ನವದೆಹಲಿ: ಜಾತ್ರೆಯೊಂದರಲ್ಲಿ ಕೇಂದ್ರ ಸಚಿವರೊಬ್ಬರ ಮಗಳಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದಾರೆ. ಈ ಸಂಬಂಧ ದಾಖಲಾದಂತ ಪ್ರಕರಣದ ಹಿನ್ನಲೆಯಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಜಲ್ಲಾಂವ್ ಜಿಲ್ಲೆಯ ಜಾತ್ರೆಯೊಂದರಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆಗಳ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಭಾಗಿಯಾಗಿದ್ದರು. ಈ ವೇಳೆಯಲ್ಲಿ ಕೆಲ ಹುಡುಗರು ಕಿರುಕುಳ ನೀಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಈ ದೂರು ಸಲ್ಲಿಕೆಯ ವೇಳೆಯಲ್ಲಿ ನಾನು ಕೇಂದ್ರ ಸಚಿವೆಯಾಗಿ ಇಲ್ಲಿಗೆ ಬಂದಿಲ್ಲ. ಒಬ್ಬ ತಾಯಿಯ ಮಗಳಾಗಿ ನ್ಯಾಯ ಕೇಳಲು ಬಂದಿದ್ದಾಗಿ ಖಡ್ಸೆ ತಿಳಿಸಿದ್ದರು.
ಪೊಲೀಸರು ಈ ದೂರು ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಒಟ್ಟು 7 ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಮುಕ್ತೈನಗರ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾನತ್ ಪಿಂಗ್ಡೆ ತಿಳಿಸಿದ್ದಾರೆ.
ಉತ್ತರಾಖಂಡ್ ಹಿಮಪಾತ: ಮತ್ತೋರ್ವ ಕಾರ್ಮಿಕ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ | Uttarakhand Avalanche
‘ಸಾಗರ ಗ್ರಾಮಾಂತರ ಠಾಣೆ’ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯಲ್ಲೇ ‘ಸರಗಳ್ಳ ಅರೆಸ್ಟ್’