ಮಂಡ್ಯ: ನಾಳೆ, ನಾಡಿದ್ದು ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಇಲ್ಲಿ ಸಾರ್ವಜನಿಕರ ಅಹವಾಲು, ದೂರುಗಳನ್ನು, ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆ ನಿವಾರಿಸೋ ನಿಟ್ಟಿನಲ್ಲಿ ಕ್ರಮವಹಿಸಲಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನಮ್ಮ ಪೂಜ್ಯ ತಂದೆಯವರಾದ ಹೆಚ್.ಡಿ ದೇವೇಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ ಆರಂಭಿಸಿ ಜಿಲ್ಲೆಗಳಿಗೇ ಸರಕಾರವನ್ನು ಕೊಂಡೊಯ್ದಿದ್ದು ಇತಿಹಾಸ. ಜನರ ಆಶೀರ್ವಾದ, ದೈವದ ಕೃಪೆಯಿಂದ 2006ರಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಜನತಾ ದರ್ಶನ, ಗ್ರಾಮ ವಾಸ್ತವ್ಯದ ಮೂಲಕ ಸರಕಾರವನ್ನು ಗ್ರಾಮ ಗ್ರಾಮಕ್ಕೂ ತೆಗೆದುಕೊಂಡು ಹೋದೆ ಎಂದಿದ್ದಾರೆ.
ಆ ನಂತರ ಅಧಿಕಾರ ಇರಲಿ, ಇಲ್ಲದಿರಲಿ.. ಎಲ್ಲಾ ಸಂದರ್ಭದಲ್ಲಿಯೂ ಜನತಾ ಪ್ರಭುಗಳ ದರ್ಶನವನ್ನು ನಾನು ತಪ್ಪಿಸಿಲ್ಲ. ಅದು ನನ್ನ ಪಾಲಿಗೆ ನಿತ್ಯ ಕಾಯಕ. ಈಗ ನಾಡಿನ ಜನರ ಹಾರೈಕೆ, ಮಂಡ್ಯ ಮಹಾಜನತೆಯ ಆಶೀರ್ವಾದ ಹಾಗೂ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಪ್ರೀತಿ, ವಿಶ್ವಾಸದಿಂದ ಕೇಂದ್ರದಲ್ಲಿ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾನು ಎಲ್ಲೇ ಇದ್ದರೂ ನಾಡಿನ ಜನತೆಗೆ ನನ್ನ ಹೃದಯದಲ್ಲಿ ಪೂಜ್ಯ ಸ್ಥಾನವಿದೆ. ನಿಮ್ಮಗಳ ಸೇವೆಯೇ ನನ್ನ ಧರ್ಮ. ಈ ಸದುದ್ದೇಶದಿಂದ ನಾಳೆ (ಶುಕ್ರವಾರ) ಬೆಳಗ್ಗೆ 10 ಗಂಟೆಗೆ ಮಂಡ್ಯದಲ್ಲಿ ಸಕ್ಕರೆ ನಾಡಿನ ಜನರಿಗಾಗಿ ಜನತಾ ದರ್ಶನ ಹಮ್ಮಿಕೊಂಡಿದ್ದೇನೆ. ನಿಮ್ಮ ಸಮಸ್ಯೆ, ಕುಂದುಕೊರತೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬನ್ನಿ, ನಾನಿದ್ದೇನೆ.. ನಿಮ್ಮ ಸಮಸ್ಯೆ ಕೇಳಿಸಿಕೊಳ್ಳುತ್ತೇನೆ. ಆಡಳಿತ ಯಂತ್ರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
•||ಕುಮಾರಣ್ಣನ ಜನತಾ ದರ್ಶನ||•
•ನಿಮ್ಮ ಮನೆ ಬಾಗಿಲಿಗೆ ನಿಮ್ಮ ಮನೆಮಗ ಕುಮಾರಣ್ಣ•
ಮಂಡ್ಯ ಲೋಕಸಭೆ ಕ್ಷೇತ್ರದ ಜನತೆಯಲ್ಲಿ ವಿನಮ್ರ ವಿನಂತಿ..
ನಮ್ಮ ಪೂಜ್ಯ ತಂದೆಯವರಾದ ಮಾನ್ಯ ಶ್ರೀ @H_D_Devegowda ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ ಆರಂಭಿಸಿ ಜಿಲ್ಲೆಗಳಿಗೇ ಸರಕಾರವನ್ನು ಕೊಂಡೊಯ್ದಿದ್ದು ಇತಿಹಾಸ.
ಜನರ… pic.twitter.com/ag4pCVXQiS
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 4, 2024
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಗುಡ್ ನ್ಯೂಸ್
ಶಿವಮೊಗ್ಗ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ’ನಿಂದ ‘ಮಹಿಳಾ ಪೌರ ಕಾರ್ಮಿಕ’ರ ಮೇಲೆ ಹಲ್ಲೆ | Pourakarmikas