ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ವೆಬ್ ಸೈಟ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸರ್ವರ್ ಡೌನ್ ಆಗಿದ್ದು, ಹಲವಾರು ಬಳಕೆದಾರರು ಮಂಗಳವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ.
ಕಳೆದ 5-6 ಗಂಟೆಗಳಿಂದ ಯುಪಿಎಸ್ಸಿ ಸರ್ವರ್ ಡೌನ್ ಆಗಿದೆ. ದಯವಿಟ್ಟು 1 ಅಥವಾ 2 ದಿನಗಳನ್ನು ಕೆಲ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಸ್ತರಿಸಿ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ.
#UPSC #UPSCPrelims2024 #server #serverdown #upscdown
UPSC server down since last 5-6 hours please extend 1 or 2 days pic.twitter.com/sIqWKp6PeK— Chandan Gupta (@broChandan) March 5, 2024
ಇನ್ನೊಬ್ಬ ಬಳಕೆದಾರರು “ಯುಪಿಎಸ್ಸಿ ಸರ್ವರ್ ಬೆಳಿಗ್ಗೆಯಿಂದ ಡೌನ್ ಆಗಿದೆ” ಎಂದು ಬರೆದಿದ್ದಾರೆ.
#UPSCPrelims2024
UPSC server down since morning @UpscOfficial_What are suppose to do now ??? pic.twitter.com/PK7sqT4RpB
— civil services NOTESENSE. 📝 (@civil_notesense) March 5, 2024
ಬಳಕೆದಾರರೊಬ್ಬರು, “ಪ್ರಿಯ ಯುಪಿಎಸ್ಸಿ, ಕಳೆದ ರಾತ್ರಿಯಿಂದ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ನಾನು ಯಾವುದೇ ಒಟಿಪಿಯನ್ನು ಸ್ವೀಕರಿಸng ಆಗುತ್ತಿಲ್ಲ. ಅನೇಕ ಬಾರಿ ಪ್ರಯತ್ನಿಸಿದೆ. ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ ಅಥವಾ ಗಡುವನ್ನು ವಿಸ್ತರಿಸಿ ಸರ್ ಎಂದು ಕೋರಿದ್ದಾರೆ.
Dear UPSC,
The Website is not working since last night. I doesn't receive any otp, tried multiple times. Please resolve this issue or extend deadline sir.#upsc #upsc_server_down
— Adarsh Y (@Arshknp) March 5, 2024
ಇನ್ನೊಬ್ಬ ಬಳಕೆದಾರರು, “ಕಳೆದ 1 ಗಂಟೆಯಿಂದ ಸರ್ವರ್ ಡೌನ್ ಆಗಿರುವುದರಿಂದ ನಮಗೆ ಅರ್ಜಿ ಪೂರ್ಣಗೊಳಿಸಲು ಅಥವಾ ಫಾರ್ಮ್ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಕೊನೆಯ 60 ನಿಮಿಷಗಳು ಮಾತ್ರ ಉಳಿದಿವೆ. ದಯವಿಟ್ಟು ನಮ್ಮೊಂದಿಗೆ ಆಟವಾಡಬೇಡಿ ಮತ್ತು ಗಡುವನ್ನು ವಿಸ್ತರಿಸಿ ಎಂದಿದ್ದಾರೆ.
. @upsc_official URGENT HELP‼️‼️
We are unable to complete or form as the server is down from last 1 hour and no we only have last 60 minutes left. Please don’t play with us and extend the deadline. Many students were not able to complete their documentations.— Owais sheikh (@owa1sh3ikh) March 5, 2024
ವಿಶೇಷವೆಂದರೆ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ 2024 ಗಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಇಂದು (ಮಾರ್ಚ್ 05) ಕೊನೆಯ ದಿನವಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಲ್ಲಿ ತೊಡಗಿದಂತ ಸಂದರ್ಭದಲ್ಲೇ ಯುಪಿಎಸ್ಸಿ ವೆಬ್ ಸೈಟ್ ಡೌನ್ ಆಗಿರೋದು ಆತಂಕಕ್ಕೆ ಕಾರಣವಾಗಿದೆ.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು