ಬೆಂಗಳೂರು : 2025-26 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿರುವ ಕುರಿತು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರಮಾಂಕ (1) ರಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-110ರಲ್ಲಿ ಘೋಷಿಸಿರುವಂತೆ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವ ಸಂಬಂಧ ಸರ್ಕಾರದ ನಿರ್ದೇಶನದಂತೆ (i) CSR/SDMC/ದಾನಿಗಳು/ಸ್ಥಳೀಯ ಸಂಸ್ಥೆ/ ಇತರೆ ಮೂಲಗಳಿಂದ 3 ಅಥವಾ 3 ಕ್ಕಿಂತೆ ಹೆಚ್ಚಿನ ವರ್ಷಗಳಿಗೆ ಶಾಲೆಗಳಿಗೆ ಉನ್ನತೀಕರಣ ಸಂಬಂಧ ಬೆಂಬಲ ದೊರೆಕಲಿರುವ ಶಾಲೆಗಳ ಪಟ್ಟಿ (ii) ರಾಜ್ಯ ಬಜೆಟ್ ಘೋಷಣೆಯಡಿಯಲ್ಲಿ ಉನ್ನತೀಕರಣಕ್ಕೆ ಅರ್ಹವಿರುವ ಶಾಲೆಗಳ ಪಟ್ಟಿ (iii) ಸಮಗ್ರ ಶಿಕ್ಷಣ ಕರ್ನಾಟಕದಡಿಯಲ್ಲಿ PAB ಅನುಮೋದಿತ ಶಾಲೆಗಳ ಪಟ್ಟಿಯನ್ನು ಒದಗಿಸಲು ತಿಳಿಸಲಾಗಿದ್ದು ಇದರಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
CSR ಬೆಂಬಲಿತ 65 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಬಜೆಟ್ ಘೋಷಣೆಯಂತೆ 76 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ, ಕೇಂದ್ರ ಶಿಕ್ಷಣ ಮಂತ್ರಾಲಯ, ನವದೆಹಲಿ, ಇಲ್ಲಿನ GOI-MOE-PAB ಯಲ್ಲಿನ ಅನುಮೋದನೆಯಂತೆ 6 ಶಾಲೆಗಳು ಒಟ್ಟಾರೆ 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಸರ್ಕಾರವು ತೀರ್ಮಾನಿಸಿ, ಅದರಂತೆ, ಉಲ್ಲೇಖ (3) ರಲ್ಲಿ ಸರ್ಕಾರಿ ಆದೇಶ ಸಂಖ್ಯೆ: ಇಪಿ 61 ಎಸ್‌ಓಹೆಚ್ 2025ಬೆಂಗಳೂರು, ದಿನಾಂಕ: 07ನೇ ಆಗಸ್ಟ್ 2025ರಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಅನುಬಂಧ-1ರಲ್ಲಿ ನಮೂದಿಸಿರುವಂತೆ ಒಟ್ಟು 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಚಾಲ್ತಿಯಲ್ಲಿರುವ ಉನ್ನತೀಕರಣದ ನಿಯಮಗಳಿಗೊಳಪಟ್ಟು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 430 ವೆಚ್ಚ-8/2025 ದಿನಾಂಕ: 06/06/2025 ಮತ್ತು 04/08/2025ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.