ಬೆಂಗಳೂರು: ನಿನ್ನೆಯಷ್ಟೇ ಎಸ್ ಬಿ ಐ ಯುಪಿಐ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಎಲ್ಲಾ ಬ್ಯಾಂಕುಗಳ ಯುಪಿಐ ಪಾವತಿಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಬಳಕೆದಾರರು ಪರದಾಡುತ್ತಿದ್ದಾರೆ.
ಪೋನ್ ಪೇ, ಗೂಗಲ್ ಪೇ ಸೇರಿದಂತೆ ಇತರೆ ಬ್ಯಾಂಕ್ ವರ್ಗಾವಣೆಯ ಯುಪಿಐ ಆಪ್ ಗಳಲ್ಲಿ ಸರ್ವರ್ ಡೌನ್ ಆಗಿದೆ. ಒಬ್ಬರಿಂದ ಒಬ್ಬರಿಗೆ ಹಣ ಕಳಿಸೋದಕ್ಕೆ, ಅಂಗಡಿ ಮುಂಗಟ್ಟುಗಳಲ್ಲಿನ ಖರೀದಿಗೆ ಯುಪಿಐ ಪಾವತಿಗೆ ಸಮಸ್ಯೆ ಉಂಟಾಗಿದೆ.
ಯುಪಿಐನಿಂದ ಬಳಕೆದಾರರು ಹಣ ವರ್ಗಾವಣೆಗೆ ಸಾದ್ಯವಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ತಾವು ಖರೀದಿಸಿದಂತ ಯಾವುದೇ ವಸ್ತುಗಳಿಗೆ ಯುಪಿಐ ಪೇಮೆಂಟ್ ಮೂಲಕ ಪಾವತಿ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ವರದಿಗಳನ್ನು ಮಾಡಿದ್ದಾರೆ. ತಮಗೆ ಯುಪಿಐ ಮೂಲಕ ಎಸ್ ಬಿಐ, ಹೆಚ್ ಡಿ ಎಫ್ ಸಿ, ಐಸಿಐಸಿಐ ಸೇರಿದಂತೆ ಯಾವುದೇ ಬ್ಯಾಂಕ್ ಗಳ ವ್ಯವಹಾರಕ್ಕೆ ಅಡಚಣೆ ಉಂಟಾಗಿದೆ.
ಈ ರಹಸ್ಯ ದೀಪವೇ ಮಾರ್ವಾಡಿಗಳ ಮನೆಯಲ್ಲಿ ಹಣ ಸುರಿಯಲು ಕಾರಣ, ನೀವು ಬೆಳಗಿಸಿ ಸಂಪತ್ತು, ಸಮೃದ್ಧಿ ಖಚಿತ
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ಧರಾಮಯ್ಯ: ಪೂರಕ ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ