ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದ ಬಂದರು ಪ್ರದೇಶದಲ್ಲಿ ಅನೇಕ ಸ್ಫೋಟಗಳು ವರದಿಯಾಗುತ್ತಿದ್ದಂತೆ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಇಂದು ಗ್ವಾದರ್ ಬಂದರು ಪ್ರಾಧಿಕಾರ ಸಂಕೀರ್ಣಕ್ಕೆ ಬಲವಂತವಾಗಿ ಪ್ರವೇಶಿಸಿ ಗುಂಡು ಹಾರಿಸಿದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಕ್ರಾನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಅವರನ್ನ ಉಲ್ಲೇಖಿಸಿ, ತೀವ್ರ ಗುಂಡಿನ ದಾಳಿ ನಡೆಯುತ್ತಿರುವಾಗ ಪೊಲೀಸರು ಮತ್ತು ಭದ್ರತಾ ಪಡೆಗಳ ದೊಡ್ಡ ತುಕಡಿ ಘಟನಾ ಸ್ಥಳಕ್ಕೆ ತಲುಪಿದೆ ಎಂದು ವರದಿಯಾಗಿದೆ.
ಗ್ವಾದರ್ ಬಂದರು ಪ್ರಾಧಿಕಾರ (GPA) ಸಂಕೀರ್ಣದ ಮೇಲಿನ ದಾಳಿಯನ್ನ ಭದ್ರತಾ ಪಡೆಗಳು ವಿಫಲಗೊಳಿಸಿವೆ ಮತ್ತು ಎಂಟು ದಾಳಿಕೋರರನ್ನ ಕೊಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಬಂದರು ಸಂಕೀರ್ಣವನ್ನ ಪ್ರವೇಶಿಸಲು ಪ್ರಯತ್ನಿಸಿದಾಗ ದಾಳಿಕೋರರು ಕೊಲ್ಲಲ್ಪಟ್ಟರು ಎಂದು ಅದು ಹೇಳಿದೆ.
ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (BLA) ಮಜೀದ್ ಬ್ರಿಗೇಡ್ ಈ ದಾಳಿಯ ಜವಾಬ್ದಾರಿಯನ್ನ ವಹಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನವು ದೀರ್ಘಕಾಲದ ಹಿಂಸಾತ್ಮಕ ಬಂಡಾಯಕ್ಕೆ ನೆಲೆಯಾಗಿದೆ. ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ 60 ಬಿಲಿಯನ್ ಡಾಲರ್ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನ ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನ ನಡೆಸಿವೆ.
BREAKING : ‘ನೀಟ್ ಪಿಜಿ ಪರೀಕ್ಷೆ’ ಮುಂದೂಡಿಕೆ, ಹೊಸ ‘ವೇಳಾಪಟ್ಟಿ’ ಹೀಗಿದೆ! |NEET PG 2024 exam
ಗಮನಿಸಿ: ಮುಕ್ತ ವಿಶ್ವವಿದ್ಯಾನಿಲಯದ ವಿವಿಧ ಕೋರ್ಸಗಳಿಗೆ ಪ್ರವೇಕ್ಕೆ ಅರ್ಜಿ ಆಹ್ವಾನ