನ್ನು ಕೂಡ ಬಳಸುವುದರಿಂದ
ಸುಂದರವಾದ ಪರಿಮಳ ಬೀರುತ್ತದೆ.
ಉತ್ತಮವಾದ ಆಹಾರವನ್ನು ಸೇವಿಸಬೇಕು.
ಆಹಾರ ದೇಹದಲ್ಲಿ ಪ್ರಮುಖ ಪಾತ್ರ ವಹಿಸುದರಿಂದ ಒಳ್ಳೆಯ ಆಹಾರ ಉತ್ತಮ ಚರ್ಮವನ್ನು ನೀಡುವುದರ ಜೊತೆಗೆ, ಆರೋಗ್ಯಕರ ಆಹಾರವು ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ.