Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಆಟೋ ಚಾಲಕ’ರಾದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ: ಎಲ್ಲಿ? ಏಕೆ ಗೊತ್ತೇ? ಇಲ್ಲಿದೆ ಡೀಟೆಲ್ಸ್
KARNATAKA

‘ಆಟೋ ಚಾಲಕ’ರಾದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ: ಎಲ್ಲಿ? ಏಕೆ ಗೊತ್ತೇ? ಇಲ್ಲಿದೆ ಡೀಟೆಲ್ಸ್

By kannadanewsnow0909/09/2024 7:09 PM

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಎಲೆಕ್ಟ್ರಿಕ್ ಬೈಕ್, ಆಟೋ ಚಲಾಯಿಸಿ ಗಮನ ಸೆಳೆದರು. ಅದು ಎಲ್ಲಿ.? ಏಕೆ ಅನ್ನೋ ಬಗ್ಗೆ ಮುಂದೆ ಓದಿ.

ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.

ನವದೆಹಲಿಯಲ್ಲಿ ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme) ಯೋಜನೆಯನ್ನು ಮುಂದುವರಿಸಲಾಗುವುದು ಎಂದರು.

ಸದ್ಯಕ್ಕೆ ಆಟೋ ಬಿಡಿಭಾಗ ತಯಾರಿಕಾ ಘಟಕಗಳು ಜಿಡಿಪಿಗೆ 2.7%ರಷ್ಟು ಕೊಡುಗೆ ನೀಡುತ್ತಿವೆ ಹಾಗೂ ಐದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದ ಅವರು; ಈ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಅವಕಾಶ ಇದೆ. ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳ ಪ್ರಕಾರ ನಾವು ವಿಕಸಿತ್ ಭಾರತ್ 2047 ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ದೇಶೀಯ ಆಟೋ ಬಿಡಿಭಾಗ ಉದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲದೆ; ದುಬಾರಿ ಸಾರಿಗೆ, ವೆಚ್ಚಗಳ ಒತ್ತಡಕ್ಕೆ ಸಿಲುಕಿದೆ. ಇಷ್ಟಾದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ರಪ್ತು ವಹಿವಾಟು ಬೆಳವಣಿಗೆಯನ್ನು ಕಂಡಿದೆ ಇಂದು ಅವರು ಹೇಳಿದರು.

ಈ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಉತ್ಪಾದನಾ ಸಂಪರ್ಕ ಉಪಕ್ರಮ (PLI) ಗಳನ್ನು ಸಾಕಷ್ಟು ಕೈಗೊಂಡಿದೆ. ಈ ಮೂಲಕ ₹74,850 ಕೋಟಿ ಹೂಡಿಕೆಯನ್ನು ಉತ್ತೇಜಿಸಲಾಗಿದೆ. ಈ ಪೈಕಿ ₹17,836 ಮೊತ್ತ 2024 ಮಾರ್ಚ್ ಹೊತ್ತಿಗೆ ಹೂಡಿಕೆ ಆಗಿದೆ. ಇದರ ಪರಿಣಾಮವಾಗಿ 30,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಇದು ಉದ್ಯಮಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂದು ಸಚಿವರು ಹೇಳಿದರು.

ಫೇಮ್ 3 ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು. ಅದುವರೆಗೂ ಆಟೋ ಕ್ಷೇತ್ರಕ್ಕೆ ಉತ್ತಜನ ನೀಡಲು EMPS ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಇವಿ ಆಟೋ ಕಂಡು ಬೆರಗಾದಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸ್ವತಹ ತಾವೇ ಚಲಾಯಿಸಿ, ಎಲ್ಲರ ಗಮನ ಸೆಳೆದರು.

ಸಮಾವೇಶದಲ್ಲಿ ACMA ಅಧ್ಯಕ್ಷೆ ಶ್ರದ್ಧಾ ಸೂರಿ ಮರ್ವಾಹ್, SIAM ಅಧ್ಯಕ್ಷ ವಿನೋದ ಅಗರ್ವಾಲ್, CII ಅಧ್ಯಕ್ಷ ಮತ್ತು ITC ವ್ಯವಸ್ಥಾಪಕ ನಿರ್ದೇಶಕ ಸಂಜೀವ ಪೂರಿ, ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ತಕೇಚಿ ಮತ್ತು SCALE ಅಧ್ಯಕ್ಷ ಡಾ. ಪವನ್ ಗೋಯಂಕ ಸೇರಿದಂತೆ ಉದ್ಯಮದ ಗಣ್ಯರು ಹಾಜರಿದ್ದರು.

BREAKING: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಹತ್ವದ ‘ಮೂರು ಮಸೂದೆ’ಗಳಿಗೆ ಅಂಕಿತ

‘ನಿಪುಣ ಕರ್ನಾಟಕ ಯೋಜನೆ’ ಜಾರಿ: ‘AI ತಂತ್ರಜ್ಞಾನ’ದೊಂದಿಗೆ ಕೌಶಲ್ಯ ತರಬೇತಿ

ಬೆಂಗಳೂರು ಕನ್ನಡಿಗರಿಗೆ ಸೇರಿದ್ದು: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ ಪೋಸ್ಟ್, ಟಾಕ್ ವಾರ್ | Bengaluru belongs to Kannadigas

Share. Facebook Twitter LinkedIn WhatsApp Email

Related Posts

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

16/02/2026 9:19 PM1 Min Read

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM1 Min Read

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM1 Min Read
Recent News

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM

ನಿಮ್ಗೆ ಗೊತ್ತಾ.? ‘ಎಂ.ಎಸ್ ಧೋನಿ’ಗೆ ಪ್ರತಿ ತಿಂಗಳು 70,000 ರೂ. ಪಿಂಚಣಿ ; ‘BCCI’ ನೀಡುವ ನಿವೃತ್ತಿ ಸೌಲಭ್ಯಗಳಿವು.!

16/02/2026 9:42 PM
State News
KARNATAKA

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

By kannadanewsnow0916/02/2026 9:19 PM KARNATAKA 1 Min Read

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ತಯಾರಿಸಲಾಗುತ್ತಿದೆ. ಸಾಮಾಜಿಕ…

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ತಪ್ಪದೇ ಹೀಗೆ ಮಾಡಿ, ನಿಮ್ಮ ಸಮಸ್ಯೆಗಳೆಲ್ಲ ದೂರ ಗ್ಯಾರಂಟಿ

16/02/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.