ನ್ಯೂಯಾರ್ಕ್: ಜಾರ್ಜಿಯಾದ ಅಪಲಾಚಿ ಹೈಸ್ಕೂಲ್ನಲ್ಲಿ ನಡೆದ ದುರಂತ ಶೂಟೌಟ್ಗೆ ಸಂಬಂಧಿಸಿದಂತೆ ಶಂಕಿತ ಕೋಲ್ಟ್ ಗ್ರೇ ಅವರ ತಂದೆ ಕಾಲಿನ್ ಗ್ರೇ (54) ಅವರನ್ನು ಬಂಧಿಸಲಾಗಿದ್ದು, ಮಕ್ಕಳ ಮೇಲಿನ ಕ್ರೌರ್ಯ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ
ಗ್ರೇ ನಾಲ್ಕು ಅನೈಚ್ಛಿಕ ನರಹತ್ಯೆ, ಎರಡು ದ್ವಿತೀಯ ದರ್ಜೆ ಕೊಲೆ ಮತ್ತು ಎಂಟು ಮಕ್ಕಳ ಮೇಲಿನ ಕ್ರೌರ್ಯದ ಆರೋಪಗಳನ್ನು ಎದುರಿಸುತ್ತಿದ್ದಾನೆ. ತನ್ನ ಮಗನಿಗೆ ಕ್ರಿಸ್ಮಸ್ ಉಡುಗೊರೆಯಾಗಿ ನೀಡಲು ಶೂಟಿಂಗ್ನಲ್ಲಿ ಬಳಸಿದ ಎಆರ್ ಶೈಲಿಯ ರೈಫಲ್ ಅನ್ನು ಖರೀದಿಸಿದ್ದೇನೆ ಎಂದು ಗ್ರೇ ಪೊಲೀಸರಿಗೆ ತಿಳಿಸಿದ ನಂತರ ಈ ಬಂಧನ ನಡೆದಿದೆ. ಘಟನೆಯಲ್ಲಿ 14 ವರ್ಷದ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.
ಅಪಲಾಚಿ ಹೈಸ್ಕೂಲ್ ಶೂಟೌಟ್ ಆರೋಪಿಯ ತಂದೆ ಬಂಧನ