ಬೆಂಗಳೂರು : ಬೆಂಗಳೂರಿನ ಗಂಗೇನಹಳ್ಳಿ ಸರ್ಕಾರಿ ಜಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅತ್ತೆ ಹೆಸರಿಗೆ ಡಿನೋಟಿಫೈ ಆಗಿದ್ದು, ಭಾಮೈದನ ಹೆಸರಿಗೆ ರಿಜಿಸ್ಟರ್ ಆಗಿದೆ ಎಂದು ಕಾಂಗ್ರೆಸ್ ಇತ್ತೀಚಿಗೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸಚಿವ HD ಕುಮಾರಸ್ವಾಮಿ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಹೌದು ಇಂದು ಏರ್ಪೋರ್ಟ್ ನಿಂದ ನೇರವಾಗಿ ಲೋಕಾಯುಕ್ತ ಕಚೇರಿಗೆ HD ಕುಮಾರಸ್ವಾಮಿ ಆಗಮಿಸಿದ್ದಾರೆ. ಸಂಜೆ ಒಳಗೆ ಹಾಜರಾಗುವುದಾಗಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದರು. ಅದರಂತೆ ಲೋಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಂದ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಇಂದು ಸಂಜೆ ಎಚ್ ಡಿ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಿದ್ದಾರೆ.
2007ರಲ್ಲಿ ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕೆರ ಭೂಮಿಯನ್ನು ಸತ್ತವರ ಹೆಸರಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫೈ ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಈ ಕುರಿತು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿತ್ತು. ಆದರೆ, 2021ರಿಂದ ಲೋಕಾಯುಕ್ತದಿಂದ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿದ್ದಾರೆ.
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ. ಆದರೆ, ಸಿಎಂ ಆಗಿದ್ದ ವೇಳೆ ಕುಮಾರಸ್ವಾಮಿ ಡಿನೋಟಿಫಿಕೇಶನ್ ಗೆ ಸೂಚಿಸುತ್ತಾರೆ.
2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ಆನಂತರ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್ ಆಗುತ್ತದೆ. 2008ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಡಿನೋಟಿಫೈಯಿಂದ ಕೈಬಿಡುವಂತೆ ಸೂಚಿಸುತ್ತಾರೆ. ಈ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಪಬ್ಲಿಕ್ ಸರ್ವೀಸ್ ಹುದ್ದೆಗಳಿಗೆ ಬರಲು ಬ್ರಾಹ್ಮಣರು ಹೆಚ್ಚಿನ ಆಸಕ್ತಿ ತೋರಬೇಕು: ಸಚಿವ ದಿನೇಶ್ ಗುಂಡೂರಾವ್