ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಭುಗಿಲೆದ್ದ ಘರ್ಷಣೆಗೆ ಸಂಬಂಧಿಸಿದಂತೆ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕೀರ್ ರಾಜಾ ಖಾನ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ವರದಿ ಆಗಿದೆ. ವಿಶೇಷವೆಂದರೆ, “ಐ ಲವ್ ಮುಹಮ್ಮದ್” ಅಭಿಯಾನವನ್ನು ಬೆಂಬಲಿಸಿ ಪ್ರಸ್ತಾವಿತ ಪ್ರದರ್ಶನವನ್ನು ಮುಂದೂಡುವ ಖಾನ್ ಅವರ ಘೋಷಣೆಯ ನಂತರ ಬರೇಲಿಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಪ್ರಾರಂಭವಾದವು.
ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಶುಕ್ರವಾರದ ಪ್ರಾರ್ಥನೆಯ ನಂತರ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಅಲಾ ಹಜರತ್ ದರ್ಗಾ ಮತ್ತು ಬರೇಲಿಯ ಮುಸ್ಲಿಂ ಮೌಲ್ವಿಯ ಮನೆಯ ಮುಂದೆ ‘ಐ ಲವ್ ಮೊಹಮ್ಮದ್’ ಫಲಕಗಳನ್ನು ಹಿಡಿದುಕೊಂಡಿದ್ದರು