ಬೆಂಗಳೂರು: ಈಗಾಗಲೇ ರಾಜ್ಯದ ಹಲವು ಇಲಾಖೆಗಳಲ್ಲಿ ಇ-ಆಫೀಸ್ ಜಾರಿಗೊಳಿಸಲಾಗಿದೆ. ಹೀಗಿದ್ರೂ ಕಂದಾಯ ಇಲಾಖೆಯಲ್ಲಿ ಕೆಲವರು ಭೌತಿಕ ಕಡತಗಳನ್ನು ನಿರ್ವಹಣೆ ಮಾಡ್ತಿದ್ದಾರೆ ಎಂಬ ದೂರು ಬಂಧಿತ್ತು. ಈ ಹಿನ್ನಲೆಯಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಇದನ್ನ ಪಾಲಿಸದೇ ಇದ್ರೆ ನೋಟಿಸ್ ನೀಡೋದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ಇ- ಆಫೀಸ್ ತಂತ್ರಾಂಶ ಬಳಕೆ ಮಾಡದೇ, ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇ- ಆಫೀಸ್ ತಂತ್ರಾಂಶ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೌತಿಕ ಕಡತ ನಿರ್ವಹಣೆ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗಳಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಭೌತಿಕ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಟಪಾಲು ಸ್ವೀಕಾರ ಮತ್ತು ಮುಂದಿನ ಪ್ರಕ್ರಿಯೆಯೂ ಇ-ಆಫೀಸ್ ಮೂಲಕವೇ ನಡೆಯಲಿದೆ ಅಂತ ತಿಳಿಸಿದ್ದಾರೆ.
ಇ- ಆಫೀಸ್ ತಂತ್ರಾಂಶ ಬಳಕೆ ಮಾಡದೇ, ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇ- ಆಫೀಸ್ ತಂತ್ರಾಂಶ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೌತಿಕ ಕಡತ ನಿರ್ವಹಣೆ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.… pic.twitter.com/AB3GoY24C0
— DIPR Karnataka (@KarnatakaVarthe) January 20, 2024
BIG NEWS: ನಾಳೆ ಕರ್ನಾಟಕದಲ್ಲಿ ‘ಸರ್ಕಾರಿ ರಜೆ’ ಘೋಷಣೆ: ಈ ಬಗ್ಗೆ ‘ಡಿಸಿಎಂ ಡಿಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?