Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ ಸಾಕು ಸಿಗಲಿದೆ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.!

ವಿದ್ಯಾರ್ಥಿಗಳೇ ನಿಮ್ಮ `TC’ ಕಳೆದುಹೋಗಿದೆಯೇ? ಚಿಂತೆಬೇಡ, ಈ ದಾಖಲೆಗಳಿದ್ದರೆ ಡುಪ್ಲಿಕೇಟ್ ಪಡೆಯಬಹುದು.!

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಲಿತ ಸಚಿವರನ್ನೇ ಗುರಿ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಉಗ್ರ ಹೋರಾಟ: ಸಣ್ಣ ಜಾತಿ ಸಂಘಟನೆಗಳ ಒಕ್ಕೂಟ ಎಚ್ಚರಿಕೆ
KARNATAKA

ದಲಿತ ಸಚಿವರನ್ನೇ ಗುರಿ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ಉಗ್ರ ಹೋರಾಟ: ಸಣ್ಣ ಜಾತಿ ಸಂಘಟನೆಗಳ ಒಕ್ಕೂಟ ಎಚ್ಚರಿಕೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ದಲಿತ ಸಮುದಾಯದ ಸಚಿವರನ್ನು ಸಂಪುಟದಿಂದ ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದು, ಇದೀಗ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಗುರಿಯಾಗಿಸಿ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲು ಭಾರಿ ಹುನ್ನಾರ ನಡೆಸಿದ್ದಾರೆ ಎಂದು ಅತಿ ಹಿಂದುಳಿದ ಸಣ್ಣ ಜಾತಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹನುಮೇಶ್ ಗುಂಡೂರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣದಿಂದ ಕೆ.ಎನ್. ರಾಜಣ್ಣ ಹಾಗೂ ಭ್ರಷ್ಟಚಾರ ಆರೋಪ ಹೊರಿಸಿ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಏಳು ಮಂದಿ ದಲಿತ ಸಚಿವರಿದ್ದರು. ಇದೀಗ ಸಂಖ್ಯಾಬಲ ಐದಕ್ಕೆ ಕುಸಿದಿದೆ. ಈ ಸರ್ಕಾರದಲ್ಲಿ ದಲಿತರನ್ನೇ ಗುರಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಷಡ್ಯಂತ್ರಗಳಿಗೆ ಅವಕಾಶ ನೀಡುವುದಿಲ್ಲ, ಹಾಗೇನಾದರೂ ಆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ನಡೆಯುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಬಲ ಖಾತೆಯನ್ನು ಕಸಿದು ಬೇರೆಯವರಿಗೆ ದೊರಕಿಸುವ ಷಡ್ಯಂತ್ರವೂ ನಡೆಯುತ್ತಿದೆ. ಸಚಿವ ತಿಮ್ಮಾಪುರ ಅವರು ಇಲಾಖೆಯಲ್ಲಿ ರಚನಾತ್ಮಕ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆಗೆ ಒತ್ತು ನೀಡಿದ್ದು, ಅಬಕಾರಿ ಪರವಾನಗಿಯಲ್ಲಿ ದಲಿತರಿಗೂ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡುತ್ತಿದ್ಧಾರೆ. ಇದನ್ನು ಸಹಿಸದೇ ಇಂತಹ ಷಡ್ಯಂತ್ರ ರೂಪಿಸಲಾಗಿದೆ ಎಂದರು.

ವ್ಯವಸ್ಥಿತವಾಗಿ ಲೋಕಾಯುಕ್ತರಿಂದ ಟ್ರ್ಯಾಪ್ ಮಾಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಸಚಿವರ ಜೊತೆಗೆ ಅವರ ಉತ್ರ ವಿನಯ್ ಅವರ ಹೆಸರನ್ನು ಸಹ ಇದರಲ್ಲಿ ಸೇರಿಸಲಾಗಿದೆ. ವಿನಯ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಸಹ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದರು.

ಈ ಬೆಳವಣಿಗೆ ಬಗ್ಗೆ ಸ್ವತಃ ಸಚಿವ ಆರ್.ಬಿ. ತಿಮ್ಮಾಪುರ ಅವರೇ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದ್ಧಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಹಿಂದುಳಿದ, ದಲಿತ ಸಚಿವರ ಮೇಲೆ ಇಲ್ಲ, ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಲು ಹುನ್ನಾರ ನಡೆಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸಂಗಮೇಶ್, ಉಪಾಧ್ಯಕ್ಷ ಬಿ.ಮಂಜುನಾಥ್. ಪದಾಧಿಕಾರಿಗಳಾದ ಪ್ರಭುರಾವ್ ತಾಳಮಡಗಿ, ಪ್ರದೀಪ್ ಹೆಗ್ಡೆ, ಶಿವರಾಜ್ ದೊಡ್ಡಿ, ಸಿ. ಸುಂದರ್, ಜಿ.ಎಂ. ಬಬಲಾದ ಮತ್ತಿತರರು ಉಪಸ್ಥಿತರಿದ್ದರು.

BREAKING: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಕೇಸ್: ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತ್ತಿಗೆ ಶಿಫಾರಸ್ಸು

BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ ಸಾಕು ಸಿಗಲಿದೆ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.!

2 Mins Read

ವಿದ್ಯಾರ್ಥಿಗಳೇ ನಿಮ್ಮ `TC’ ಕಳೆದುಹೋಗಿದೆಯೇ? ಚಿಂತೆಬೇಡ, ಈ ದಾಖಲೆಗಳಿದ್ದರೆ ಡುಪ್ಲಿಕೇಟ್ ಪಡೆಯಬಹುದು.!

1 Min Read

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

1 Min Read
Recent News

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ ಸಾಕು ಸಿಗಲಿದೆ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.!

ವಿದ್ಯಾರ್ಥಿಗಳೇ ನಿಮ್ಮ `TC’ ಕಳೆದುಹೋಗಿದೆಯೇ? ಚಿಂತೆಬೇಡ, ಈ ದಾಖಲೆಗಳಿದ್ದರೆ ಡುಪ್ಲಿಕೇಟ್ ಪಡೆಯಬಹುದು.!

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ ಸಾಕು ಸಿಗಲಿದೆ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.!

By kannadanewsnow57 KARNATAKA 2 Mins Read

ಬೆಂಗಳೂರು : ಭಾರತ ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತದೆ, ಪ್ರಮುಖ ಯೋಜನೆಗಳಲ್ಲಿ ಒಂದು ರೇಷನ್ ಕಾರ್ಡ್. ಇಂದಿಗೂ ಸಹ…

ವಿದ್ಯಾರ್ಥಿಗಳೇ ನಿಮ್ಮ `TC’ ಕಳೆದುಹೋಗಿದೆಯೇ? ಚಿಂತೆಬೇಡ, ಈ ದಾಖಲೆಗಳಿದ್ದರೆ ಡುಪ್ಲಿಕೇಟ್ ಪಡೆಯಬಹುದು.!

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

BIG ALERT: ತಂದೆ ಮಾಡಿದ ಸಾಲಕ್ಕೆ ಮಕ್ಕಳೇ ಹೊಣೆಗಾರರಾ? ಕಾನೂನು ನಿಯಮ ತಿಳಿಯಿರಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.