ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿರಿಯ ಸಹೋದರಿ ರಾಜುಬೆನ್ ಸೋಮವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆ ಶ್ವಾಸಕೋಶ ಕಸಿ ಪ್ರಕ್ರಿಯೆಯ ನಂತರ ರಾಜುಬೆನ್ ಮುಂಬೈ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು.
ಈ ಬೆಳವಣಿಗೆಯ ನಂತರ, ಶಾ ಗುಜರಾತ್ನಲ್ಲಿ ನಡೆಯಬೇಕಿದ್ದ ಎರಡು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು.
ತಮ್ಮ ಹಿರಿಯ ಸಹೋದರಿಯ ನಿಧನದ ನಂತರ, ಶಾ ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಅಮಿತ್ ಶಾ ಗುಜರಾತ್ನಲ್ಲಿ ಎರಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಒಂದು ಬನಸ್ಕಾಂತ ಜಿಲ್ಲೆಯ ದೇವದರ್ನ ಬನಾಸ್ ಡೈರಿಯಲ್ಲಿ ಮತ್ತು ಇನ್ನೊಂದು ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ.
ಶಾ ಅವರು ಬನಾಸ್ ಡೈರಿಯ ವಿವಿಧ ಯೋಜನೆಗಳು ಮತ್ತು ಉತ್ಪನ್ನಗಳನ್ನು ಉದ್ಘಾಟಿಸಬೇಕಿತ್ತು ಮತ್ತು ಬೆಳಿಗ್ಗೆ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಬೇಕಿತ್ತು ಆ ಎಲ್ಲಾ ಕಾರ್ಯಕ್ರಮಗಳನ್ನು ಅವರ ಹಿರಿಯ ಸಹೋದರಿ ನಿಧನದ ಕಾರಣ ರದ್ದುಪಡಿಸಲಾಗಿದೆ.
ಬನಸ್ಕಾಂತ ಕಾರ್ಯಕ್ರಮದಲ್ಲಿ ಹಾಜರಿದ್ದವರಲ್ಲಿ ಒಬ್ಬರಾದ ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷ ಅಜಯ್ ಪಟೇಲ್, ಅಮಿತ್ ಶಾ ಅವರು ತಮ್ಮ ಅಕ್ಕನ ಸಾವಿನಿಂದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
BIG NEWS : ಹಾನಗಲ್ ಅತ್ಯಾಚಾರ ಪ್ರಕರಣ : ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಮ ನನ್ನ ಕನಸಿನಲ್ಲಿ ಬಂದು, ಅಯೋಧ್ಯೆಗೆ ಹೋಗುವುದಿಲ್ಲ ಅಂಥ ತಿಳಿಸಿದ್ದಾನೆ: ತೇಜ್ ಪ್ರತಾಪ್ ಯಾದವ್