ಬೆಂಗಳೂರು: ಇಂದು ಬೀರೂರು, ಅಜ್ಜಂಪುರ ಮತ್ತು ಶಿವಾನಿ ರೈಲು ನಿಲ್ದಾಣಗಳನ್ನು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮೂಲಸೌಕರ್ಯಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಮರ್ಶೆ ನಡೆಸಿದರು.
ಮಾಧ್ಯಮ ಮತ್ತು ರೈಲ್ವೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ನಾಲ್ಕು ರಿಂದ ಐದು ವರ್ಷಗಳಲ್ಲಿ ದೇಶಾದ್ಯಂತ ಎಲ್ಲಾ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚಲಾಗುವುದು, ಇದರ ಮೂಲಕ ರೈಲು ಸಂಚಾರದ ಸುರಕ್ಷತೆ ಹಾಗೂ ಕಾರ್ಯದಕ್ಷತೆ ಹೆಚ್ಚಾಗಲಿದೆ ಎಂದು ಹೇಳಿದರು. ಅವರು ಭಾರತೀಯ ರೈಲ್ವೆಗೂ ಸೇನೆಯಷ್ಟೇ ಮಹತ್ವವಿದೆ ಎಂಬುದನ್ನು ಉಲ್ಲೇಖಿಸಿ, ದೇಶದ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯಲ್ಲಿ ರೈಲ್ವೆಯ ಪಾತ್ರ ಅಪಾರವಾಗಿದೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಬೀರೂರು ರೈಲ್ವೆ ನಿಲ್ದಾಣದ ಬಳಿ ರಸ್ತೆ ಕಳಸೇತುವೆ (ರೋಡ್ ಅಂಡರ್ ಬ್ರಿಡ್ಜ್) ನಿರ್ಮಾಣಕ್ಕೆ ಅನುಮೋದನೆ ನೀಡಿದರು, ಇದು ವಾಹನ ಸಂಚಾರದ ದಟ್ಟಣೆಯನ್ನು ಕಡಿಮೆಮಾಡಿ ಸುರಕ್ಷತೆಯನ್ನು ಹೆಚ್ಚಿಸಲಿದೆ. ಜೊತೆಗೆ, ಬೀರೂರು, ತರೀಕೆರೆ ಮತ್ತು ಕಡೂರು ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಈ ಯೋಜನೆಯು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯಗಳು ಮತ್ತು ಸುಧಾರಿತ ಮೂಲಸೌಕರ್ಯ ಒದಗಿಸಲಿದೆ.
ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ತಿಳಿಸಿದಾಗ, ಮಾನ್ಯ ಸಚಿವರು ಅವರಿಗೆ ಭರವಸೆ ನೀಡಿದರು.
ಈ ಪರಿಶೀಲನೆ ವೇಳೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ತರೀಕೆರೆ ಶಾಸಕರು ಜಿ ಹೆಚ್ ಶ್ರೀನಿವಾಸ, ಮೈಸೂರು ವಿಭಾಗದ ಎಡಿಆರ್‌ಎಮ್ ವಿನಾಯಕ ರಾ ನಾಯಕ, ಹಾಗೂ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
BIG NEWS: ಇನ್ಮುಂದೆ ದೇಶಾದ್ಯಂತ ‘BIS ಪ್ರಮಾಣೀಕೃತ ಹೆಲ್ಮೆಟ್’ ಧರಿಸುವುದು ಕಡ್ಡಾಯ: ಕೇಂದ್ರ ಸರ್ಕಾರ