ವಯನಾಡ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 100ರ ಗಡಿ ದಾಟಿದೆ, 108 ಶವಗಳನ್ನ ವಶಪಡಿಸಿಕೊಳ್ಳಲಾಗಿದೆ ಮತ್ತು 116 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜುಲೈ 30ರ ಮುಂಜಾನೆ ವಯನಾಡಿನ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು, ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ. ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, 107ಕ್ಕೂ ಹೆಚ್ಚು ಶವಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕೇರಳ ಮುಖ್ಯ ಕಾರ್ಯದರ್ಶಿ ವಿ. ವೇಣು ಖಚಿತಪಡಿಸಿದ್ದಾರೆ. ಇದಲ್ಲದೆ, ಮಲಪ್ಪುರಂನ ಚಾಲಿಯಾರ್ ನದಿಯಿಂದ 16 ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ 30 ರ ಮಂಗಳವಾರ ಮತ್ತು ಜುಲೈ 31ರ ಬುಧವಾರ ಎರಡು ದಿನಗಳ ರಾಜ್ಯವ್ಯಾಪಿ ಶೋಕಾಚರಣೆಯನ್ನ ಘೋಷಿಸಿದ್ದಾರೆ. ಇತ್ತೀಚಿನ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿದೆ ಎಂದು ಕೇರಳ ಕಂದಾಯ ಸಚಿವರ ಕಚೇರಿ ವರದಿ ಮಾಡಿದೆ, 116 ಮಂದಿ ಗಾಯಗಳಾಗಿದ್ದಾರೆ ಎಂದು ದೃಢಪಟ್ಟಿದೆ.
BREAKING : ಕೇರಳದಲ್ಲಿ ಭೀಕರ ಭೂಕುಸಿತ : ಈವರೆಗೆ 93 ಮೃತದೇಹ ಪತ್ತೆ, 128 ಜನರಿಗೆ ಗಾಯ ; ಸಿಎಂ ಪಿಣರಾಯಿ ಮಾಹಿತಿ
ಜೂನ್ ತ್ರೈಮಾಸಿಕದಲ್ಲಿ ‘ಚಿನ್ನದ ಬೇಡಿಕೆ’ಯಲ್ಲಿ ಶೇ.5ರಷ್ಟು ಕುಸಿತ : ವರದಿ
`BPL’ಕಾರ್ಡ್ ಹೊಂದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಗುಡ್ ನ್ಯೂಸ್