ಲಂಡನ್/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಿನೋಗ್ರಹದ ಕಿಚ್ಚು ಈಗ ಜಾಗತಿಕ ಇಂಧನ ಮಾರುಕಟ್ಟೆಯನ್ನು ದಹಿಸುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಂಚಾರ ಸ್ಥಗಿತಗೊಂಡಿರುವುದರಿಂದ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದೆ. ಇದರಿಂದಾಗಿ ವಿಶ್ವದ 95ಕ್ಕೂ ಹೆಚ್ಚು ದೇಶಗಳಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ.
ಅತಿ ಹೆಚ್ಚು ಬೆಲೆ ಏರಿಕೆ ಕಂಡ ಟಾಪ್ 5 ದೇಶಗಳು (ಫೆಬ್ರವರಿ-ಮಾರ್ಚ್ 2026):
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ಕೆಳಗಿನ ದೇಶಗಳಲ್ಲಿ ಪೆಟ್ರೋಲ್ ದರ ಅತಿ ವೇಗವಾಗಿ ಜಿಗಿದಿದೆ:
1 ಕಾಂಬೋಡಿಯಾ 67.8%
2 ವಿಯೆಟ್ನಾಂ 49.7%
3 ನೈಜೀರಿಯಾ 35.0%
4 ಲಾವೋಸ್ 32.9%
5 ಕೆನಡಾ 28.3%
ಏಷ್ಯಾಕ್ಕೆ ಭಾರಿ ಹೊಡೆತ: ತೈಲಕ್ಕಾಗಿ ಗಲ್ಫ್ ರಾಷ್ಟ್ರಗಳನ್ನೇ ಹೆಚ್ಚಾಗಿ ನಂಬಿಕೊಂಡಿರುವ ಕಾಂಬೋಡಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನದಂತಹ ಏಷ್ಯಾದ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಅಮೆರಿಕ ಮತ್ತು ಯುರೋಪ್: ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಸರಾಸರಿ 20% ಏರಿಕೆಯಾಗಿದ್ದರೆ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಇಂಧನ ಮತ್ತು ಅನಿಲ ದರಗಳು ಸುಮಾರು 13-15% ರಷ್ಟು ಹೆಚ್ಚಾಗಿವೆ.ಬೆಲೆ ಏರಿಕೆಯನ್ನು ನಿಯಂತ್ರಿಸಲು ದಕ್ಷಿಣ ಕೊರಿಯಾ 30 ವರ್ಷಗಳಲ್ಲೇ ಮೊದಲ ಬಾರಿಗೆ ಇಂಧನ ದರದ ಮೇಲೆ ‘ಗರಿಷ್ಠ ಮಿತಿ’ (Price Cap) ಹೇರಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಇಂಧನ ಉಳಿತಾಯಕ್ಕಾಗಿ ವಾರಕ್ಕೆ 4 ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಲಾಗಿದೆ.
ಭಾರತದಲ್ಲಿ ಸಾಮಾನ್ಯ ಪೆಟ್ರೋಲ್ ದರವನ್ನು ಸದ್ಯಕ್ಕೆ ಸ್ಥಿರವಾಗಿಡಲಾಗಿದೆಯಾದರೂ, ಪ್ರೀಮಿಯಂ ಪೆಟ್ರೋಲ್ ದರ ಏರಿಕೆಯಾಗಿದೆ. ಕಚ್ಚಾ ತೈಲದ ಬೆಲೆ ಹೀಗೆಯೇ ಮುಂದುವರಿದರೆ ಸಾಮಾನ್ಯ ಪೆಟ್ರೋಲ್ ದರವೂ ಶೀಘ್ರದಲ್ಲೇ ಏರಿಕೆಯಾಗುವ ಭೀತಿಯಿದೆ.
ವಿಶ್ವದ 20% ತೈಲ ಮತ್ತು ಅನಿಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಹುತೇಕ ಬಂದ್ ಮಾಡಿರುವುದು ಮತ್ತು ಕತಾರ್‌ನ ಅನಿಲ ಕೇಂದ್ರಗಳ ಮೇಲೆ ನಡೆದ ದಾಳಿಗಳು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿವೆ.








