ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೋಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅನುಮತಿ ಇಲ್ಲದೆ ದ್ರೋಣ್ ಕ್ಯಾಮರಾ ಬಳಕೆ ಮಾಡಿಕೊಂಡು ವಿಡಿಯೊ ಸೆರೆಹಿಡಿಯಲಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮಕ್ಕಾಗಿ ಸ್ಥಳೀಯರೊಬ್ಬರು . ಅರಣ್ಯ ಸಚಿವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ
ವಿಶ್ವೇಶ್ವರ ಭಟ್ ಎಂಬ ಖಾಸಗಿ ವ್ಯಕ್ತಿಯೊಬ್ಬರು ಸುಮಾರು ಸಂಜೆ 6.00 ಗಂಟೆ ಸಮಯದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದು, ವಲಯ ಅರಣ್ಯ ಪ್ರದೇಶದಲ್ಲಿ ಡ್ರೋನ್ ಬಳಕೆ ನಿಷೇದವಿದ್ದರು, ಖಾಸಗಿ ವ್ಯಕ್ತಿಯೊಬ್ಬರು ನಿಯಮವನ್ನು ಮೀರಿ ಡೋನ್ ಕ್ಯಾಮರಾ ವನ್ನೂ ಹಾರಿಸಿ ಪ್ರತಿದಿನ ಬೆಟ್ಟಕ್ಕೆ ಬರುವ ಕಾಡನೆಯೊಂದನ್ನು ಬೆದರಿಸುವ ಘಟನೆಯೂ ನಡೆದಿರುತ್ತದೆ, ಸದರಿ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಚಿತ್ರೀಕರಣವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದು ಸಾರ್ವಜನಿಕರು ಹಾಗೂ ವನ್ಯ ಜೀವಿ ಪ್ರಿಯರು ಸದರಿ ಚಿತ್ರೀಕರಣವನ್ನು ವಿರೋದಿಸಿ ಪೋಸ್ಟ್ ಗಳನ್ನಿ ಮಾಡಿರುತ್ತಾರೆ ಹಾಗೂ ಖಾಸಗಿ ವ್ಯಕ್ತಿಯ ಅನಧಿಕೃತ ಪ್ರವೇಶವನ್ನು ತಡೆಯದೆ ವಲಯ ಅರಣ್ಯಾಧಿಕಾರಿಗಳು ಕರ್ತವ್ಯ ಲೋಪ ಎಸಗಿರುತ್ತಾರೆ ಅತಿಕ್ರಮ ಪ್ರವೇಶ ಮಾಡಿರುವ ವಿಶ್ವೇಶ್ವರ ಭಟ್ ಹಾಗೂ ಕರ್ತವ್ಯ ಲೋಪವೆಸಾಗಿರುವ ಗೋಪಾಲ ಸ್ವಾಮಿ ಬೆಟ್ಟ ವಲಯ ಅಧಿಕಾರಿ ಮಂಜುನಾಥ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸದರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕಾಗಿ ಎಂದು ಗುಂಡ್ಲುಪೇಟೆ ನಿವಾಸಿ ಸಂದೀಪ್ ಕುಮಾರ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಬಂಡೀಪುರ ಸಿ.ಎಫ್.ಡಾ.ರಮೇಶ್ ಕುಮಾರ ದೂರು ನೀಡಿದ್ದಾರೆ.