ಮಂಡ್ಯ: ಜೂನ್.16ರಂದು ಮಂಡ್ಯದಲ್ಲಿ ಕೃತಜ್ಞತಾ ಸಮಾವೇಶದ ಮೂಲಕ ಕೇಂದ್ರ ಸಚಿವರಾದಂತ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಲು ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪಗೆ ಕಾನೂನು ಸಂಕಷ್ಟ ಹಿನ್ನಲೆಯಲ್ಲಿ ಹೆಚ್ಡಿಕೆ ಕೃತಜ್ಞತಾ ಸಮಾವೇಶ ಮುಂದೂಡಲಾಗಿದೆ. ಭಾನುವಾರ ಮಂಡ್ಯದಲ್ಲಿ ನಡೆಯಬೇಕಿದ್ದ ಹೆಚ್ಡಿಕೆ ಕೃತಜ್ಞತಾ ಸಮಾವೇಶ ನಡೆಸಲು ನಿಗದಿಯಾಗಿತ್ತು. ಜೂನ್ 16ರ ಸಂಜೆ 5 ಗಂಟೆಗೆ ಮಂಡ್ಯದ ಸ್ಟೇಡಿಯಂನಲ್ಲಿ ಏರ್ಪಡಿಸಿದ್ದ ಬೃಹತ್ ಅಭಿನಂದನಾ ಸಮಾರಂಭ. ನೆನ್ನೆಯಷ್ಟೆ ಕಾರ್ಯಕ್ರಮದ ಬಗ್ಗೆ ಮಂಡ್ಯದಲ್ಲಿ ಜೆಡಿಎಸ್ ನಾಯಕರ ಸುದ್ದಿಗೋಷ್ಠಿ ನಡೆಸಿದ್ದರು.
ಇದೀಗ ಮಾಜಿ ಸಿಎಂ ಯಡಿಯೂರಪ್ಪಗೆ ಕಾನೂನು ಸಂಕಷ್ಟ ಹಿನ್ನಲೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಹೆಚ್ಡಿಕೆ ಕೃತಜ್ಞತಾ ಸಮಾವೇಶಕ್ಕೆ ಯಡಿಯೂರಪ್ಪರನ್ನ ಆಹ್ವಾನವನ್ನು ದಳಪತಿಗಳಿಗೆ ನೀಡಲಾಗಿತ್ತು. ಬೃಹತ್ ಕೃತಜ್ಞತಾ ಸಮಾವೇಶ ಮುಂದೂಡಿ ಸರಳವಾಗಿ ಕಾರ್ಯಕ್ರಮ ಆಯೋಜನೆಯಾಗಿದೆ.
ನಾಳೆ ಮಂಡ್ಯಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ನಾಳೆ ನೂತನ ಸಂಸದರ ಕಚೇರಿ ಉದ್ಘಾಟನೆ ಕೂಡ ಮಾಡಲಿದ್ದಾರೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಾಗಿದೆ.
ನಾಳೆ ಮಂಡ್ಯಕ್ಕೆ ಕೇಂದ್ರ ಸಚಿವ ಹೆಚ್ಡಿಕೆ ಆಗಮನ ಹಿನ್ನಲೆಯಲ್ಲಿ ತಮ್ಮ ನಾಯಕರನ್ನ ಸ್ವಾಗತಿಸಲು ಜೆಡಿಎಸ್ ನಾಯಕರ ಸಿದ್ದತೆ ಕೈಗೊಂಡಿದ್ದಾರೆ. ಜಿಲ್ಲಾ ಗಡಿ ಭಾಗ ಮದ್ದೂರಿನ ನಿಡಘಟ್ಟ ಬಳಿ ಹೆಚ್ಡಿಕೆಗೆ ಸ್ವಾಗತ ನೀಡಲಾಗುತ್ತದೆ.
ಬಳಿಕ ಮಂಡ್ಯದ ಹನಕೆರೆಯಿಂದ ನೂತನ ಕೇಂದ್ರ ಸಚಿವರನ್ನ ವೆಲ್ ಕಮ್ ಮಾಡಿ ನಂತರ ಸಂಜಯ್ ವೃತ್ತದಿಂದ ಡಿಸಿ ಕಚೇರಿ ವರೆಗೆ ತೆರದ ವಾಹನದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ನೂತನ ಕಚೇರಿ ಉದ್ಘಾಟಿಸಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂಬುದಾಗಿ ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ರೈತರೇ ನಿಮ್ಮ ಬೆಳೆಗೆ ‘ಸೈನಿಕ ಹುಳು’ ಬಾಧೆಯೇ? ಜಸ್ಟ್ ಈ ನಿಯಂತ್ರಣ ಕ್ರಮವಹಿಸಿ
BIG NEWS: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಾಜ್ಯ ಮಟ್ಟದ ‘PDO ಜೇಷ್ಟತಾ ಪಟ್ಟಿ’ ಪ್ರಕಟ