ಗಂಭೀರ ಭದ್ರತಾ ಅಪಾಯಗಳು ಮತ್ತು ಸಹಾಯವನ್ನು ಒದಗಿಸುವ ಸೀಮಿತ ಸಾಮರ್ಥ್ಯವನ್ನು ಉಲ್ಲೇಖಿಸಿ ಯುನೈಟೆಡ್ ಸ್ಟೇಟ್ಸ್ ತನ್ನ ನಾಗರಿಕರಿಗೆ 21 ದೇಶಗಳಿಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಿದೆ.
ಟ್ರಂಪ್ ಆಡಳಿತವು ಗುರುವಾರ, ಜನವರಿ 8, 2026 ರಂದು ಈ ಸಲಹೆಯನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಭಾರತ ಮತ್ತು ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಅಧಿಕೃತ ಪ್ರಯಾಣ ಎಚ್ಚರಿಕೆ ನೀಡಿದ ಅಮೆರಿಕ
ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ನ ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮೂಲಕ ಈ ಸಲಹೆಯನ್ನು ಹಂಚಿಕೊಂಡಿದೆ. ಹಂತ 1 (ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಅಭ್ಯಾಸ ಮಾಡಿ) ಹಂತ4(ಪ್ರಯಾಣಿಸಬೇಡಿ) ವರೆಗೆ ನಾಲ್ಕು ಹಂತಗಳಲ್ಲಿ ಪ್ರಯಾಣ ಸಲಹೆಗಳನ್ನು ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ








