ಲಕ್ನೋ: ಉತ್ತರ ಪ್ರದೇಶದ ಶಾಮ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರೊಬ್ಬರು ಡ್ಯೂಟಿ ರೂಮ್ ಒಳಗೆ ನೃತ್ಯ ಮಾಡುತ್ತಿರುವ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆದ ನಂತರ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಅಫ್ಕಾರ್ ಸಿದ್ದಿಕಿ ಎಂದು ಗುರುತಿಸಲ್ಪಟ್ಟಿರುವ ವೈದ್ಯರ ಜೊತೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿರುವ ಮಹಿಳೆ ಅವರ ನಿಶ್ಚಿತ ವಧು ಎಂದು ವರದಿಗಳು ಹೇಳಿವೆ. ಕ್ಲಿಪ್ನಲ್ಲಿ, ದಂಪತಿಗಳು “ದಮ್ ದಮ್ ಮಸ್ತ್ ಹೈ” ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಅನುಷ್ಕಾ ಶರ್ಮಾ ಮತ್ತು ರಣವೀರ್ ಸಿಂಗ್ ಅಭಿನಯದ ಬಾಲಿವುಡ್ ಚಿತ್ರ ಬ್ಯಾಂಡ್ ಬಾಜಾ ಬಾರಾತ್ ನಿಂದ ಹಾಡಾಗಿದೆ.
शामली में सामुदायिक स्वास्थ्य केंद्र के ऊपरी मंजिल पर बने कमरे में डॉक्टर साहब का महिला के साथ डांस का वीडियो वायरल है,
CMO साहब ने डॉक्टर साहब से जवाब माँगा है, pic.twitter.com/lZpMzaBOeg— ANIL (@AnilYadavmedia1) November 21, 2025








